ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ದೃಷ್ಟಿ ವಿಕಲಚೇತನ ಸಾಧಕನಿಗೆ ಒಲಿದ ಅಧ್ಯಕ್ಷತೆ ಪಟ್ಟ

ಕಮಲಾಪೂರ ಪ್ರಥಮ ಸಮ್ಮೇಳನಾಧ್ಯಕ್ಷರಾಗಿ ಡಾ. ಶಿವರಾಜ ಶಾಸ್ತ್ರೀ ಹೇರೂರ ಆಯ್ಕೆ

ಕಮಲಾಪುರ ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೆಂಗಟಿ ಹೇಳಿಕೆ

ಕಲಬುರಗಿ:ನೂತನ ತಾಲೂಕು ಆಗಿ ರಚನೆಗೊಂಡ ನಂತರ ನವೆಂಬರ್ ತಿಂಗಳಲ್ಲಿ ಜರುಗುತ್ತಿರುವ ಕಮಲಾಪೂರ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ
ಕನ್ನಡ ಭಾಷಾ ವಿಷಯದಲ್ಲಿ ಭಾರತದಲ್ಲಿಯೇ ಪಿ.ಎಚ್‍ಡಿ ಪಡೆದ ಮೊದಲ ದೃಷ್ಟಿ ವಿಕಲಚೇತನ ಸಾಧಕರ ಹಾಗೂ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವರಾಜ ಶಾಸ್ತ್ರೀ ಹೇರೂರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಮಲಾಪೂರ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಸುರೇಶ ಲೆಂಗಟಿ ತಿಳಿಸಿದ್ದಾರೆ.

ಕಲಬುರ್ಗಿಯಲ್ಲಿ ಭಾನುವಾರ ಜರುಗಿದ ಕಾರ್ಯಕಾರಣಿ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿ ದೃಷ್ಟಿ ವಿಕಲಚೇತನ ಸಾಧಕ ಕಮಲಾಪೂರ ತಾಲೂಕಿನ ವಿ ಕೆ ಸಲಗರ ಗ್ರಾಮದ ಡಾ. ಶಿವರಾಜ ಶಾಸ್ತ್ರೀ ಹೇರೂರ ಅವರನ್ನು ನೇಮಕ ಮಾಡಲಾಯಿತು.

ಸಾಹಿತ್ಯ ಪರಿಷತ್ತುನ್ನು ಮತ್ತಷ್ಟು ಜನಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಐತಿಹಾಸಿಕವಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಎನ್ನುವಂತೆ ದೃಷ್ಟಿ ವಿಕಲಚೇತನ ಸಾಧಕ, ಸಾಹಿತಿಯೊಬ್ಬರಿಗೆ ಸಮ್ಮೇಳನದ ಸರ್ವಾಧ್ಯಕ್ಷತೆ ಪಟ್ಟ ನೀಡಲಾಗಿದೆ. ಡಾ. ಶಿವರಾಜ ಶಾಸ್ತ್ರೀ ಹೇರೂರ ಅವರು ದಿವ್ಯಾಂಗ ದೀಪ್ತಿ ಎಂಬ ಕವನ ಸಂಕಲನವನ್ನು ಪ್ರಕಟಿಸುವುದರ ಮೂಲಕ ದಿವ್ಯಾಂಗರ ಅಂತರಾಳವನ್ನು ತಮ್ಮ ಕವನಗಳಲ್ಲಿ ಹಿಡಿದಿಟ್ಟಿದ್ದಾರೆ.

ಶರಣಬಸವಾರ ಶಿವಲೀಲೆಗಳು, ಮಹಾದಾಸೋಹ ಸೂತ್ರಗಳು ಇವರ ಸಂಪಾದಿತ ಕೃತಿಗಳಾಗಿವೆ. ಇವರು ಅಪಾರ ಸಾಹಿತ್ಯ ಭಂಡಾರವನ್ನು ಅಧ್ಯಯನ ಮಾಡಿದ್ದು ರಾಜ್ಯಾದ್ಯಂತ ಸಾವಿರಾರು ವಿದ್ಯಾರ್ಥಿಗಳನ್ನು ಸಂಪಾದಿಸಿದ್ದಾರೆ ಎಂದರು.
ಅಲ್ಲದೇ ಶಾಸ್ತ್ರೀಯ ವಿಷಯ, ಅನುಭಾವ ಸಾಹಿತ್ಯ, ಕನ್ನಡ ಕಾವ್ಯ ,ಅಧ್ಯಯನ ಮತ್ತು ಅಧ್ಯಾಪನದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಡಾ. ಶಿವರಾಜ ಶಾಸ್ತ್ರೀ ಹೇರೂರ ಅವರಿಗೆ ಗುಲ್ಬರ್ಗಾ ವಿವಿಯ ಕನ್ನಡ ರಾಜ್ಯೋತ್ಸವ, , ಜ್ಞಾನ ಶೀರೋಮಣಿ, ಚೆನ್ನಶ್ರೀ, ಕನ್ನಡ ಸಿರಿ, ಪುರಾಣ ಪ್ರವಚನ ಪ್ರವೀಣ, ಹಳಕಟ್ಟಿ ಶ್ರೀ, ಜ್ಞಾನ ದಾಸೋಹ ರತ್ನ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ರೇಡಿಯೋ, ದೂರದರ್ಶನದಲ್ಲಿ 20ಕ್ಕೂ ಹೆಚ್ಚು ಚಿಂತನ, ಲೇಖನಗಳನ್ನು ಪ್ರಸ್ತುತ ಪಡಿಸಿರುವ ಇವರು ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡ ಭಾಷಾ ವಿಷಯದಲ್ಲಿ ಭಾರತದಲ್ಲಿಯೇ ಪಿ.ಎಚ್‍ಡಿ ಪಡೆದ ಮೊದಲ ದೃಷ್ಟಿ ವಿಕಲಚೇತನ ಸಾಧಕರಾಗಿದ್ದಾರೆ. ಇವರ ಸಾಹಿತ್ಯ, ಸೇವೆ ಸಮರ್ಪಣಾ ಮನೋಭಾವವನ್ನು ಕಂಡು ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ. ಡಿ.ಲಿಟ್ ಪದವಿ ಪಡೆದ ದೇಶದ 2ನೇ ದೃಷ್ಟಿ ವಿಕಲಚೇತನ ವ್ಯಕ್ತಿ ಇವರಾಗಿದ್ದಾರೆ. 500ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿರುವ ಇವರು ಶರಣಬಸವೇಶ್ವರ ಸಂಸ್ಥಾನದಲ್ಲಿ ನಿರಂತರವಾಗಿ 25 ವರ್ಷಗಳಿಂದ ಶರಣಬಸವೇಶ್ವರ ಪುರಾಣ ಪ್ರವಚನ ಸೇವೆ ನೀಡುತ್ತಿದ್ದಾರೆ. ಅಲ್ಲದೇ ಕನ್ನಡ ಕಾವ್ಯ, ಶಾಸ್ತ್ರೀಯ ವಿಷಯ, ಅನುಭಾವ ಸಾಹಿತ್ಯ, ಅಧ್ಯಯನ ಮತ್ತು ಅಧ್ಯಾಪನದಲ್ಲಿ ತೊಡಗಿಸಿಕೊಂಡಿದ್ದಾರೆ.

ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತು ಮಾಡುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯತತ್ಪರರಾಗಿದ್ದು,ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಪಟ್ಟ ವರ್ಗದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಈ ಪ್ರಮುಖ ಅಂಶದ ಆಧಾರದ ಮೇಲೆ ಡಾ. ಶಿವರಾಜ ಶಾಸ್ತ್ರೀ ಹೇರೂರ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಸುರೇಶ ಲೆಂಗಟಿ ತಾಲೂಕಾ ಅಧ್ಯಕ್ಷರು ಕಮಲಾಪುರ ಇವರು ತಿಳಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ