ಉತ್ತರ ಕನ್ನಡ/ಮುಂಡಗೋಡ :ವಿಶ್ವಭಾರತಿಗೆ ಕನ್ನಡದಾರತಿ ಎಂಬ ಮಾತು ಸಾರ್ವಕಾಲಿಕ ಸತ್ಯ,ಭಾರತದ ಅಭಿವೃದ್ದಿಗೆ ಹೆಚ್ಚಿನ ತೆರಿಗೆ ನೀಡುತ್ತಿರುವ ಮುಂಚೂಣಿ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನವಿದೆ. 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನವಿದೆ.ಕನ್ನಡ ಭಾಷೆ ಉಳಿಯುವುದು ಕಥೆ ಕಾದಂಬರಿಗಳಿಂದಲ್ಲ ಬದಲಾಗಿ ಅದರ ಬಳಕೆಯಿಂದ,ಈಗಿನ ಮಕ್ಕಳು ಇಂಗ್ಲಿಷ್ ಸಾಹಿತ್ಯವೇ ಕಲಿಯಲಿ ,ಪಾಂಡಿತ್ಯವನ್ನು ಹೊಂದಲಿ ಆದರೆ ವ್ಯಾವಹಾರಿಕವಾಗಿ ಕನ್ನಡ ಭಾಷೆ ಬಳಸಲಿ,ಅವ್ವ,ಅಪ್ಪ, ಮಾವ, ಸ್ನೇಹಿತ ಎಂಬ ಪದಗಳು ಬಳಕೆಯಾಗಲಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಲ್ಲರ ಮನೆ ಮನಗಳಲ್ಲಿ ಕನ್ನಡದ ದೀಪ ಹಚ್ಚೋಣ ಎಂದು ಕನ್ನಡ ರಾಜ್ಯೋತ್ಸವ ಅಂಗವಾಗಿ ನಗರ ತಾಲೂಕ ಕ್ರೀಡಾಂಗಣದಲ್ಲಿ ರಾಷ್ಟದ್ವಜಾರೋಹಣ ಮಾಡಿ ತಹಶೀಲ್ದಾರ್ ಶಂಕರ್ ಗೌಡಿ ಮಾತನಾಡಿದರು.
ಇದೇವೇಳೆ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಲ್ ಟಿ ಪಾಟೀಲ್ ಮಾತನಾಡಿ ಡ್ಯಾಡಿ ಮಮ್ಮಿ ಸಂಸ್ಕೃತಿ ಬಿಟ್ಟು ಮನೆಯಲ್ಲಿ ಕನ್ನಡ ಬಳಸಲು ಬೆಳೆಸುವ ಮಹತ್ತರ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.
ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು, ಇದಕ್ಕೂ ಮೊದಲು ನಗರದ ಪ್ರವಾಸಿ ಮಂದಿರ ದಿಂದ ತಾಲೂಕ ಕ್ರೀಡಾಂಗಣವರೆಗೆ ಮೆರವಣಿಗೆ ಕಾರ್ಯಕ್ರಮ ನಡೆಯಿತು.
ಇದೇ ವೇಳೆ ಸಿಪಿಐ ರಂಗನಾಥ್ ನೀಲಮ್ಮನವರ, ತಾಲೂಕ ಪಂಚಾಯತ ಇಓ ಟಿ ವೈ ದಾಸನಕೊಪ್ಪ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಚಂದ್ರಶೇಖರ್ ಬಿ, ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ರಹಿಮ ಭಾನು ಕುಂಕುರೂ,ಬಿಇಒ ಜಕಣಾಚಾರಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ ಎಸ್ ಕೋಣಸಾಲಿ ಸೇರಿದಂತೆ ಚುನಾಯಿತ ಹಾಗೂ ನಾಮ ನಿರ್ದೇಶಿತ ಪಟ್ಟಣ ಪಂಚಾಯಿತಿ ಸದಸ್ಯರು ಹಾಜರಿದ್ದರು.