ಕಲಬುರಗಿ:ಯಡ್ರಾಮಿ ತಾಲೂಕ ಘೋಷಣೆಯಾಗಿ ಹಲವಾರು ವರ್ಷಗಳಾದರೂ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಹಿಂದುಳಿದ ತಾಲೂಕವೆಂಬ ಹಣೆಪಟ್ಟಿ ಹೊತ್ತ ತಾಲೂಕ ವೆಂದರೆ ಅದುವೇ ನಮ್ಮ ಯಡ್ರಾಮಿ ತಾಲೂಕವೆಂದೆ ಹೇಳಬಹುದು ಯಾಕೆಂದರೆ ಆಡಳಿತಾತ್ಮಕ ದೃಷ್ಟಿಯಿಂದ ಯಡ್ರಾಮಿ ತಾಲೂಕಿನಲ್ಲಿ 42 ಇಲಾಖೆಯ ಸರ್ಕಾರಿ ಉಪ ಕಚೇರಿಗಳು ಇಷ್ಟೊತ್ತಿಗಾಗಲೇ ನಿರ್ಮಾಣವಾಗಿ ಸಿಂಗಾಪುರ ಸಿಟಿಯಂತೆ ಈ ನಮ್ಮ ಯಡ್ರಾಮಿ ತಾಲೂಕ ಕಂಗೊಳಿಸಬೇಕಾಗಿತ್ತು ಆದರೆ ಈ ನಮ್ಮ ಭಾಗದ ರಾಜಕೀಯ ಮುತ್ಸದ್ದಿಗಳ ಇಚ್ಛಾಶಕ್ತಿಯ ಕೊರತೆಯ ಕಾರಣದಿಂದ ಅವಳಿ ತಾಲೂಕುಗಳೆಂದು ಪ್ರಸಿದ್ಧಿ ಪಡೆದ ಜೇವರ್ಗಿಯ ತಾಲೂಕು ಕೂಡ ಇದಕ್ಕೆ ಹೊರತಾಗಿಲ್ಲವೆಂದು ಹೇಳಬಹುದು ಆದಷ್ಟು ಶೀಘ್ರದಲ್ಲಿ 42 ಇಲಾಖೆಯ ಸರ್ಕಾರಿ ಉಪ ಕಚೇರಿಗಳನ್ನು ನಿರ್ಮಾಣ ಮಾಡಬೇಕು ಅದೇ ರೀತಿಯಾಗಿ ಯಡ್ರಾಮಿ ತಾಲೂಕನ್ನು ಕೈಗಾರಿಕಾ ಸ್ಮಾರ್ಟ್ ಸಿಟಿಯು ಅಭಿವೃದ್ಧಿಗಾಗಿ ಶಾಸಕರಾದ ಡಾ. ಅಜಯ್ ಸಿಂಗ್ ರವರು ಕೆಕೆಆರ್ಡಿಬಿ ಇಲಾಖೆಯಿಂದ ಹೆಚ್ಚಿನ ಅನುದಾನ ಮಂಜೂರು ಮಾಡಬೇಕು ಯಡ್ರಾಮಿ ತಾಲೂಕುನ್ನು ರಾಜ್ಯದಲ್ಲಿಯೆ ಮಾದರಿ ತಾಲೂಕನ್ನಾಗಿ ಪರಿವರ್ತನೆ ಮಾಡಬೆಕು ಎಂದು ನಮ್ಮ ಕರ್ನಾಟಕ ಸೇನಾ ಯಡ್ರಾಮಿ ಅಧ್ಯಕ್ಷರಾದ ಮಹೇಶ್ ಪಾಟೀಲ್ ಕಡಕೋಳ ಅವರು ಆಗ್ರಹಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ