ಶಿವಮೊಗ್ಗ : ಇತ್ತೀಚೆಗೆ ಆಂಧ್ರ ಪ್ರದೇಶದ ಗುಂಟೂರು ನಾಗಾರ್ಜುನ ವಿಶ್ವವಿದ್ಯಾನಿಲಯದಲ್ಲಿ ನಡೆದ ೩೫ನೇ ದಕ್ಷಿಣ ವಲಯದ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ೧೮ರ ವಯೋಮಿತಿಯ ಬಾಲಕ – ಬಾಲಕಿಯರ ಅಥ್ಲೆಟಿಕ್ ಚಾಂಪಿಯನ್‌ಶಿಫ್ ನಲ್ಲಿ ಜಿಲ್ಲೆಯ ಅನುಷಾ ಜಿ ನಾಯಕ್ ೧೦೦ ಮೀ ೨೦೦ ಮೀ ೪x೧೦೦ಮೀ ರಿಲೇಯಲ್ಲಿ ಅಭಿಜ್ಞಾ ೪೦೦ಮೀ ೪x೧೦೦ ಮೀ ಪಡೆದು ನಮ್ಮ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ.
ಈ ವಿದ್ಯಾರ್ಥಿಗಳು ಜಿಲ್ಲೆಯ ಡಿವಿ ಸ್. ಕಾಲೇಜಿನಲ್ಲಿ ವಿದ್ಯಾ ಭ್ಯಾಸ ಮಾಡುತ್ತಿರುತ್ತಾರೆ. ಶಿವಮೊಗ್ಗದ ನೆಹರು ಕ್ರೀಡಾಂ ಗಣದಲ್ಲಿ ತರಬೇತುದಾರರಾದ ಶಿವುಕುಮಾರ್. ಎಂ. ಡಿ. ಅವರ ಬಳಿ ತರಬೇತಿಯನ್ನು ಪಡೆಯುತ್ತಿದ್ದು, ಈ ಕ್ರೀಡಾಪಟುಗಳು ಮುಂದೆ ಬರುವ ಆಲ್ ಇಂಡಿ ಯಾ ಲೆವೆಲ್ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುತ್ತಾರೆ. ಇವರುಗಳಿಗೆ ತರಬೇತುದಾ ರಾದ ಶಿವುಕುಮಾರ್ ಎಂ. ಡಿ. ಜಿಲ್ಲಾ ಅಥ್ಲೆಟಿಕ್ ಅಸೋಸಿ ಯೇಷನ ಕಾರ್ಯ ದರ್ಶಿ ಉದಯ್ ಕುಮಾರ್, ಯಶವಂತ ನಾಯ್ಕ್, ಅಶೋಕ್, ಯುವ ಜನ ಮತ್ತು ಕ್ರೀಡಾ ಇಲಾಖೆ ಸಹ ಕಾರ್ಯದರ್ಶಿ ರೇಖಾ ನಾಯ್ಕ್ ಮತ್ತು ಕ್ರೀಡಾಪಟುಗಳು ಶುಭಕೋರಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















