ಶಿವಮೊಗ್ಗ :ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜನೆಗೊಂಡ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯಲ್ಲಿ ೮ ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸೂಕ್ತಿ ಎಸ್.ಟಿ. ಮತ್ತು ವಿಲಾಸ್ಅಂದ್ರಾದೆ ಅವರು ಭಾಗವಹಿಸಿ ಉತ್ತಮ ಆಟದ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆಯುವ ಮೂಲಕ ಟ್ರೋಫಿಯನ್ನು ತನ್ನದ್ದಾಗಿಸಿಕೊಂಡಿದ್ದಾರೆ.
ಈ ಪ್ರತಿಭೆಗಳು ರಾಣೇಬೆನ್ನೂರಿನ ಚಳ್ಳಕೆರೆ ಗ್ರಾಮದ ಕೆನರಾ ವಿದ್ಯಾಸಂಸ್ಥೆಯಲ್ಲಿ ಇಂದಿನಿಂದ ನಡೆಯುತ್ತಿರುವ ಬೆಂಗಳೂರು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ.
ಸೂಕ್ತಿ ಇವರು ರಾಮಕೃಷ್ಣ ಶಾಲೆಯ ಮುಖ್ಯ ಶಿಕ್ಷಕ ತೀರ್ಥೇಶ್ ಹಾಗೂ ಸೂರ್ಯಕಲಾ ದಂಪತಿಗಳ ಪುತ್ರಿ, ವಿಲಾಸ್ಅಂದ್ರಾದೆ ಇವರು ವಿಲ್ಸನ್ ಅಂದ್ರಾದೆ, ಆಶಾ ಇವರ ಪುತ್ರ.
ಈ ಕ್ರೀಡಾಪಟುಗಳ ಮುಂದಿನ ಕ್ರೀಡಾ ಜೀವನ ಯಶಸ್ವಿಯಾಗಲೆಂದು ಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ ಮತ್ತು ಅಧ್ಯಾಪಕ ವೃಂದ ಶುಭ ಹಾರೈಸಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ