ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಮಥುರಾ ಪ್ಯಾರಡೈಸ್, ಶಿವಮೊಗ್ಗ ರಜತೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಕನಕ ಜಯಂತಿ ಆಚರಣೆ

ಶಿವಮೊಗ್ಗ : ಶ್ರೀ ಶಂಕರನಾರಾಯಣ ಕಾಶಿ ಟ್ರಸ್ಟ್(ರಿ.) ಆಶ್ರಯದಲ್ಲಿ ದಿನಾಂಕ: 24-11-2024, ಭಾನುವಾರ ಸಂಜೆ 6:00 ರಿಂದ ಶ್ರೀ ಪ್ರಸನ್ನ ಗಣಪತಿ(ಬಲಮುರಿ) ದೇವಸ್ಥಾನ, ರವೀಂದ್ರನಗರ, ಶಿವಮೊಗ್ಗ ಇಲ್ಲಿ ಸಂಜೆ 6:00ಕ್ಕೆ ಮಥುರಾ ಪ್ಯಾರಡೈಸ್, ಶಿವಮೊಗ್ಗ ರಜತೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಕನಕ ಜಯಂತಿ ಆಚರಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ನಿರ್ಮಲಾ ಕಾಶಿ, ಅಧ್ಯಕ್ಷರು, ಎಸ್.ಎನ್.ಕೆ ಟ್ರಸ್ಟ್(ರಿ.), ಶಿವಮೊಗ್ಗ ಇವರು ವಹಿಸುವರು. ಮುಖ್ಯ ಅತಿಥಿಗಳಾಗಿ ಶ್ರೀಯುತ ಉಮಾಶಂಕರ ಉಪಾಧ್ಯಾಯ, ಅಧ್ಯಕ್ಷರು ಶ್ರೀ ಪ್ರಸನ್ನ ಗಣಪತಿ (ಬಲಮುರಿ) ದೇವಸ್ಥಾನ, ರವೀಂದ್ರನಗರ, ಶಿವಮೊಗ್ಗ ಶ್ರೀಯುತ ಎನ್. ಗೋಪಿನಾಥ್ ಮಾಲೀಕರು-ಮಥುರಾ ಪ್ಯಾರಡೈಸ್, ಸಮಾಜ ಸೇವಕರು, ಶಿವಮೊಗ್ಗ ಶ್ರೀಯುತ ಎನ್. ಮಂಜುನಾಥ್ ಅಧ್ಯಕ್ಷರು, ಶಿವಮೊಗ್ಗ ಪ್ರೆಸ್ ಟ್ರಸ್ಟ್, ಶಿವಮೊಗ್ಗ, ಶ್ರೀಯುತ ರವಿಕುಮಾರ್ ಎಸ್., ಅಧ್ಯಕ್ಷರು, ಭೋವಿ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ಸರ್ಕಾರ, ವಿದ್ವಾನ್ ಶ್ರೀ ಶೃಂಗೇರಿ ಹೆಚ್. ಎಸ್. ನಾಗರಾಜ್ ಪ್ರಾಂಶುಪಾಲರು, ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ, ಶಿವಮೊಗ್ಗ ಇವರು ಆಗಮಿಸುವರು.
ಸಂಜೆ 6:45 ರಿಂದ ಜಿಲ್ಲಾ ಮಟ್ಟದ ಸವಾಲಾತ್ಮಕ ಭಾವಗೀತೆ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಸಂಜೆ 7:00 ರಿಂದ ಬಹುಮಾನಿತರಿಂದ ಕನ್ನಡ ಭಾವಗೀತೆ ಗಾಯನವಿದ್ದು ಸಂಜೆ 7:15 ರಿಂದ ಶ್ರೀ ಕನಕದಾಸರ ಪದಗಳ ಗಾಯನವನ್ನು ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ, ಶಿವಮೊಗ್ಗ ಇವರು ನಡೆಸಿಕೊಡುವರು ಎಂದು ಪ್ರಕಟಣೆ ತಿಳಿಸಿದೆ.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ