ವಕ್ಫ್ ಮಂಡಳಿಯ ಗೊಂದಲದಿಂದ ರೈತರಿಗೆ ಆಗುತ್ತಿರುವ ಅನ್ಯಾಯಗಳನ್ನು ಸರಿ ಪಡಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷರಾದ ಅಮ್ಜದ್ ಖಾನ್, ರಾಜೇಂದ್ರ ಹಾಗೂ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಹನೂರು: ವಕ್ಫ್ ಮಂಡಳಿ ಎಂಬ ಗುಮ್ಮ ಸ್ವತಂತ್ರ ಪೂರ್ವದಲ್ಲಿ ಸೃಷ್ಟಿ ಆಗಿದ್ದು ಸ್ವಾತಂತ್ರ್ಯ ನಂತರ ಹಲವು ಸಂದರ್ಭಗಳಲ್ಲಿ ಇದಕ್ಕೆ ತಿದ್ದು ಪಡಿಯನ್ನೂ ತರಲಾಗಿದೆ ಎಂಬ ಮಾಹಿತಿ ಇತ್ತೀಚಿನ ಜನ ಸಾಮಾನ್ಯರಲ್ಲಿ ಹರಿದಾಡುತ್ತಿದ್ದು ಇವಾಗ ರಾಜ್ಯದ ಹಲವಾರು ಜಿಲ್ಲೆಯ ಭಾಗಗಳಲ್ಲಿ ರೈತರ ಪಿತ್ರಾರ್ಜಿತ ಆಸ್ತಿಗಳನ್ನು ಹೊಂದಿರುವ ಹಾಗೂ ಸರ್ಕಾರ ಗ್ರಾಂಟ್ ನೀಡಿರುವ ಭೂಮಿಯ ರೈತರಿಗೆ ನೋಟಿಸ್ ಗಳನ್ನು ನೀಡಿದ್ದು ವಕ್ಫ್ ಕಾಯಿದೆ ರೈತರಿಗೆ ಮರಣ ಶಾಸನ ಆಗಿದೆ ರೈತರು ಭೂಮಿಯನ್ನು ಕಳೆದುಕೊಳ್ಳುವ ಆತಂಕ ಸೃಷ್ಟಿ ಆಗಿದೆ, ತಲೆ ತಲಾಂತರದಿಂದ ಕೃಷಿಯನ್ನು ನಂಬಿ ಬಂದಿರುವ ರೈತ ಕುಟುಂಬಗಳಿಗೆ ಯಾವುದೇ ತೊಂದರೆ ಆಗದಂತೆ ರೈತ ಕುಟುಂಬಗಳಿಗೆ ಭದ್ರತೆ ನೀಡಬೇಕೆಂದು ಹಾಗೂ ಈಗಾಗಲೇ ಪಹಣಿಯಲ್ಲಿ 11 ನೇ ಕಾಲಂ ನಲ್ಲಿ ನೊಂದಾಯಿಸಿರುವ ವಕ್ಫ್ ಹೆಸರನ್ನು ತೆಗೆಯಬೇಕು ಇನ್ನು ಮುಂದೆ ಯಾವುದೇ ರೈತರಿಗೆ ನೋಟಿಸ್ ನೀಡದಂತೆ ಸರಕಾರವು ವಕ್ಫ್ ಮಂಡಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಹನೂರು ತಾಲೂಕು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರು ಅಮ್ಜದ್ ಖಾನ್ ಹಾಗೂ ರಾಜೇಂದ್ರ ಹಾಗೂ ಸದಸ್ಯರು
ಶಿರಸ್ತೇದಾರ ನಾಗೇಂದ್ರ ಅವರಿಗೆ ಮನವಿ ಪತ್ರ ನೀಡಿದರು.
ಇದನ್ನು ಸ್ವೀಕರಿಸಿದ ಶಿರಸ್ತೇದಾರ್ ನಾಗೇಂದ್ರ ಇದನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ರವಾನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರಾಜಣ್ಣ,ನಾಗರಾಜು ಕಾರ್ಯದರ್ಶಿ ವೆಂಕಟೇಶ್,ಅರ್ಪುದ ರಾಜು,ಮಹದೇವು,ಸಂಧಿವು ಇದ್ದರು.
ವರದಿ ಉಸ್ಮಾನ್ ಖಾನ್




















