ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಮರಿದಾಸನಹಳ್ಳಿ ಗ್ರಾಮ ಪಂಚಾಯಿತಿ ಐದು ಗ್ರಾಮಗಳು ಒಳಗೊಂಡ ಪಂಚಾಯಿತಿ ಅಗಿದ್ದು ಪಂಚಾಯಿತಿ ಕೆಂದ್ರ ಸ್ಥಾನವಾದ ಮರಿದಾಸನಹಳ್ಳಿ ಗ್ರಾಮದಿಂದ ಬಿ ಹೊಸಹಳ್ಳಿ ಗ್ರಾಮಕ್ಕೆ ಹೋಗುವ ಮತ್ತು ಪುಣ್ಯ ಸ್ಥಳವಾದ ಬಿಲ್ವಾವನಂತ್ರಕ್ಕೆ ಸಂಪರ್ಕವನ್ನು ಕಲ್ಪಿಸುವ ರಸ್ತೆಯು ಸಂಪೂರ್ಣ ಗುಂಡಿಗಳಿಂದ ಕೂಡಿದ್ದು ಮಳೆ ಬಂದರೆ ಮರಿದಾಸನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಿಂದ ಸುಮಾರು 400 ಮೀಟರ್ ದೂರ ರಸ್ತೆಯಲ್ಲಿ 4 ಆಡಿಯಷ್ಟು ನೀರು ತುಂಬಿ ಸಾರ್ವಜನಿಕರು ಓಡಾಡಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಇದರಲ್ಲಿ ವಿಶೇಷ ಏನೆಂದರೆ ಮಾಜಿ ಸಚಿವರಾದ ವೆಂಕಟರಮಣಪ್ಪ ಮತ್ತು ಹಾಲಿ ಶಾಸಕರಾದ ಎಚ್ ವಿ ವೆಂಕಟೇಶ್ ರವರು ಇದೆ ಗ್ರಾಮ ಪಂಚಾಯಿತಿಯವರು ಆದರೂ ಸಹ ಶಾಸಕರ ತವರು ಪಂಚಾಯಿತಿಯಲ್ಲಿ ಅಭಿವೃದ್ಧಿ ಶೂನ್ಯ ಈ ಸಂಬಂಧ ಸ್ಥಳೀಯ ಪ್ರತಿನಿಧಿಗಳು ಸಹ ಕಣ್ಮುಚ್ಚಿ ಕುಳಿತಿದ್ದಾರೆ, ಈ ಸಂಬಂಧ ಮರಿದಾಸನಹಳ್ಳಿ ಗ್ರಾಮದ ವಾಸಿಯಾದ ಕೆಂಚಪ್ಪರವರು”ನಮ್ಮ ಗ್ರಾಮದಲ್ಲಿ ರಸ್ತೆ ಒಂದೇ ಅಲ್ಲ ಮೂಲಭೂತ ಸೌಕರ್ಯಗಳ ಕೊರತೆ ತುಂಬಾ ಇದೆ ಉದಾಹರಣೆಗೆ ಚರಂಡಿ ಕುಡಿಯುವ ನೀರು,ಸಿ.ಸಿ ರಸ್ತೆ, ಸಾರ್ವಜನಿಕ ಶೌಚಾಲಯ ಮತ್ತು ಮುಖ್ಯವಾಗಿ ಗ್ರಾಮದಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದ್ದು ಅಧಿಕಾರಿಗಳು ನೋಡಿ ನೋಡದಂತೆ ಹೋಗುತ್ತಿದ್ದರೆ ಮತ್ತು ಶಾಸಕರು ಚುನಾವಣಾ ಸಮಯದಲ್ಲಿ ಮಾತ್ರ ಗ್ರಾಮಕ್ಕೆ ಭೇಟಿ ಕೊಡುತ್ತಾರೆ ಅಷ್ಟೆ ನಂತರ ಐದು ವರ್ಷ ಈ ಕಡೆ ತಿರುಗುವುದಿಲ್ಲ” ಎಂದು ನಮ್ಮ ಪತ್ರಿಕೆಗೆ ಅವರ ಅಭಿಪ್ರಾಯ ತಿಳಿಸಿದರು.ಅದರೆ ಶಾಸಕರು ತಮ್ಮ ತವರು ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದು ಇನ್ನು ತಾಲ್ಲೂಕಿನಾದ್ಯಂತ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ ಮತ್ತು ಅಭಿವೃದ್ಧಿ ಮಾಡುತ್ತಾರೆಂದು ನೋಡ ಬೇಕಾಗಿದೆ.
ವರದಿ:ಪೃಥ್ವಿರಾಜು ಜಿ.ವಿ