ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಸಾಸಿವೆಹಳ್ಳಿ ಏತ ನೀರಾವರಿ ಯೋಜನೆಯ A P -6 ಪ್ರಸರಣ ಮಾರ್ಗದಿಂದ ಟಾಪಿಂಗ್ ಮುಖಾಂತರ ಕುರುವ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ 66/66 ಕೆವಿ ವಿದ್ಯುತ್ ಸ್ಟೇಷನ್ ಗಾಗಿ 66 ಕೆವಿ ವಿದ್ಯುತ್ ಪ್ರಸರಣ ಮಾರ್ಗವು ದಿಡಗೂರು, ಹರಳಹಳ್ಳಿ, ಗೋವಿನ ಕೋವಿ, ಕುರುವ, ಗ್ರಾಮಗಳ ರೈತರ ಜಮೀನಿನ ಮೇಲೆ ವಿದ್ಯುತ್ ಪ್ರಸರಣವು ಹಾದು ಹೋಗುತ್ತದೆ ಇದರಿಂದ ನೂರಾರು ರೈತರಿಗೆ ತೊಂದರೆಯಾಗುತ್ತದೆ
ಈಗಾಗಲೇ ದಿಡಗೂರು ಗ್ರಾಮದಲ್ಲಿ ಸುಮಾರು 3 ಹೈ ಟೆನ್ಶನ್ ಕಂಬಗಳು ಹಾದುಹೋಗಿದ್ದು ಇದರಿಂದ ರೈತರು ತಮ್ಮ ಜಮೀನುಗಳಲ್ಲಿ ವಾಣಿಜ್ಯ ಬೆಳೆಯನ್ನು ಬೆಳೆಯಲು ಸಾಧ್ಯವಾಗಿಲ್ಲ ಅಷ್ಟೇ ಅಲ್ಲದೆ ಇಲ್ಲಿ ವಿದ್ಯುತ್ತಿನ ಹಲವಾರು ಸಮಸ್ಯೆಗಳು ಉಂಟಾಗುತ್ತವೆ ರೈತರ ಕೃಷಿ ಮೋಟಾರ್ ಗಳಿಗೆ ಅಳವಡಿಸಿದಂತ ವಿದ್ಯುತ್ ಪರಿಕರವಾದಂತಹ ಟಿ,ಸಿ ಗಳಿಗೆ ತೊಂದರೆಯಾಗುತ್ತಿದೆ ಪವರ್ ಮ್ಯಾನ್ ಗಳು ದಿಡಗೂರಿನಲ್ಲಿ ಕೆಲಸ ನಿರ್ವಹಿಸಲು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಮಾಡುವ ಸ್ಥಿತಿ ನಿರ್ಮಾಣವಾಗಿದೆ
ಅಲ್ಲದೆ ಹೈ ಟೆನ್ಶನ್ ವಿದ್ಯುತ್ ಪ್ರಸರಣ ಮಾರ್ಗವು ಹಾದು ಹೋಗಿರುವ ಕೆಳಗಡೆ ಇರುವಂತ ವಿದ್ಯುತ್ ವೈರುಗಳು ಬೇಸಿಗೆಕಾಲದಲ್ಲಿ ಹಿಗ್ಗಿ ಹಲವಾರು ಸಮಸ್ಯೆಗಳು ಉಂಟಾಗಿವೆ ನಮ್ಮ ಗ್ರಾಮದಲ್ಲಿರುವ ಗೋಮಾಳದಲ್ಲಿ ವಿದ್ಯುತ್ ಘಟಕವನ್ನು ಸ್ಥಾಪನೆ ಮಾಡಲು ಕೊಟ್ಟು ನಮ್ಮ ತಲೆಯ ಮೇಲೆ ನಾವೇ ಚಪ್ಪಡಿ ಹೇಳಿದುಕೊಂಡಂತೆ ಆಗಿದೆ ಇದು ನಮ್ಮ ರೈತರ ಗೋಳು ನಮ್ಮಗೆ ಇರುವುದು ಒಂದು ಎಕರೆ ಮತ್ತು ಅರ್ಧ ಎಕರೆ ಜಮೀನುಗಳು ಇದರಲ್ಲಿ ವಿದ್ಯುತ್ ತಂತಿಗಳು ಹಾದು ಹೋದರೆ ಮತ್ತು ಕಂಬಗಳನ್ನು ನಿರ್ಮಿಸಿದರೆ ನಾವುಗಳು ಏನು ಮಾಡಬೇಕು ನಮಗೆ ವ್ಯವಸಾಯ ಬಿಟ್ಟರೆ ಬೇರೆ ಕಸಬು ಗೊತ್ತಿಲ್ಲ
ನಮ್ಮ ಜಮೀನಿನಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ಕಣ್ಣು ಹೊರೆಸುವ ರೀತಿ ಪರಿಹಾರವನ್ನು ನೀಡುತ್ತಾರೆ ಆ ಪರಿಹಾರವೂ ನಮ್ಮ ಮಕ್ಕಳ ಜೀವನಕ್ಕೆ ಆಧಾರವಾಗುತ್ತದೆಯೇ , ಜಮೀನು ಇದ್ದರೆ ಅದರಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆದು ಹೇಗೋ ನಮ್ಮ ಜೀವನವನ್ನು ರೂಪಿಸಿಕೊಳ್ಳುತ್ತೇವೆ
ಆದರೆ ಅದನ್ನು ಕಸಿದುಕೊಳ್ಳುವಂತ ಹುನ್ನಾರ ನಡೆದಿದೆ ಎಂದು ದಿಡಗೂರಿನ ರೈತರು ತಮ್ಮ ನೋವಿನ ಕಥೆಯನ್ನು ಪತ್ರಿಕೆಯ ಮುಖಾಂತರ ತೋಡಿಕೊಂಡಿದ್ದಾರೆ.
ಹೊಲ ಗದ್ದೆಗಳಲ್ಲಿ ವಿದ್ಯುತ್ ಕಂಬಗಳು ಹಾದು ಹೋಗಿದ್ದು ರಸ್ತೆ ಬದಿಯಲ್ಲಿ ಎತ್ತಿನಗಾಡಿ ಮತ್ತು ಟ್ರಾಕ್ಟರ್ ಮೇಲೆ ಹುಲ್ಲು ತರುವಾಗ ಅಪ್ಪಿ ತಪ್ಪಿ ರಸ್ತೆ ಬದಿಯಲ್ಲಿ ಎದುರು ಬದರು ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ ,
ಗೋವಿನಕೋವಿ-ಹನುಮಸಾಗರ ಏತ ನೀರಾವರಿ ಯೋಜನೆಯ Lift-1 Stage-1 ಪಂಪ್ ಹೌಸ್‌ಗೆ ವಿದ್ಯುತ್ ಪಡೆಯಲು ಹೊನ್ನಾಳಿ ತಾಲ್ಲೂಕು ದಿಡಗೂರು ಗ್ರಾಮದಲ್ಲಿ ಸಾಸ್ನೇಹಳ್ಳಿ ಏತ ನೀರಾವರಿ ಯೋಜನೆಯ AP-6 ಪಸರಣ ಮಾರ್ಗದಿಂದ Toping ಮುಖಾಂತರ ನ್ಯಾಮತಿ ತಾ॥ ಕುರುವ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ 66/6.6 ಕೆ.ವಿ ವಿದ್ಯುತ್ ಸ್ಟೇಷನ್’ಗಾಗಿ 66 ಕೆ.ವಿ ವಿದ್ಯುತ್ ಪ್ರಸರಣ ಮಾರ್ಗಕ್ಕೆ ಈಗಾಗಲೇ ಸರ್ವೆ ಕಾರ್ಯಕ್ರಮ ಪೂರ್ಣಗೊಂಡಿದ್ದು
ಮಾನ್ಯ ಜಿಲ್ಲಾಧಿಕಾರಿಗಳು, ದಾವಣಗೆರೆ ಇವರ ಪತ್ರ ಸಂಖ್ಯೆ:ನಂ:ಭೂಸ್ವಾಧೀನ/ವಿವ/105/2022-23 2:28-03-2023 ವಿದ್ಯುತ್ ಸ್ಟೇಷನ್ ‘ಗಾಗಿ 66 ಹೋಬಳಿಯ ಹರಳಹಳ್ಳಿ, ಗೋವಿನಕೋವಿ ಮತ್ತು ಕುರುವ ಗ್ರಾಮಗಳ ಮುಖಾಂತರ ಹಾದು ಹೋಗಲಿದ್ದು, ಸದರಿ ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಬರುವ ಜಮೀನುಗಳಿಗೆ ದರ ನಿಗದಿಪಡಿಸುವ ಸಲುವಾಗಿ ಸಂಬಂಧಿಸಿದ ಭೂ ಮಾಲೀಕರುಗಳ ಸಭೆಯನ್ನು ಮಾನ್ಯ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ: 04-11-2024 ರಂದು ಬೆಳಗ್ಗೆ: 11-00 ಗಂಟೆಗೆ ತಾಲ್ಲೂಕು ಪಂಚಾಯಿತಿ ಸಭಾಂಗಣ ಹೊನ್ನಾಳಿಯಲ್ಲಿ ಸಭೆಯನ್ನು ಏರ್ಪಡಿಸಿ
ಈ ಸಭೆಗೆ ಇಂದು ದಿಡಗೂರು ಗ್ರಾಮ ಹರಳಹಳ್ಳಿ ಗ್ರಾಮ ಗೋವಿನ ಗೋವಿ ಮತ್ತು ಕುರುವ ಗ್ರಾಮದ ಜಮೀನಿನ ಮಾಲೀಕರಾದ ರೈತರುಗಳು ಸಭೆಯಲ್ಲಿ ನಮ್ಮ ಜಮೀನುಗಳಲ್ಲಿ ವಿದ್ಯುತ್ ಕಂಬಗಳು ಮತ್ತು ಪ್ರಸರಣದ ಮಾರ್ಗವು ಹಾದು ಹೋಗಲು ಬಿಡುವುದಿಲ್ಲ ಎಂದು ಎಲ್ಲರೂ ತಿಳಿಸಿದ್ದೇವೆ ಎಂದು ದಿಡಗೂರಿನ ಗ್ರಾಮಸ್ಥರು ಹೇಳಿದರು.
ವರದಿ ಪ್ರಭಾಕರ್ ಡಿ ಎಂ