ಹುಟ್ಟಿದೆ ನೀನು ಭಾರತದ ಮಗನಾಗಿ.
ಸ್ವತಂತ್ರಕ್ಕೆ ಹೋರಾಡುವ ಧೀಮಂತ ವ್ಯಕ್ತಿಯಾಗಿ.
ಬ್ರಿಟಿಷರ ಎದೆಯನ್ನು ನಡುಗಿಸುವ ಶಕ್ತಿಯಾಗಿ.
ನಾವು ನಮ್ಮವರೆಂಬ ಮಮತೆಗಾಗಿ.!!೧!!
ಬ್ರಿಟಿಷರಿಂದ ವದೆಯ ತಿಂದೆ.
ಭಾರತಕ್ಕೆ ಸ್ವಾತಂತ್ರ್ಯವ ನೀನು ತಂದೆ.
ಉಪವಾಸ ಹೋರಾಟದಲ್ಲೂ ನೀನು ಮುಂದೆ.
ನಿಮ್ಮ ಆದರ್ಶ ವ್ಯಕ್ತಿತ್ವವು ನಮ್ಮ ಜೀವನಕ್ಕೆ ಒಂದೇ.!!೨!!
ಶಾಂತಿದೂತನೆಂದು ಕರೆಸಿಕೊಂಡೆ.
ಚರಕದಿಂದ ತಯಾರಿಸಿದ ಬಟ್ಟೆಯನ್ನು ಹಾಕಿಕೊಂಡೆ.
ದೀನ ದಲಿತರ ಕಷ್ಟವನ್ನು ಅರಿತುಕೊಂಡೆ.
ಭಾರತದ ಹೆಮ್ಮೆಯ ಮಗನಿಸಿಕೊಂಡೆ.!!೩!!
ಹಗಲು ಇರುಳು ಎನ್ನದೆ ಹೋರಾಡಿದೆ.
ಹೆಂಡತಿ ಮಕ್ಕಳೊಡನೆ ಗುದ್ದಾಡಿದೆ.
ವರ್ಣ ಪದ್ಧತಿಯ ವಿರುದ್ಧ ಹೋರಾಡಿದೆ.
ಸ್ವತಂತ್ರದ ಹೋರಾಟಕ್ಕೆ ಕಿಚ್ಚು ನೀ ಹಚ್ಚಿದೆ.!!೪!!
ಉಪ್ಪಿನ ತೆರಿಗೆ ವಿರುದ್ಧ ಹೋರಾಡಿದೆ.
ದಂಡಿ ಯಾತ್ರೆ ಯನ್ನು ನೀ ಕೈಗೊಂಡೇ.
ವಿದೇಶಿ ವಸ್ತುಗಳನ್ನು ತಿರಸ್ಕರಿಸಿದೆ.
ಚರಕದ ಬಟ್ಟೆಗಳಿಗೆ ಪ್ರೋತ್ಸಾಹ ನೀಡಿದೆ.!!೫!!
ಹಲವು ದುಂಡು ಮೇಜಿನ ಸಭೆಗಳು.
ಅದರಲ್ಲಿದ್ದರೂ ಭಾರತ ಸೈನಾಧಿಪತಿಗಳು.
ಎಲ್ಲರಿಂದ ಮೂಡಿದ ಒಮ್ಮತವು.
ಗಾಂಧಿಯಿಂದ ತಯಾರಾದ ನಮ್ಮ ಬಾವುಟವು.!!೬!!
-ಎಂ ಚಂದ್ರಶೇಖರಚಾರಿ,ಶಿಕ್ಷಕರು
ವಿಶ್ವಮಾನವ ಪ್ರೌಢಶಾಲೆ
ಸೀಬಾರ ಗುತ್ತಿ ನಾಡು ಚಿತ್ರದುರ್ಗ