ಪಾವಗಡ : ಭಾರತೀಯ ಪರಿವರ್ತನ ಸಂಘ – ಬಿಪಿಎಸ್ ವತಿಯಿಂದ ರಾಜ್ಯಾಧ್ಯಕ್ಷರು, ಹಾಗೂ ಹೈಕೋರ್ಟ್ ವಕೀಲರಾದ ಪ್ರೊ. ಹರಿರಾಮ್ ರವರ ಮಾರ್ಗದರ್ಶನದಲ್ಲಿ ಪಾವಗಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತ 53,57 ಅರ್ಜಿ ಸಲ್ಲಿಸಿರುವ ರೈತರಿಗೆ ಸರ್ಕಾರದಿಂದ ಸಾಗುವಳಿ ಚೀಟಿ ಕೊಡಿಸಲು, ನಿಡಗಲ್ಲು ಹೋಬಳಿ, ಸಿ ಕೆ ಪುರ ಗ್ರಾಮದ ಡಾ.ಬಾಬು ಜಗಜೀವನ ರಾಮ್ ಭವನದಲ್ಲಿ ಎರಡನೇ ಪೂರ್ವಭಾವಿ ಸಭೆ ನಡೆಯಿತು, ಈ ಸಭೆಗೆ ವಿವಿಧ ಗ್ರಾಮಗಳಿಂದ ನೂರಾರು ರೈತರು 57 ಅರ್ಜಿಯೊಂದಿಗೆ ಭಾಗವಹಿಸಿದ್ದರು, ಇವರಿಗೆ ಕಾನೂನಾತ್ಮಕವಾಗಿ ಸರ್ಕಾರದಿಂದ ಸಾಗುವಳಿ ಚೀಟಿ ಪಡೆದುಕೊಳ್ಳುವ ಕಾನೂನು ಮಾರ್ಗಗಳನ್ನು ಸವಿವರವಾಗಿ ಬಿಪಿಎಸ್ ರಾಜ್ಯ ಮುಖಂಡರು ಹಾಗೂ ವಕೀಲರು ಆದ ದೇವನಹಳ್ಳಿಯ ಮಹೇಶ್ ದಾಸ್ ರವರು ಕಾನೂನು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದೇವನಹಳ್ಳಿಯ ಮತ್ತೊಬ್ಬ ವಕೀಲರಾದ ಗುರು ರವರು, ಬಿಪಿಎಸ್ ತುಮಕೂರು ಜಿಲ್ಲಾಧ್ಯಕ್ಷ, ಚಿಕ್ಕತಿಮ್ಮನಹಟ್ಟಿ ಗ್ರಾಮದ ಹೆಚ್ ಕೆಂಚರಾಯ, ತಾಲೂಕು ಸಂಯೋಜಕರಾದ ಹರಿಹರಪುರ ಗ್ರಾಮದ ಎಚ್ ಡಿ ಈರಣ್ಣ, ಹನುಮಂತರಾಯಪ್ಪ, ನಾಗರಾಜು, ಸಿ ಕೆ ಪುರ ಗ್ರಾಮದ ಹನುಮಂತರಾಯಪ್ಪ, ಪಾವಗಡ ತಾಲೂಕಿನ ವಿವಿಧ ಗ್ರಾಮಗಳಿಂದ ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಿರುವ ರೈತರು ಭಾಗವಹಿಸಿದ್ದರು, ತುಮಕೂರು ಜಿಲ್ಲಾಧ್ಯಕ್ಷ ಎಚ್ ಕೆಂಚರಾಯ ಮಾತನಾಡಿ ಸಾಗುವಳಿ ಚೀಟಿಗೆ 57 ಅರ್ಜಿ ಹಾಕಿರುವ ತಾಲೂಕಿನ ಎಲ್ಲಾ ಸಮುದಾಯದ ರೈತರಿಗೆ ಬಗರ್ ಹುಕ್ಕುಂ ಕಮಿಟಿಯ ನಿಯಮಾವಳಿ ಪ್ರಕಾರ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ಕೊಡಬೇಕೆಂದು ಪ್ರೊ ಹರಿರಾಮ್ ರವರ ನೇತೃತ್ವದಲ್ಲಿ ಅತಿ ಶೀಘ್ರದಲ್ಲೇ ಪಾವಗಡ ತಾಲೂಕಿನಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.