ಬೀದರ್: ರಾಜ್ಯದಲ್ಲಿ ಒಳ ಮೀಸಲಾತಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದರು.
ಇಲ್ಲಿಯ ಹಬ್ಬಿಕೋಟ್ ಅತಿಥಿ-ಗೃಹದಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು
ಮಾತನಾಡಿದರು.
ಸುಪ್ರೀಂಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ ಆದರೆ, ದತ್ತಾಂಶ ಸಂಗ್ರಹಣೆ ನೆಪವೊಡ್ಡಿ ಆಯೋಗ ರಚಿಸಿರುವುದು ಅನವಶ್ಯಕ ಇದು, ಕಾಲಹರಣದ ತಂತ್ರವಾಗಿದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಪಾರ್ಟಿಯ ರಾಜ್ಯ ಘಟಕದ ಉಪಾಧ್ಯಕ್ಷರಾದ ಬಿ.ಕೆ. ವಾಸು, ದಸ್ತಗಿರಿ ಮುಲ್ಲಾ, ದತ್ತು ಸೂರ್ಯವಂಶಿ ರಾಜ್ಯ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಾದ ಗುಣವಂತ ಸೂರ್ಯವಂಶಿ, ಜಿ. ಆಸ್ಕರ್, ಸಂಯೋಜಕ ಆರ್. ಮುನಿಯಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಯೋಹಾನ್ ಡಿಸೋಜಾ ಚಿಲ್ಲರ್ಗಿ, ಶಾದ್ರಕ್ ಸೀತಾಳಗೇರಾ, ಉಮೇಶ ಗುತ್ತೆದಾರ್, ದತ್ತಪ್ಪ ಭಂಡಾರಿ, ಗುಣವಂತ ಶಿಂಧೆ, ಮಲ್ಲಿಕಾರ್ಜುನ ಕಪಲಾಪುರೆ, ನಿಕೋಲಸ್ ಕೋಟೆ, ಆಪ್ರೋಜ್ ಖುರೇಶಿ ಹಾಜರಿದ್ದರು.
ವರದಿ:- ರೋಹನ್ ವಾಘಮಾರೆ