ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ವ್ಯಾಪ್ತಿಯಲ್ಲಿನ ಎಲ್ಲಾ ಅಂಗಡಿ ಮುಂಗಟ್ಟು ವಾಣಿಜ್ಯ ಮಳಿಗೆಗಳಲ್ಲಿನ ನಾಮಫಲಕಗಳಲ್ಲಿ ಕಡ್ಡಾಯವಾಗಿ 60% ಕನ್ನಡ ಪದಗಳ ಬಳಕೆಯನ್ನು ಮಾಡಬೇಕೆಂದು ಪುರಸಭೆ ಮುಖ್ಯಾಧಿಕಾರಿ ವಸಂತ ಕುಮಾರಿ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಣಿಜ್ಯ ಮಳಿಗೆದಾರರಿಗೆ/ಉದ್ದಿಮೆದಾರರಿಗೆ, ಅಂಗಡಿ, ಹೊಟೇಲ್, ಲಾಡ್ಜ್ ಮಾಲೀಕರು ಹಾಗೂ ಸರ್ಕಾರಿ ಮತ್ತು ಖಾಸಗಿ ಕಛೇರಿಗೆ ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ರವರ ಸುತ್ತೋಲೆ ಹಾಗೂ ಸರ್ಕಾರದ ನಿರ್ದೇಶನದಂತೆ ಕರ್ನಾಟಕದ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಅನುಷ್ಟಾನಗೊಳಿಸಲು ಮಾರ್ಗಸೂಚಿ ಅನ್ವಯ ಕಡ್ಡಾಯವಾಗಿದೆ ಎಂದಿದ್ದಾರೆ.
ಈಗಾಗಲೇ ಹಲವು ಬಾರಿ ತಿಳಿಸಿದ್ದು ಇನ್ನೂ ಮೂರು ದಿನಗಳ ಕಾಲಾವಕಾಶ ನೀಡಿದ್ದು ಒಂದು ವೇಳೆ ನಾಮಫಲಕದಲ್ಲಿ 60% ಕನ್ನಡ ಪದ ಬಳಕೆಯಾಗದೇ ಇದ್ದಲ್ಲಿ ಪುರಸಭೆ ವತಿಯಿಂದ ಸದರಿ ನಾಮಫಲಕವನ್ನು ತೆರವುಗೊಳಿಸಿ. ಅದಕ್ಕೆ ತಗಲುವ ವೆಚ್ಚವನ್ನು ತಮ್ಮಿಂದ ವಸೂಲಿ ಮಾಡಲಾಗುವುದು ಹಾಗೂ ತಮಗೆ ನೀಡಿರುವ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಿ, ಕಾನೂನಿನಂತೆ ಕ್ರಮಕೈಗೊಳ್ಳಲಾಗವುದು ಕಾರ್ಯಾಚರಣೆಯಿಂದ ಕಟ್ಟಡಗಳಿಗೆ ಯಾವುದೇ ಹಾನಿ ಉಂಟಾದಲ್ಲಿ ಪುರಸಭೆ ಜವಾಬ್ದಾರಿಯಾಗಿರುವುದಿಲ್ಲ ಇದು ಅಂತಿಮ ತಿಳುವಳಿಕೆಯಾಗಿರುತ್ತದೆ ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸಬೇಕಾಗಿ ಎಂದು ಕೋರಿದ್ದಾರೆ.
ವರದಿ ಗುಂಡ್ಲುಪೇಟೆ ಕುಮಾರ್