ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಮೇಲಿನ ಹಲಕುರ್ಕಿ ಗ್ರಾಮದಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕ್ರಾಂತಿ ವೀರ ರಾಯಣ್ಣ ಯುವ ಘರ್ಜನೆ ಸಂಘಟನೆ ಮೇಲಿನ ಹಲಕುರ್ಕಿ ಹಾಗೂ ಶ್ರೀ ಭಕ್ತ ಕನಕದಾಸ ಅಭಿವೃದ್ಧಿ ಸಂಘ ಮೇಲಿನ ಹಲಕುರ್ಕಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿ ಭಕ್ತ ಕನಕದಾಸರ ಫೋಟೋಗೆ ಹಾಲನ್ನು ಹಾಕುವುದರ ಮುಖಾಂತರ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಗ್ರಾಮದ ಗುರು ಹಿರಿಯರನ್ನು ಸ್ವಾಗತಿಸಿ ಸನ್ಮಾನಿಸಿದರು ಭಕ್ತ ಕನಕದಾಸರ ಜಯಂತಿಯ ನಿಮಿತ್ಯ ಊಟದ ವ್ಯವಸ್ಥೆಯನ್ನು ಮಾಡಿರುವಂತ ಯಮನಪ್ಪ ತಿರಕಣ್ಣವರ್, ಯಲ್ಲಪ್ಪ ಕಬ್ಬಲಗೇರಿ, ಬಸಪ್ಪ ಘಂಟಿ, ಪ್ರಕಾಶ್ ತಿರಕಣ್ಣವರ್ ರನ್ನು ಸನ್ಮಾನಿಸಿದರು.
ಭಕ್ತ ಕನಕದಾಸರ ಚರಿತ್ರೆಯನ್ನು ನಾಟಕದ ಮಾತಿನ ರೂಪದಲ್ಲಿ ಜನರಿಗೆ ಅರ್ಥವಾಗುವ ಹಾಗೆ ಶಿವಾನಂದ ಹಿರೇ ತಳವಾರ ಮಾತನಾಡಿದರು.
ಶಂಕರಪ್ಪ ಹೊಲಗೇರಿ ಅವರು ಭಕ್ತ ಕನಕದಾಸರ ಚರಿತ್ರೆಯ ಬಗ್ಗೆ ಮಾತನಾಡಿದರು.
ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಈಶ್ವರ್ ಕಬ್ಬಲಗೇರಿ ನಡೆಸಿಕೊಟ್ಟರು.
ವರದಿ-ಪರಶುರಾಮ್.ಪಿ.ಬಂಡಿ