ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹದ ಮುಂಭಾಗದಲ್ಲಿ ಕನಕದಾಸರ ಜಯಂತಿಯು ಸರಳವಾಗಿ ಜರುಗಿತು.
ಬಳಿಕ ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಆಚರಣೆ ಮೂಲಕ ಗೌರವ ಸೂಚಿಸಲಾಗುತ್ತಿದೆ. ಸಮಾಜಕ್ಕೆ ಒಳಿತು ಕೊಡುವ ಸಂದೇಶ ರವಾನೆಯಾಗುತ್ತಿದೆ. ಈ ಬಾರಿ ಹನೂರಲ್ಲಿ ಅದ್ದೂರಿ ಆಚರಣೆ ಮಾಡುವ ಚಿಂತನೆಯಿತ್ತು. ಕಾರಣಂತರಗಳಿಂದ ಸರಳವಾಗಿ ಆಚರಣೆ ಮಾಡಲಾಗಿದೆ. ಪಟ್ಟಣದಲ್ಲಿ ಕನಕಭವನ ಪೂರ್ಣಬಳಿಕ ಉದ್ಘಾಟನೆ ಮಾಡಿ ಮುಂದಿನ ಆಚರಣೆಯನ್ನು ಕನಕ ಭವನದಲ್ಲೇ ಮಾಡಲು ಶ್ರಮಿಸಲಾಗುವುದು ಎಂದು ತಿಳಿಸಿದರು. ಕನಕದಾಸರು ಕೀರ್ತನೆಗಳ ಮೂಲಕ ಉತ್ತಮ ಸಂದೇಶ ರವಾನೆ ಮಾಡಿದ್ದಾರೆ. ಕನಕದಾಸರ ತತ್ವ ಆದರ್ಶವನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಇದೆ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಭಾಷಣಕಾರ ಶಿಕ್ಷಕ ಸೋಮಣ್ಣ,ಹನೂರು ಪ. ಪಂ. ಅಧ್ಯಕ್ಷೆ ಮಮತಾಜ್ ಬಾನು, ಉಪಾಧ್ಯಕ್ಷ ಆನಂದ್ ಕುಮಾರ್, ಸದಸ್ಯರಾದ ಸೋಮಶೇಖರ್, ಹರೀಶ್ ಕುಮಾರ್, ಸಂಪತ್, ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ಬಿಇಒ ಗುರುಲಿಂಗಯ್ಯ, ನಾಗೇಂದ್ರ, ಇಒ ಅಶೋಕ, ಚಾಮುಲ್ ನಿರ್ದೇಶಕ ಪ್ರಸಾದ್, ಮುಖಂಡರು ಮತ್ತಿತರರು ಇದ್ದರು.
ವರದಿ :ಉಸ್ಮಾನ್ ಖಾನ್