ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ಮಗನಿಗೆ ಪುನೀತ್ ರಾಜಕುಮಾರ್ ಹೆಸರು ನಾಮಕರಣ:ದಂಪತಿಗಳ ಅಭಿಮಾನಕ್ಕೆ ಅಭಿನಂದನೆಗಳ ಮಹಾಪೂರ

ಉತ್ತರ ಕನ್ನಡ/ಸಿದ್ದಾಪುರ:
ಯಾರ ಮೇಲೆ ಯಾರಿಗೆ ಅಭಿಮಾನ ಬೆಳೆಯುತ್ತದೆ ಹೇಳಲು ಸಾಧ್ಯವಿಲ್ಲ, ಹಲವರು ಹಲವರ ಮೇಲೆ ಹಲವು ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ. ಕೆಲವರು ತಮ್ಮ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಂಡರೆ, ದೇವಾಲಯ ಕಟ್ಟುತ್ತಾರೆ, ಹರಕೆ ಹೊತ್ತರೆ ಇಲ್ಲೊಬ್ಬರು ಪುನೀತ್ ರಾಜಕುಮಾರ್ ಅಭಿಮಾನಿ ದಂಪತಿಗಳು ತಮ್ಮ ಮಗನಿಗೆ ಪುನೀತ್ ರಾಜಕುಮಾರ್ ಎಂದು ನಾಮಕರಣ ಮಾಡುವ ಮೂಲಕ ತಮ್ಮ ಅಪ್ಪಟ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಹೌದು ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿರುವ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದ ಹೆಸರಿನಲ್ಲಿ ಅನಾಥರ, ದಿಕ್ಕಿಲ್ಲದವರ, ಅಸಹಾಯಕರ, ವ್ರದ್ದರ ಸೇವೆ ಮಾಡುತ್ತಿರುವ ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ದಂಪತಿಗಳು ತಮ್ಮ ಎರಡನೇ ಮಗನಿಗೆ ಪುನೀತ್ ರಾಜಕುಮಾರ್ ಎಂದು ನಾಮಕರಣ ಮಾಡಿದ್ದಾರೆ.
ಅವರು ಪುನೀತ್ ರಾಜಕುಮಾರರವರ ಅಪ್ಪಟ ಅಭಿಮಾನಿಗಳಾಗಿದ್ದು ಈ ಹಿಂದೆ ಪುನೀತ್ ರಾಜಕುಮಾರ್ ರವರು ನಿಧನರಾದ ಸಂದರ್ಭದಲ್ಲಿ ತಾವು ನಡೆಸುತ್ತಿದ್ದ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮಕ್ಕೆ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮ ಎಂದು ಹೆಸರು ಬದಲಿಸಿ ಪುನೀತ್ ರಾಜಕುಮಾರ್ ರವರ ಮೇಲಿನ ಅಭಿಮಾನ ತೋರಿಸಿದ್ದರು ನಂತರ ತಮ್ಮ ಮೊದಲನೆ ಮಗನಿಗೆ ಕೂಡ ಯುವರಾಜ ಎಂದು ಹೆಸರಿಡುವ ಮೂಲಕ ತಾವು ಪುನೀತ್ ರಾಜಕುಮಾರ್ ಅಭಿಮಾನಿಗಳು ಎಂದು ಇನ್ನೊಮ್ಮೆ ಸಾಬೀತು ಮಾಡಿದ್ದರು. ಇದೀಗ ತಮ್ಮ ಎರಡನೆಯ ಮಗನಿಗೂ ಕೂಡಾ ಪುನೀತ್ ರಾಜಕುಮಾರ್ ಎಂದು ಹೆಸರು ನಾಮಕರಣ ಮಾಡುವುದರ ಮೂಲಕ ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ದಂಪತಿಗಳು ಪುನೀತ್ ರಾಜಕುಮಾರ ರವರ ಅಪ್ಪಟ ಅಭಿಮಾನವನ್ನು ತೋರಿಸಿದ್ದಾರೆ.
ಈಗಾಗಲೇ ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲ್ಲಿ ನೂರಾರು ಅನಾಥರ ಸೇವೆ ನಡೆಸುತ್ತಿರುವ ನಾಗರಾಜ ನಾಯ್ಕ ದಂಪತಿಗಳು ಅನಾಥರ ಬಾಳಿಗೆ ಬೆಳಕಾಗುವುದರ ಜೊತೆಗೆ ಆಶ್ರಯದಾತರಾಗಿದ್ದಾರೆ. ನೂರಾರು ಅನಾಥ ಶವಗಳಿಗೆ ಅಂತ್ಯಕ್ರಿಯೆ ನಡೆಸಿರುವ ಇವರು ನೂರಾರು ಜನರನ್ನು ಅವರ ಕುಟುಂಬಗಳಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಅಲ್ಲದೆ ಶಿವಮೊಗ್ಗ, ಹಾವೇರಿ ಜಿಲ್ಲೆಗಳಿಂದಲೂ ರಸ್ತೆಯ ಮೇಲೆ, ಬಸ್ ನಿಲ್ದಾಣಗಳಲ್ಲಿ ಅನಾಥ ಸ್ಥಿತಿಯಲ್ಲಿ ಇರುವವರನ್ನೂ, ಪೋಲಿಸರು, ಸಾರ್ವಜನಿಕರೂ, ಸಂಘ ಸಂಸ್ಥೆಗಳವರು ಕರೆತಂದು ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮಕ್ಕೆ ಸೇರಿಸುತ್ತಿದ್ದಾರೆ. ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ದಂಪತಿಗಳು ಅನಾಥರ ಸೇವೆಗೆ ಹೆಸರುವಾಸಿ ಆಗಿದ್ದಾರೆ.
ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ದಂಪತಿಗಳ ಈ ಕಾರ್ಯಕ್ಕೆ ವಿಶ್ವದ ಎಲ್ಲೆಡೆ ಇರುವ ಪುನೀತ್ ರಾಜಕುಮಾರ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದು ದಂಪತಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

-ಕರುನಾಡ ಕಂದ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ