ಹಾವೇರಿ ಜಿಲ್ಲೆಯಲ್ಲಿ ಬಾಡ ಎಂಬ ಗ್ರಾಮವೊಂದಿತ್ತು
ಬೀರಪ್ಪ ಬಚ್ಚಮ್ಮರ ದಾಂಪತ್ಯವು ಸುಂದರವಾಗಿತ್ತು
ತಿರುಪತಿ ತಿಮ್ಮಪ್ಪನ ಕೃಪೆ ಇವರಿಗೆ ಬಲು ಒಲಿದಿತ್ತು
ತಿಮ್ಮಪ್ಪ ನೆಂಬ ಮುದ್ಧು ಕಂದನ ಜನನವಾಗಿತ್ತು.
ತಿಮ್ಮಪ್ಪನಿಗೊಲಿಯಿತು ಧನಕನಕ ಕೊಪ್ಪರಿಗೆಯಷ್ಟು
ತನ್ನ ಸ್ವಂತಕ್ಕಾಗಿ ಉಳಿಸಿಕೊಳ್ಳಲಿಲ್ಲ ಎಳ್ಳಷ್ಟೂ
ಏಳು ಕೊಪ್ಪರಿಗೆ ಹೊನ್ನು ಜಗಕೆ ಹಂಚಿದರು
ಕನಕ ನೆಂಬ ಹೆಸರು ಪಡೆದು ದಾಸರಾದರು.
ತಂಬೂರಿ ಹಿಡಿದು ದೇವರ ನಾಮ ಹಾಡಿದರು
ಕರ್ನಾಟಕ ಸಂಗೀತದ ಹರಿಕಾರ ಎನಿಸಿದರು
ಮೇಲು ಕೀಳೆಂಬ ತಾರತಮ್ಯ ಬೇಡವೆಂದರು
ಆದಿಕೇಶವ ರಾಯನ ನಾಮಾಂಕಿತರಿವರು.
ಸತಿಯ ಅಗಲಿಕೆಗೆ ನೊಂದು ಬೆಂದರು
ಕೃಷ್ಣನ ನಾಮವ ಸ್ತುತಿಸುತ ನಿಂದರು
ಕುರುಚಲು ಗಡ್ಡದಿ ತುಳಸೀಮಾಲೆ ಧರಿಸಿದರು
ಶಾಂತಿ ಕೋರಿ ಪರಮಾತ್ಮನನ್ನು ಧ್ಯಾನಿಸಿದರು.
ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ,
ದೂರವಾಣಿ ಸಂಖ್ಯೆ:-9740199896.