ಮೈಸೂರು: ರಾಜ್ಯಾದ್ಯಂತ ವಕ್ಫ್ ಮಂಡಳಿ ರೈತರ ಜಮೀನುಗಳಿಗೆ ನೀಡಿದ್ದ ನೋಟೀಸ್ ಹಿಂಪಡೆಯಲು ಆದೇಶಿಸಿದ ಸಿದ್ದರಾಮಯ್ಯ ಅವರ ನಡೆ ಸ್ವಾಗತಾರ್ಹ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.
ವಿನಾಕಾರಣ ವಕ್ಫ್ ಮಂಡಳಿ ಸರಿಯಾದ ದಾಖಲಾತಿ ಇಲ್ಲದೆ ರಾಜ್ಯಾದ್ಯಂತ ಬಡ ರೈತರ ಜಾಮೀನು ಮತ್ತು ಮಠ ಮಾನ್ಯಗಳ ಮೇಲೆ ನೋಟೀಸ್ ನೀಡಿ ಸಮಾಜದಲ್ಲಿ ಗೊಂದಲ ಉಂಟುಮಾಡಿ ಅಶಾಂತಿ ಉಂಟು ಆಗುತ್ತಿದೆ.
ಇದನ್ನು ಮನಗಂಡು ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ನೋಟಿಸ್ ನೀಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಆದೇಶಿಸಿರುವುದು ರೈತರ ಮತ್ತು ಮಠಮಾನ್ಯಗಳ ಮೇಲಿರುವ ಪ್ರೀತಿ ಮತ್ತು ಗೌರವ ವನ್ನು ತೋರುತ್ತದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ದೇಶದ ಬೆನ್ನೆಲುಬು ಮತ್ತು ಅನ್ನದಾತ ರೈತರಿಗೆ ಸಮಸ್ಯೆ ಆಗದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪರಿಹಾರ ನೀಡುತ್ತಾರೆ ಎಂದು ತೇಜಸ್ವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.