ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ದಿನಾಂಕ: 11.11.2024 ರಂದು ಕೊಟ್ಟೂರು ತಾಲೂಕ ಮಟ್ಟದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಆಚರಿಸುವ ಬಗ್ಗೆ ತಾಲೂಕ ಕಛೇರಿಯಲ್ಲಿ 07.11.2024 ರಂದು ಪೂರ್ವ ಸಿದ್ದತೆಯ ಸಭೆಯನ್ನು ತಹಶೀಲ್ದಾರರಾದ ಅಮರೇಶ ಜಿ ಕೆ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ನಡೆಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ವೇದಿಕೆ ಸಿದ್ದತೆ, ವೇದಿಕೆ ಹಿಂಭಾಗದಲ್ಲಿ ಫ್ಲೆಕ್ಸ್ ಹಾಗೂ ಆಸನಗಳ ವ್ಯವಸ್ಥೆಯನ್ನು ಮುಖ್ಯಾಧಿಕಾರಿಗಳು ಮಾಡಿಸಲು ಒಪ್ಪಿಕೊಂಡರು. ಒನಕೆ ಓಬವ್ವ ಮಹಿಳೆಯರಿಗೆ ಪ್ರೇರಕ ಶಕ್ತಿಯಾಗಿರುವ ಕಾರಣ ಸಮಾಜದಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿದ ಮಹಿಳೆಯನ್ನು ಗುರುತಿಸಿ ಸನ್ಮಾನಿಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಾಧಕರಿಗೆ ಹಾಗೂ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಸನ್ಮಾನ ಮಾಡಲು ತೀರ್ಮಾನಿಸಿದ್ದು, ಸನ್ಮಾನದ ವೆಚ್ಚ ಹಾಗೂ ಕಾರ್ಯಕ್ರಮದ ನಂತರ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ರೇಖಾ ರಮೇಶ್ ಇವರು ಸ್ವಯಂ ಸ್ಪೂರ್ತಿಯಿಂದ ಒಪ್ಪಿದ್ದು, ಸಭೆಯಲ್ಲಿ ಚಪ್ಪಾಳೆ ತಟ್ಟಿ ಅಭಿನಂದಿಸಲಾಯಿತು. ಒನಕೆ ಓಬವ್ವನ ಜೀವನದ ಯಶೋಗಾಥೆಯನ್ನು ತಿಳಿಸುವ ಉದ್ದೇಶದಿಂದ ವಿಶೇಷ ಉಪನ್ಯಾಸ ವ್ಯವಸ್ಥೆ ಹಾಗೂ ಎಲ್ಲಾ ಸಮಾಜದ ಎಲ್ಲಾ ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಪ ಪಂ ಮುಖ್ಯಾಧಿಕಾರಿ ನಸರುಲ್ಲಾ, ಚಲವಾದಿ ಮಹಾಸಭಾ ಜಿಲ್ಲಾ ಮುಖಂಡರಾದ ಹೊಟ್ಟೇರ ಅಜ್ಜಯ್ಯ, ಹನುಮಂತ ವಕೀಲರು ಹಾಗೂ ದಲಿತ ಮುಖಂಡರು, ಜಿಲ್ಲಾ ಡಿಎಸ್ಎಸ್ ಮುಖಂಡರಾದ ಬದ್ದಿ ಮರಿಸ್ವಾಮಿ, ಚಲವಾದಿ ಮಹಾಸಭಾ ಜಿಲ್ಲಾ ಉಪಾಧ್ಯಕ್ಷರು ಹಾಗೂ ಪ ಪಂ ಸದಸ್ಯರಾದ ಕೆಂಗರಾಜ, ರೈತ ಮುಖಂಡರಾದ ಭರಮಣ್ಣ, ಚಲವಾದಿ ಮಹಾಸಭಾ ತಾಲೂಕು ಅಧ್ಯಕ್ಷರಾದ ಸಿ ಮಂಜುನಾಥ, ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರಾದ ಕೊಟ್ರೇಶಪ್ಪ, ಎಲ್ಐಸಿ ಅಂಜಿನಪ್ಪ, ಡಾ.ಬದ್ಯಾನಾಯ್ಕ, ತಾ ಪಂ ಮ್ಯಾನೇಜರ್ ಪುಪ್ಪಲತಾ ಕಾಮಶೆಟ್ಟಿ, ವಿವಿಧ ಇಲಾಖೆಯ ಸಿಬ್ಬಂದಿ ಹಾಗೂ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು. ಕಛೇರಿಯ ಸಿಬ್ಬಂದಿ ಸಿ ಮ ಗುರುಬಸವರಾಜ ಎಲ್ಲರಿಗೂ ಸ್ವಾಗತ ಕೋರುತ್ತಾ ನಿರ್ವಹಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ