ವಿಜಯಪುರ ಜಿಲ್ಲೆಯ ಶರಣರ ನಾಡು ಸಂತರ ನೆಲಬೀಡು ಜಿಲ್ಲೆಯ ಐತಿಹಾಸಿಕ ನಗರ ನೂತನ ತಾಳಿಕೋಟೆ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಗಳವಾರ ಪಟ್ಟಣದಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಡಾ.ಗುರುಪಾದ ಘಿವಾರಿ ಅವರ ಭವ್ಯ ಮೆರವಣಿಗೆ ಸಕಲವಾದ್ಯ ಮೇಳದೊಂದಿಗೆ ನಡೆಯಿತು.
ಮಂಗಳವಾರ ಮುಂಜಾನೆ ಪಟ್ಟಣದ ಪ್ರವಾಸಿ ಮಂದಿರದಿಂದ ನಡೆದ ಮೆರವಣಿಗೆ ಚಾಲನೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಾವದಗಿ ಬೃಹನ್ ಮಠದ ಪೂಜ್ಯಶ್ರೀ ರಾಜೇಂದ್ರ ಒಡೆಯರ ಶಿವಾಚಾರ್ಯರು ಹಾಗೂ ಬೇಡ ಜಂಗಮ ಸಮಾಜದ ಗೌರವಾಧ್ಯಕ್ಷ ಜ್ಯೋತಿಷ್ಯ ರತ್ನ ಪೂಜ್ಯಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ವಹಿಸಿದ್ದರು.
ಬಸವಣ್ಣ ,ಸ್ವಾಮಿ ವಿವೇಕಾನಂದ ,ಅಂಬಿಗರ ಚೌಡಯ್ಯ, ಓಬವ್ವ, ಸಂಗೊಳ್ಳಿ ರಾಯಣ್ಣ ,ಅಕ್ಕಮಹಾದೇವಿ, ಪದ್ಮ ವಿಭೂಷಣ ವೇಷದಾರಿಗಳು ಗಮನ ಸೆಳೆದರು, ಕನ್ನಡದ ಧ್ವಜಗಳು ಕನ್ನಡಾಂಬೆಯ ಚಿತ್ರಗಳು ರಾರಾಜಿಸಿದವು.
ವಿವಿಧ ಕಲಾ ತಂಡಗಳು ಮೆರವಣಿಗೆ ಅದ್ದೂರಿಯಾಗಿ ಜರುಗಿದವು.
ವರದಿ: ಉಸ್ಮಾನ ಬಾಗವಾನ