ಕಲಬುರಗಿ: ತಾಲೂಕಿನ ಅವರಾದ(ಬಿ.) ಗ್ರಾಮದ ವಿದ್ಯಾರ್ಥಿಯಾದ ಕುಮಾರ ತಂದೆ ರಾಜಶೇಖರ ಡಾಂಗೆ ಇವರು ಬಿಇ ಪದವಿ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಐರ್ಲೆಂಡ ಪ್ರವಾಸ ಬೆಳೆಸುತ್ತಿರುವ ಹಿನ್ನಲೆಯಲ್ಲಿ ಅವರನ್ನು ಅವರಾದ(ಬಿ.) ಹಾಗೂ ಸೈಯದ ಚಿಂಚೋಳಿ ಗ್ರಾಮಸ್ಥರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಾಮಬಾಯಿ ಕಗ್ಗನಮಡಿ,ಸುರೇಶ ಕಗ್ಗನಮಡಿ,ಧನವಂತ ಸಿಂಧೆ,ಶಿವರಾಜ ಹಿಂಚಗೇರಾ, ಅಂಬರಾಯ ವಾಡೇಕಾರ,ತಿಪ್ಪಣ್ಣ ಶಿಂಧೆ,ಸೂರ್ಯಕಾಂತ ಮಹಾಗಾಂವ,ಶ್ರೀನಾಥ ಸ್ವಾಮಿ,ದೇವಿಂದ್ರಪ್ಪ ಕಿವಡೆ,ಹಣಮಂತ ಅಂಕಲಗಿ, ಪ್ರೇಮಕುಮಾರ ಖೇಳಗಿ,ಪರಶುರಾಮ ಯಳವಂತಗಿ, ಷಣ್ಮುಖ ಹೊಸಮನಿ ಸೇರಿದಂತೆ ಇತರರು ಇದ್ದರು.
