ಬೀದರ್/ಚಿಟಗುಪ್ಪ : ಸಾಮಾಜಿಕ ಸುಧಾರಕ, ಕ್ರಾಂತಿಕಾರಿ, ಆಡಳಿತಗಾರ, ಅರ್ಥಶಾಸ್ತ್ರಜ್ಞ, ವಿವೇಚನಾವಾದಿ, ಮುಕ್ತ ಚಿಂತಕ, ಮಹಿಳೆ ವಿಮೋಚನೆಕಾರ ಮತ್ತು ವಿಮೋಚನೆಕಾರನಾಗಿ ಹೊರಹೊಮ್ಮಿದ ವಿಶ್ವದ ತತ್ವ ಜ್ಞಾನಿ ಅಣ್ಣ ಬಸವಣ್ಣನವರು ಎಂದು ಅನುಭವ ಮಂಟಪದ ಸಂಚಾಲಕ ಪೂಜ್ಯ ಶ್ರೀ ಶಿವಾನಂದ ಸ್ವಾಮೀಜಿ ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿ 45 ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು ಬಸವಣ್ಣನವರು ವಿಶ್ವದ ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ಸಮಾನತೆಯ ಹರಿಕಾರರು, ಅವರು ಜಾತಿರಹಿತ ಸಮಾಜವನ್ನು ಕಟ್ಟಿದರು. ಅಂದು ಅವರು ಕಟ್ಟಿದ ಅನುಭವ ಮಂಟಪವು ಸೌಹಾರ್ದತೆ, ಸಹೋದರತ್ವ, ಭಾವೈಕ್ಯತೆಯ ಮೌಲ್ಯಾಧಾರಿತ ಸಿದ್ಧಾಂತಗಳ ಸಂದೇಶಗಳನ್ನು ಜಾಗತಿಕ ಪ್ರಪಂಚಕ್ಕೆ ಸಾರಿದೆ. ಈ ನಿಟ್ಟಿನಲ್ಲಿ ಬಸವಾದಿ ಶರಣರ ಉದ್ದೇಶಗಳು ಈಡೇರಿಸುವದಕ್ಕಾಗಿ ನಾವೆಲ್ಲರೂ ಇಂದು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಚಾಲಕ,
ಸಾಹಿತಿ ಸಂಗಮೇಶ ಎನ್ ಜವಾದಿ ಮಾತನಾಡಿ
ಜಗತ್ತಿಗೆ ವೈಚಾರಿಕ ಕ್ರಾಂತಿಯ ಕೊಡುಗೆ ನೀಡಿದ ಸಮಾನತೆಯ ಹರಿಕಾರ ಬಸವಣ್ಣನವರು ಅನುಭವ ಮಂಟಪದ ಮುಖಾಂತರ ಕಲ್ಯಾಣ ರಾಜ್ಯ ನಿರ್ಮಾಣ ಮಾಡಿದರು. ಪರಿಣಾಮ ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರತಿ ವರ್ಷವೂ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಪರಮ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಸಾನಿಧ್ಯದಲ್ಲಿ ಶರಣ ಕಮ್ಮಟ ಅನುಭವ ಮಂಟಪ ಉತ್ಸವವೂ ಯಶಸ್ವಿಯಾಗಿ ನಡೆದುಕೊಂಡು ಬರುತ್ತಲಿದೆ. ಈಗ 45 ಶರಣ ಕಮ್ಮಟ, ಅನುಭವ ಮಂಟಪ ಉತ್ಸವಕ್ಕೆ ಸರ್ವ ರೀತಿಯಿಂದ ಸಜ್ಜಾಗಿದೆ. ಇದೆ ತಿಂಗಳ 23,24ರಂದು ಅತ್ಯಂತ ವೈಭವದಿಂದ, ಅದ್ಧೂರಿಯಾಗಿ ಅಷ್ಟೇ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಈ ಉತ್ಸವಕ್ಕೆ ಸರ್ವರಿಗೂ ಆದರದ ಸ್ವಾಗತವಿದೆ ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣೆ ಇಂದುಮತಿ ಗಾರಂಪಳ್ಳಿ ರವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳದ ಅಧ್ಯಕ್ಷ ರಾಜು ದೇವಣಿ, ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾದ ಭೀಮಶೆಟ್ಟಿ ವಡ್ಡನಕೇರಾ, ಚಂದ್ರಶೇಖರ ತಂಗಾ ಗಣ್ಯರಾದ ಅನಿಲಕುಮಾರ ಸಿರಿಗಿರಿ, ಶಾಂತಕುಮಾರ ಗೋಪಾ, ಗುರುನಾಥ ಮಹಾಜನ,ಮನೋಹರ್ ಜಕ್ಕಾ, ಶೌರ್ಯ ಜವಾದಿ, ಚನ್ನವೀರ ಲಾತೂರೆ, ಶ್ರಾವ್ಯ ಜವಾದಿ ಸೇರಿದಂತೆ ಬಸವಾಭಿಮಾನಿಗಳು, ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ