ಬೆಂಗಳೂರು : ಮಾತಿನ ಮನೆಯ 86ನೆಯ ಕಾರ್ಯಕ್ರಮವಾಗಿ ಡಾ. ಬೇಲೂರು ರಘುನಂದನ್ ರಚನೆ ನಿರ್ದೇಶನದ ಅಧಿನಾಯಕಿ ನಾಟಕದಲ್ಲಿ ಶ್ರೀಮತಿ ಲಕ್ಷ್ಮೀ ಕಾರಂತ್ ಅವರು ಏಕವ್ಯಕ್ತಿ ಪ್ರದರ್ಶನವನ್ನು ನೀಡಿದರು.
ನಮ್ಮ ಸಮಾಜದಲ್ಲಿ ಹೆಣ್ಣಿಗಿರುವ ಅತಂತ್ರ ಅಸಹಾಯಕ ಸ್ಥಿತಿಯನ್ನು ಮನಮುಟ್ಟುವಂತೆ ಅಭಿನಯಿಸಿದ ಲಕ್ಷ್ಮಿಯವರನ್ನು ಮಾತಿನ ಮನೆಯ ಪರವಾಗಿ ರಾ ಸು ವೆಂಕಟೇಶ ಅವರು ಅಭಿನಂದಿಸಿದರು.
ಬೇಲೂರು ರಘುನಂದನ್ ಮಾತನಾಡಿ ಸಮಾಜ ಎಷ್ಟೇ ಮುಂದುವರೆದರೂ ಈ ಶೋಷಣೆ ನಿಲ್ಲುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶೈಲಸುತೆ ರಂಜಿತಾ ಅವರು ನಿರ್ವಹಿಸಿದ್ದರು, ಕುಮಾರಿ ಮಯೂನ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿತ್ತು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ