ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನವರಾತ್ರಿ ಹಬ್ಬದಂದು ದುರ್ಗಾದೇವಿ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಅನ್ಯ ಧರ್ಮದ ವ್ಯಕ್ತಿಗಳಿಂದ ಗೋಸಾವಿ ಸಮಾಜದ ಹೆಣ್ಣುಮಕ್ಕಳಿಗೆ ತೊಂದರೆ ಕೊಟ್ಟ ವ್ಯಕ್ತಿಗಳನ್ನು ಬಂಧಿಸುವಂತೆ ಲಕ್ಷ್ಮೇಶ್ವರ ಠಾಣೆಗೆ ದೂರು ನೀಡಲು ಬಂದಂತಹ ಸಂದರ್ಭದಲ್ಲಿ ಠಾಣೆಯ ಪಿ ಎಸ್ ಐ ಶ್ರೀ ಈರಣ್ಣ ರಿತ್ತಿ ಅವರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಮತ್ತು ನಿಂದನೆ ಮಾಡಿದ್ದಾರೆ ಎಂದು ಗೋಸಾವಿ ಸಮಾಜದವರು ಪ್ರತಿಭಟನೆ ಕೈಗೊಂಡಿದ್ದರು.
ಈ ಸಮಯದಲ್ಲಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷರಾದ ಶ್ರೀ ಗಂಗಾಧರ್ ಜಿ ಕುಲಕರ್ಣಿ ಮಾತನಾಡಿ ನ್ಯಾಯ ಒದಗಿಸುವಂತಹ ಪೊಲೀಸ್ ಅಧಿಕಾರಿಗಳೇ ತಪ್ಪು ಮಾಡಿದಾಗ ನಮ್ಮಂತ ಸಾಮಾನ್ಯರ ಪರಿಸ್ಥಿತಿ ಏನಾಗಬಾರ್ದು ಈ ಘಟನೆಯ ಪ್ರಮುಖ ವ್ಯಕ್ತಿಯಾದ ಪಿ ಎಸ್ ಐ ಶ್ರೀ ಈರಣ್ಣ ರಿತ್ತಿಯವರು ಕೂಡಲೇ ರಾಜೀನಾಮೆ ನೀಡಬೇಕು ಇಲ್ಲ ಎಸ್ ಪಿ ಸಾಹೇಬರೇ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಇದೇ 10 ನೇ ತಾರೀಕಿನಂದು ಶ್ರೀ ಪ್ರಮೋದ್ ಮುತಾಲಿಕ್ ರವರ ಉಪಸ್ಥಿಯಲ್ಲಿ ದೊಡ್ಡ ಪ್ರಮಾಣದ ಹಿಂದೂ ಕಾರ್ಯಕರ್ತರ ಸಮ್ಮುಖದಲ್ಲಿ ಗದಗ ಜಿಲ್ಲಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವದು ಎಂದು ತಿಳಿಸಿದರು. ಈ ಸಮಯದಲ್ಲಿ ಶ್ರೀರಾಮ್ ಸೇನೆಯ ರಾಜ್ಯಾಧ್ಯಕ್ಷರಾದ ಗಂಗಾಧರ ಕುಲಕರ್ಣಿ,ಶ್ರೀರಾಮ ಸೇನೆ ತಾಲೂಕ ಅಧ್ಯಕ್ಷ ಶ್ರೀ ಈರಣ್ಣ ಪೂಜಾರ್, ಮಹೇಶ್ ರೋಕಡೆ, ಬಸವರಾಜ್ ಚಕ್ರಸಾಲಿ,ಪ್ರಾಣೇಶ್ ವ್ಯಾಪಾರಿ, ಚಿನ್ನು ನಾಗಲಕೋಟೆ, ಹಣಮಂತ ರಾಮಗೇರಿ, ಹರೀಶ ಗೋಸಾವಿ , ಗೋವಿಂದ ಗೋಸಾವಿ , ಗೋಸಾವಿ ಸಮಾಜದವರು ಮತ್ತು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ – ಸದಾಶಿವ ಭೀ ಮುಡೆಮ್ಮನವರ