ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕಸಬಾ ಹೋಬಳಿಯ ವೆಂಕಟಾಪುರ ಗ್ರಾಮದಲ್ಲಿರುವ ಕವಿತಾ ವೈನ್ಸ್ ಅಂಗಡಿಯನ್ನು ಬೇರೆಡೆಗೆ ವರ್ಗಾಯಿಸುವಂತೆ ಅನೇಕ ಭಾರಿ ಮನವಿ ಮಾಡಿದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿ ಪ್ರಕಾಶ್ ಮಾತನಾಡಿ ನಮ್ಮ ಮನೆಯ ಪಕ್ಕದಲ್ಲೇ ಇರವ ಸಿದ್ದರಾಜು ರವರ ಮಾಲೀಕತ್ವದ ಕವಿತಾ ವೈನ್ಸ್ ಅಂಗಡಿಯನ್ನು ಮೂರ ನಾಲ್ಕು ವರ್ಷದಿಂದ ತೆರವುಗೊಳಿಸುವಂತೆ ಮನವಿ ಮಾಡಿದ್ದರೂ ಸಹ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಅಕ್ಕ ಪಕ್ಕದ ಮನೆಯ ಮಹಿಳೆಯರು, ಮಕ್ಕಳು ಹೊರಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಡಿದ ಮತ್ತಿನಲ್ಲಿ ಮನೆಯ ಬಾಗಿಲಲ್ಲೇ ಶೌಚಾ ಮಾಡವುದು. ಮಹಿಳೆ, ಹೆಣ್ಣು ಮಕ್ಕಳು ಮುಂದೆಯೇ ರೀಸಸ್ ಮಾಡುವುದು, ಶಾಲಾ – ಕಾಲೇಜಿನಿಂದ ಬರುವ ವೇಳೆ ಚುಡಾಯಿಸುವುದು ಈ ಬಗ್ಗೆ ಕೇಳಿದರೆ ಅಸಭ್ಯವಾಗಿ ವರ್ತಿಸುವುದು ಅವಾಚ್ಯ ಶಬ್ದಗಳಿಂದ ಬೈಯುವುದು ಈ ರೀತಿಯ ಅನೇಕ ಘಟನೆಗಳು ನಡೆದಿವೆ. ಅನೇಕ ಬಾರಿ ಅಲ್ಲಿಗೆ ಬರುವ ಮಧ್ಯ ಸೇವಿಸುವವರಿಗೂ ಹಾಗೂ ಮಹಿಳೆಯರಿಗೆ ಜಗಳುಗಳು ಆಗಿವೆ ವಾರ್ಡಿನ ಮಹಿಳೆಯರು ಸಣ್ಣ ಸಣ್ಣ ಹೆಣ್ಣುಮಕ್ಕಳು ಮನೆ ಆಚೆ ಬರದಂತ ಭಯದ ವಾತಾವರಣ ಹಾಗೂ ಭದ್ರತೆಯೇ ಇಲ್ಲದಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕವಿತಾ ವೈನ್ಸ್ ಅಂಗಡಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ವರದಿ ಪಾವಗಡ .ಕೆ.ಮಾರುತಿ ಮುರಳಿ