ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಮತ್ತು ಹರವಾಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಶಾ ಕಿರಣ ಅಭಿಯಾನದಡಿಯಲ್ಲಿ ಉಚಿತವಾಗಿ ಹಲವಾರು ವ್ಯಕ್ತಿಗಳಿಗೆ ಸುಮಾರು ಮೂನ್ನೂರ ಐವತ್ತು(೩೫೦) ಕನ್ನಡಕಗಳನ್ನು ತಾಲೂಕ ವೈದ್ಯಾಧಿಕಾರಿಗಳಾದ ಡಾ.ಸಿದ್ದು ಪಾಟೀಲ್ ಹಾಗೂ ಸಿಬ್ಬಂದಿಯವರು ವಿತರಿಸಿದರು.
ಈ ಸಂದರ್ಭದಲ್ಲಿ ಹರವಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹಾಂತೇಶ ಮದರಿ ಯವರು ಸರ್ಕಾರದ ಕೆಲಸ ದೇವರ ಕೆಲಸ ಇದನ್ನು ನಮ್ಮ ತಾಲೂಕು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ದೊಡ್ಡ ಮತ್ತು ಮೌಲ್ಯಯುಕ್ತ ಕಾರ್ಯವಾಗಿದೆ ಹಾಗಾಗಿ ಇಂಥ ಸರ್ಕಾರಿಯ ಯೋಜನೆಗಳು ಬಡವರಿಗೆ ಮತ್ತು ಇತರೆ ಸಾಮಾನ್ಯ ಜನರಿಗೆ ಸಲ್ಲುತ್ತಿರುವುದು ನನಗೆ ಖುಷಿಯಾಗಿದೆ ಎಂದು ಮಹಾಂತೇಶ ರವರು ಮನದಾಳದ ಮಾತುಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಮಂದೇವಾಲ ಪಿ ಹೆಚ್ ಸಿ ಡಾ. ರೇಣುಕಾ ದೇವಿ,ನೇತ್ರಾಧಿಕಾರಿಗಳಾದ ರವಿಶಂಕರ ಸಿ ಹೆಚ್ ಸಿ ಯಡ್ರಾಮಿ,ಅರ್ಚನಾ ಪಿ ಹೆಚ್ ಸಿ ಓ ಹಾಗೂ ಆಶಾ ಕಾರ್ಯಕರ್ತೆಯರು ಈ ಅಭಿಯಾನದಲ್ಲಿ ಭಾಗಿಯಾಗಿದ್ದರು.
ವರದಿ: ಚಂದ್ರಶೇಖರ ಪಾಟೀಲ್