ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ 537ನೇ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ದಾಸ ಶ್ರೇಷ್ಠರು , ಕೀರ್ತನೆಕಾರರಾದ ಭಕ್ತ ಕನಕದಾಸರ ಭಾವಚಿತ್ರಕ್ಕೆ ಭಕ್ತಿ ಪೂರ್ವಕ ಪುಷ್ಪಗಳನ್ನು ಅಲಂಕರಿಸಿ ಪೂಜಾ ಕಾರ್ಯಕ್ರಮವನ್ನು ನೆರೆವೇರಿಸಲಾಯಿತು.
ಆಧ್ಯಾತ್ಮ-ಭಕ್ತಿ ಪಂಥದ ಕೀರ್ತನೆಗಳ ಮೂಲಕ ಸಮಾಜಕ್ಕೆ ಸಂದೇಶ ಸಾರಿದ ದಾಸ ಶ್ರೇಷ್ಠರಾದ ಪರಮಪೂಜ್ಯ ಶ್ರೀ ಭಕ್ತ ಕನಕದಾಸರ ಜೀವನ ಶೈಲಿಗಳನ್ನು ಅವರು ನೀಡಿದ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹನುಮೇಶ ಮಾತನಾಡಿ ಹೇಳಿದರು.
ಈ ವೇಳೆಯಲ್ಲಿ ಗ್ರಾಮದ ಹಿರಿಯರಾದ ಟಿ.ನಾಗಪ್ಪ , ಕೃಷ್ಣಮೂರ್ತಿ, ಟಿ.ಈರಪ್ಪ , ಬೀರಲಿಂಗಪ್ಪ , ವೈ.ಬಸವರಾಜ , ನರಸಪ್ಪ ,ಟೀಕಯ್ಯ , ರಾಘವೇಂದ್ರ ,ಬುಡ್ಡಪ್ಪ ಹನುಮೇಶ , ಪಂಪಾಪತಿ , ಬಸವರಾಜ ,ಮಂಜುನಾಥ ಹಾಗೂ ಗ್ರಾಮದ ಸರ್ವರು , ಗುರು ಹಿರಿಯರು ,ಕನಕದಾಸ ಯುವಕರ ಬಳಗ , ಸಂಗೋಳ್ಳಿ ರಾಯಣ್ಣ ಯುವಕರ ಬಳಗ ,ರಾಯಲ್ ಬಾಯ್ಸ್ ಹಾಗೂ ಇತರರು ಭಾಗಿ ಇದ್ದರು.