ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹೊಗರನಾಳ ಗ್ರಾಮದ ಹನುಮಂತ ದಾಸರ ಇವರು ಅಮೇರಿಕಾದ ಮೆಕ್ಸಿಕೋ ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ಮದರ್ ಥೆರೇಸಾ ” ಪ್ರಶಸ್ತಿಗೆ ಭಾಜನಾರಾಗಿದ್ದಾರೆ. ಇಂಟರ್ನ್ಯಾಷನಲ್ ಪ್ರೊಫೆಷನಲ್ ಅಕಾಡೆಮಿ ಯು.ಕೆ ಲಿಮಿಟೆಡ್. ಹಾಗೂ ಭಾರತ್ ಸೆಂಟರ್ ಫಾರ್ ವೆಕೇಷನಲ್ ಟ್ರೇನಿಂಗ್ ಇಂಡಿಯಾ ವತಿಯಿಂದ ಕೊಡ ಮಾಡುವ 2024ನೇ ಸಾಲಿನ “ಅಂತಾರಾಷ್ಟ್ರೀಯ ಮದರ್ ಥೆರೆಸಾ” ಪ್ರಶಸ್ತಿಯನ್ನು ಸೆ.26 ರಂದು ಪ್ರಶಸ್ತಿ ನೆನಪಿನ ಕಾಣಿಕೆ ಮತ್ತು ಫಲಕ ನೀಡಿ ಗೌರವಿಸಲಾಗಿರುತ್ತದೆ.
ನಾಡಿನುದ್ದಕ್ಕೂ ಇವರು ಸಲ್ಲಿಸುತ್ತಿರುವ ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ ಮತ್ತು ಪತ್ರಿಕಾ ರಂಗದಲ್ಲಿನ ಸೇವೆ ಪರಿಗಣಿಸಿ 2024ನೇ ಸಾಲಿನ “ದಿ ಬೆಸ್ಟ್ ಸೋಷಿಯಲ್ ವರ್ಕರ್ ” ಎಂದು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಚೇರ್ಮನ್ ಡಾ. ಕಟ್ಟಾಬೊಮ್ಮನ್ ಹಾಗೂ ಬೋರ್ಡ್ ಡೈರೆಕ್ಟರ್ ಡಾ. ಇಲ್ಹಾಮ್ ಮಾರಿಕಾರ ತಿಳಿಸಿರುತ್ತಾರೆ.
ಯುವ ಕವಿ ,ಸಾಹಿತಿ, ಬರಹಗಾರರಾದ ಶ್ರೀ ಹನುಮಂತ ದಾಸರ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆ ಅವರ ಕುಟುಂಬಸ್ಥರು, ಗುರುಗಳು, ಗೆಳೆಯರು ಹಾಗೂ ಆತ್ಮೀಯರು ಹರ್ಷ ವ್ಯಕ್ತ ಪಡಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.