ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕೋರವಾರದಲ್ಲಿ ಲಕ್ಷ ದೀಪೋತ್ಸವ ಸರ್ವಧರ್ಮಗಳ ತಾಯಿ ಹಿಂದೂ ಧರ್ಮ: ಕಾಶಿ ಜಗದ್ಗುರು

ಸರ್ವರಿಗೂ ಒಳಗೊಂಡ ಸರ್ವ ಜನಾಂಗವನ್ನು ಸಮಾನ ದೃಷ್ಟಿಯಿಂದ ಕಂಡ ಸಕಲ ಜೀವರಾಶಿಗಳ ಹಾಗೂ ಎಲ್ಲರ ಒಳಿತನ್ನು ಬಯಸುವ ವಿಶ್ವದ ಏಕೈಕ ಧರ್ಮ ಹಿಂದೂ ಧರ್ಮ ಎಂದು ಕಾಶಿಜ್ಞಾನ ಸಿಂಹಸನಾದೀಶ್ವರ ಶ್ರೀ ಶ್ರೀ 1008 ಜಗದ್ಗುರು
ಡಾ. ವಿಶ್ವಾರಾಧ್ಯ ಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೋರವಾರ ಅಣಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಹಾಗೂ ಧರ್ಮಸಭೆ ಉದ್ಘಾಟಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಹಿಂದೂ ಧರ್ಮ ದೇಶದ ಸನಾತನ ಆಚಾರ ವಿಚಾರ ಪರಂಪರೆ ಸಂಸ್ಕೃತಿ ಉಳಿಸಲು ಹಾಗೂ ದಯಾ ಧರ್ಮಗಳ ಪಾಲನೆ ಸಂಕೇತವಾಗಿದೆ.
ಭಾರತೀಯ ಸನಾತನ ಧರ್ಮದ ಸಂಸ್ಕೃತಿ ಆಚರಣೆಯ ಪೂರ್ವಜರು ಋಷಿಮುನಿಗಳು ಶಿವಾಚಾರ್ಯರು ಜಗತ್ ಪೀಠಗಳು ಸಂಸ್ಕಾರಗಳನ್ನು ರೂಢಿಯಲ್ಲಿ ತಂದಿದ್ದಾರೆ, ಮನುಷ್ಯನ ಮನೋಭಾವನೆಗಳು ಮನಕುಲದ ವಿನಾಶಕ್ಕೆ ಮಾರಕಸ್ತ್ರಗಳಿದ್ದಂತೆ ಜಾತಿ ಅಸಮಾನತೆ ವಿರುದ್ಧ ಸಮರಸಾರಿ ಸಮಾಜದ ಸಮಾನತೆಯನ್ನು ಸಾಧಿಸುವ ಪ್ರಯತ್ನವನ್ನು ವೀರಶೈವ ಧರ್ಮ ಅನಾದಿಕಾಲದಿಂದಲೂ ಮಾಡುತ್ತಾ ಬಂದಿದೆ ಸನಾತನ ವೀರಶೈವ ಧರ್ಮದ ವಿಕಾಸದಲ್ಲಿ ವೀರಭದ್ರೇಶ್ವರ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ ಅವರನ್ನು ಕಡೆಗಣಿಸಿ ವೀರಶೈವ ಧರ್ಮದ ಇತಿಹಾಸದಲ್ಲಿ ಕಲ್ಪಿಸಿ ಇತಿಹಾಸ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಅಜ್ಞಾನವನ್ನು ಹೋಗಲಾಡಿಸಲು ಜ್ಞಾನದ ಬೆಳಕು ಹರಿಸಬೇಕು ಎಂದು ಜಗದ್ಗುರುಗಳು ಹೇಳಿದರು.
ಸೂಗೂರಿನ ಡಾ. ಚಂದ್ರ ರುದ್ರಮುನಿ ಶಿವಾಚಾರ್ಯ ಪಾಳದ ಡಾ. ಗುರುಮೂರ್ತಿ ಶಿವಾಚಾರ್ಯ ಅಫಜಲಪುರದ ಶ್ರೀ ವಿಶ್ವಾರಾಧ್ಯ ಮುಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದಲ್ಲಿ ಚಿಟಗುಪ್ಪದ ಶ್ರೀ ಗುರುಲಿಂಗ ಶಿವಾಚಾರ್ಯ, ಹೊನ್ನಕಿರಣಗಿಯ ಶ್ರೀ ಚಂದ್ರಗುಂಡ ಶಿವಾಚಾರ್ಯ, ಕೋರವಾರದ ಶ್ರೀ ಪ್ರಶಾಂತ ದೇವರು ರಟಕಲನ, ಶ್ರೀ ರೇಣುಸಿದ್ದ ಶಿವಾಚಾರ್ಯ ಕೊಡ್ಲಿಯ, ಶ್ರೀ ಬಸವಲಿಂಗ ಶಿವಾಚಾರ್ಯ, ಹೊಸಳ್ಳಿಯ ಶ್ರೀ ಸಿದ್ದಲಿಂಗ ಶಿವಾಚಾರ್ಯ, ಬಣ ಮಗಿಯ ಶ್ರೀ ರಾಚೋಟೇಶ್ವರ ಶಿವಾಚಾರ್ಯ, ತೆಂಗಿನ ಶ್ರೀ ಶಾಂತ ಸೋಮನಾಥ ಶಿವಾಚಾರ್ಯ, ತೋಟ್ನಳ್ಳಿಯ ಶ್ರೀ ತ್ರಿಮೂರ್ತಿ ಶಿವಾಚಾರ್ಯ, ಮಳ ಖೇಡದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ, ಸರಡಗಿಯ ಶ್ರೀ ರೇವಣಸಿದ್ಧ ಶಿವಚಾರ್ಯ, ಹಲಕಟ್ಟಿಯ ಶ್ರೀ ಅಭಿನವ ಮುನೀಂದ್ರ ಶಿವಾಚಾರ್, ಚಿತ್ತಾಪುರದ ಶ್ರೀ ಸೋಮೇಶ್ವರ ಶಿವಾಚಾರ್ಯ, ಪೇಠ ಶಿರೂರಿನ ಶ್ರೀ ಸಿದ್ದಲಿಂಗ ಶಿವಾಚಾರ್ಯ, ಚಂದನ ಕೇರಾದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ, ಪ್ರಮುಖರಾದ ಮಹಾರುದ್ರ ಮಲ್ಲಿಕಾರ್ಜುನ ಸಾಹು, ಶಿವಪುತ್ರಪ್ಪ ಹಲಚೇರ, ಶಿವರಾಜ್ ಪಾಟೀಲ್ ಕಲ್ಗುರ್ತಿ, ಸಿದ್ದಣ್ಣ ಗೌಡ ವಚ್ಚಾ, ವಿಜಯ್ ಕುಮಾರ್ ನಿಂಗದೆ, ಸೋಮೇಶ ಕಂಠಿ, ಶರಣಪ್ಪ ಪಸಾರ ಕಲಗೂರ್ತಿ, ಶರಣು ಗೋ ನಾಯಕ ಇತರರಿದ್ದರು.


ಅಣಿವೀರಭದ್ರೇಶ್ವರ ದೇವಸ್ಥಾನ ಪ್ರಧಾನ ಅರ್ಚಕ ಧನಂಜಯ ಸ್ವಾಮಿ ಹಿರೇಮಠ್ ಹಾಗೂ ಅಂಬರೀಶ್ ಹಿರೇಮಠ್ ಅವರು ಕಾಶಿ ಜಗದ್ಗುರುಗಳಿಗೆ ಬಂಗಾರದ ಉಂಗುರ ತೊಡಿಸಿ ಸತ್ಕರಿಸಿದರು ಅಣಿವೀರಭದ್ರೇಶ್ವರ ಮಹಿಮೆ ಕುರಿತು ಈರಮ್ಮ ಗುರುಸ್ವಾಮಿ ಹಾಗೂ ಮಲ್ಲಿಕಾರ್ಜುನ್ ಪರ್ತಬಾದ್ ಅವರು ರಚಿಸಿದ ಅಣಿ ವೀರಭದ್ರೇಶ್ವರನ ಭಕ್ತಿ ಗೀತೆ ಧ್ವನಿ ಸುರಳಿಯನ್ನು ಬಿಡುಗಡೆ ಮಾಡಲಾಯಿತು.
ದೇವಸ್ಥಾನದ ಆಡಳಿತ ಅಧಿಕಾರಿ ತಹಸೀಲ್ದಾರ್ ಘಮಾವತಿ ರಾಥೋಡ್ ಸ್ವಾಗತಿಸಿದರು ಈರಮ್ಮ ಗುರುಸ್ವಾಮಿ ಪ್ರಾರ್ಥಿಸಿದರು ವೀರಯ್ಯ ನಿರೂಪಣೆ ಮಾಡಿದರು ಅಣಿವೀರಯ್ಯ ಸ್ವಾಮಿ ಸಾಲಿ ವಂದಿಸಿದರು.
ಜಗದ್ಗುರುಗಳಿಗೆ ಗುರು ಆರತಿ
ಕೋರವಾರದ ಅಣಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಕಾಶಿ ಜಗದ್ಗುರು ಡಾ /ವಿಶ್ವರಾಧ್ಯ ಮಲ್ಲಿಕಾರ್ಜುನ್ ಶಿವಾಚಾರ್ಯರಿಗೆ ಹೊನ್ನ ಕಿರಣಿಗಿ ರಾಚೋಟೇಶ್ವರ ವೈದಿಕ ಬಳ ದಿಂದ ಕಾಶಿಯ ಗಂಗಾ ರತಿ ಮಾದರಿಯಲ್ಲಿ ಗುರು ಆರತಿ ಜರುಗಿತು. ನೆರೆದಿದ್ದ ಸಾವಿರಾರು ಭಕ್ತರು ಗುರು ಆರತಿ ಕಣ್ತುಂಬಿಕೊಂಡು ಜಗದ್ಗುರುಗಳಿಗೆ ಜೈಕಾರ ಹಾಕಿದರು.

ಅಣಿ ವೀರಭದ್ರೇಶ್ವರನಿಗೆ ವಿಶೇಷ ಪೂಜೆ
ಶುಕ್ರವಾರ ನಸುಕಿನ ಜಾವ ದೇವಸ್ಥಾನದ ಅರ್ಚಕ ಅಂಬರೀಶ್ ಧನಂಜಯ ಸ್ವಾಮಿ ಹಿರೇಮಠ ವೈದಿಕತ್ವದಲ್ಲಿ ಅಣಿ ವೀರಭದ್ರೇಶ್ವರ ಮೂರ್ತಿಗೆ ಸುಪ್ರಭಾತ ಸೇವೆ ಜರುಗಿತು. ಬೆಳಿಗ್ಗೆ 6:00 ಗಂಟೆಗೆ ಹೊನ್ನ ಕಿರಣಗಿ ಪೂಜ್ಯ ಚಂದ್ರಗುಂಡ ಶಿವಾಚಾರ್ಯರು ಹಾಗೂ ತೋಸನಹಳ್ಳಿ ಶ್ರೀ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಹೊನ್ನ ಕಿರಣಗಿ ರಾಚೋಟೇಶ್ವರ ವೈದಿಕ ಬಳಗದಿಂದ 121 ಟ್ರಿಕ್ ವೇಜದ ರಿಂದ ಮಹಾ ರುದ್ರ ಪಠಣ , ನವಗ್ರಹ ಹೋಮ ಹವನ ಶಿವ ಪಾರ್ವತಿ ಕಲ್ಯಾಣ 101 ಕುಂಭ ಕಳಸ ಪೂಜೆ ಜರುಗಿದವು ತದನಂತರ ಸೇವಾಧಾರಿಗಳಿಗೆ ಗುರು ರಕ್ಷೆ ಹಾಗೂ ಸುಮಾರು 50 ದಂಪತಿಯಿಂದ ವಿಶೇಷ ರುದ್ರ ಪೂಜೆ ಜರುಗಿತು ಸಂಜೆ ಕಾಶಿ ಜಗದ್ಗುರು ಡಾಕ್ಟರ್ ವಿಶ್ವರಾಧ್ಯ ಮಲ್ಲಿಕಾರ್ಜುನ್ ಶಿವಾಚಾರ್ಯರು ಕೋರವಾರ ಅಣಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಮುತ್ತೈದೆಯರಿಂದ ಕುಂಭ ಕಳಸದ ಅದ್ದೂರಿ ಮೆರವಣಿಗೆ ಜರುಗಿತು ಕಾಶಿ ಜಗದ್ಗುರುಗಳು ತಮ್ಮ ಅಮೃತ ಹಸ್ತದಿಂದ ಅಣಿ ವೀರಭದ್ರೇಶ್ವರ ಮೂರ್ತಿಗೆ ರಜತ ಕವಚದಿಂದ ವಿಶೇಷ ಪೂಜೆ ಅಭಿಷೇಕ ಮಹಾ ಮಂಗಳಾರತಿ ಮಾಡಿದರು.

ವರದಿ- ಚಂದ್ರಶೇಖರ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ