ಕಲಬುರಗಿ: ಇದೇ ನವೆಂಬರ್ 26 ರಂದು ಪ್ರಗತಿ ಅವಾಡ್೯ ದಾಸರ ಹಳ್ಳಿ ಇವರ ವತಿಯಿಂದ ಪ್ರತಿವರ್ಷ ಕೊಡಮಾಡುವ ಕರ್ನಾಟಕ ಐಕಾನಿಕ್ ಎಕ್ಸಲೆನ್ಸ್ ಅವಾಡ್೯ ಪ್ರಶಸ್ತಿಗೆ ಸಾವಿರಾರು ಜನತೆಗೆ ಒಟ್ಟು 14 ಕಡೆಯಲ್ಲಿ ಈ ರೀತಿಯ ಉಚಿತ ಕ್ಷೌರ ಸೇವೆಯಲ್ಲಿ ಒಟ್ಟು 1465 ಕ್ಕೂ ಹೆಚ್ಚು ಜನತೆಗೆ ಈ ರೀತಿಯ ಸೇವೆ ಸಲ್ಲಿಸಿದ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ಸಮಾಜದ ಸೇವಕ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಆಯ್ಕೆಯಾಗಿದ್ದಾರೆ. ಸಮಾಜದ ಅನೇಕ ವಿಭಿನ್ನ ರೀತಿಯ
ಸಾಮಾಜಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರಕಟಿಸಲಾಗಿದ್ದು, ಇದೇ ನವೆಂಬರ್ 26 ಮಂಗಳವಾರ ರಂದು ಬೆಂಗಳೂರು ನಗರದ ಸದಾಶಿವ ನಗರದ ಹೈಡ್ ಪಾರ್ಕ ಅಪಾಟ್೯ ಹೋಟೆಲ್ ರಾಜ ಮಹಲ್ ವಿಲಾಸ ಎಕ್ಸ್ಟೇಶನ್ ಬೆಂಗಳೂರು ನಲ್ಲಿ ಏರ್ಪಡಿಸಲಾಗಿರುವ ಸಮಾಜದ ಸೇವಕರಿಗೆ (ಪ್ರತಿಭೆಗೊಂದು) ವೇದಿಕೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.