ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನಲ್ಲಿ ದಿನಾಂಕ: 17.10.2024 ರಂದು ತಾಲೂಕು ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತಿ 2024ನ್ನು ಆಚರಿಸುವ ಸಲುವಾಗಿ ಅಮರೇಶ.ಜಿ.ಕೆ ತಹಶೀಲ್ದಾರರು ಹಾಗೂ ಅಧ್ಯಕ್ಷರು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಇವರ ಅಧ್ಯಕ್ಷತೆಯಲ್ಲಿ ಇಂದು ತಾಲೂಕ ಕಛೇರಿಯ ಮಹಾತ್ಮಗಾಂಧೀಜಿ ಸಭಾಂಗಣದಲ್ಲಿ ಪೂರ್ವಸಿದ್ಧತಾ ಸಭೆಯನ್ನು ನಡೆಸಲಾಯಿತು. ತಾಲೂಕು ಆಡಳಿತ ಹಾಗೂ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕೂಡ್ಲಿಗಿ ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ತಾಲೂಕು ಕಛೇರಿಯಲ್ಲಿ ನಿಯಮಾನುಸಾರದಂತೆ ನಡೆಸುವ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ನೀಡಲಾಗುವುದು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲು ಹಾಗೂ ಕೆ.ಪನ್ನಂಗಧರ ನಿವೃತ್ತ ಪ್ರಾಂಶುಪಾಲರು ಇವರಿಂದ ಉಪನ್ಯಾಸವನ್ನು ಮಾಡಿಸುವಂತೆ ತೀರ್ಮಾನಿಸಲಾಯಿತು.ಮಹರ್ಷಿ ವಾಲ್ಮೀಕಿಯವರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಎಲ್ಲಾ ಸಮಾಜದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವಂತೆ ಅಮರೇಶ್ ಜಿ ಕೆ ತಹಶೀಲ್ದಾರರು ಕೋರಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಬಿ ರೇಖಾ ರಮೇಶ್ ಅಧ್ಯಕ್ಷರು ಪಟ್ಟಣ ಪಂಚಾಯಿತಿ, ಮೆಹಬೂಬ್ ಭಾಷಾ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಕೂಡ್ಲಿಗಿ, ನಸರುಲ್ಲಾ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯಿತಿ, ಮಂಜುನಾಥ ಕೊಟ್ಟೂರು ತಾಲೂಕು ವಾಲ್ಮೀಕು ಮಹಾಸಭಾ ಕೊಟ್ಟೂರು, ಮುಖಂಡರಾದ ಹಂಪಾಪಟ್ಟಣ ಪಕ್ಕೀರಪ್ಪ, ಶಶಿಧರ ಕನ್ನಾಕಟ್ಟಿ , ಬಿ ಎಸ್ ಆರ್ ಮೂಗಣ್ಣ, ಸುಂಕದಕಲ್ಲು ನಾಗರಾಜ, ದೀಪಾ ರೆಸ್ಟೋರೆಂಟ್ ಮಾಲೀಕ ಪ್ರಕಾಶ್, ಹೆಚ್ ಕೊಟ್ರೇಶ್ ಪಪಂ ನೌಕರರ ಸಂಘದ ಕಾರ್ಯದರ್ಶಿ, ಬದ್ಯಾನಾಯ್ಕ ವೈಧ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ, ಈರಣ್ಣ ಎಪಿಎಂಸಿ ಕಾರ್ಯದರ್ಶಿ, ಚೇತನ್ ಜೆಸ್ಕಾಂ ಎಇ ಹಾಗೂ ಇತರರು ಹಾಜರಿದ್ದರು. ಸಿ ಮ ಗುರುಬಸವರಾಜ ಸ್ವಾಗತಿಸಿ ನಿರ್ವಹಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ