ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಶೇ.61, ಸಾಲಗುಂದಾ-ಶೇ.65, ಗಾಂಧಿನಗರದಲ್ಲಿ ಶೇ.64ರಷ್ಟು ಶಾಂತಿಯುತ ಮತದಾನ : ಅರುಣ ಹೆಚ್.ದೇಸಾಯಿ
ಸಿಂಧನೂರು ತಾಲೂಕಿನಲ್ಲಿ ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ಶನಿವಾರ ನಗರ ಮತ್ತು ಗ್ರಾಮ ಪಂಚಾಯತಿಗಳಿಗೆ ಉಪ ಚುನಾವಣೆಗಳು ಜರುಗಿದ್ದು ನಗರದಲ್ಲಿ ಶೇ. 61.19, ಸಾಲಗುಂದಾ ಗ್ರಾ,ಪಂನಲ್ಲಿ ಶೇ.64.86 ಮತ್ತು ಗಾಂಧಿನಗರದಲ್ಲಿ ಶೇ.64.15ರಷ್ಟು ಶಾಂತಿಯುತ ಮತದಾನವಾಗಿದೆ ಎಂದು ತಹಶೀಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳಾದ ಅರುಣ ಹೆಚ್. ದೇಸಾಯಿ ತಿಳಿಸಿದರು.
ಅವರು ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡುತ್ತಾ, ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ಹೊಸ ಸದಸ್ಯರ ಆಯ್ಕೆಗಾಗಿ ಉಪ ಚುನಾವಣೆ ನಡೆದಿದ್ದು, ನಗರದ ಜಿಲ್ಲಾ ಪಂಚಾಯತಿ ಸಿಂಧನೂರು ನಗರದ ವಾರ್ಡ್ ನಂ-6ರಲ್ಲಿ ಒಟ್ಟು 2108 ಮತದಾರರಿದ್ದು, 1033-ಪುರುಷ ಮತದಾರರು, 1075-ಮಹಿಳಾ ಮತದಾರರ ಪೈಕಿ 664 ಪುರುಷ ಮತದಾರರು, 626-ಮಹಿಳಾ ಮತದಾರರು ಸೇರಿ ಒಟ್ಟು-1290 ಮತಗಳನ್ನು ದಾಖಲಿಸಿ, ಶೇ.61.19ರಷ್ಟು ಮತದಾನವಾಗಿದೆ. ಎಂದು ನಗರಸಭೆ ಚುನಾವಣಾಧಿಕಾರಿ ವೀರೇಶ ಗೋನವಾರ ಹೇಳಿದರು.
ಇನ್ನು ಗಾಂಧಿನಗರ ಗ್ರಾಮ ಪಂಚಾಯತಿಯಲ್ಲಿ ಒಟ್ಟು 1102 ಮತದಾರರಿದ್ದು, 530-ಪುರುಷ ಮತದಾರರು, 572-ಮಹಿಳಾ ಮತದಾರರ ಪೈಕಿ 338-ಪುರುಷ ಮತದಾರರು, 369-ಮಹಿಳಾ ಮತದಾರರು ಸೇರಿ ಒಟ್ಟು-707 ಮತಗಳನ್ನು ದಾಖಲಿಸಿ, ಶೇ.64.15ರಷ್ಟು ಮತದಾನವಾಗಿದೆ.
ಅದೇ ರೀತಿ ಸಾಲಗುಂದಾ ಗ್ರಾಮ ಪಂಚಾಯತಿಯಲ್ಲಿ ಒಟ್ಟು 1068 ಮತದಾರರಿದ್ದು, 493-ಪುರುಷ ಮತದಾರರು, 575-ಮಹಿಳಾ ಮತದಾರರ ಪೈಕಿ 339-ಪುರುಷ ಮತದಾರರು, 354-ಮಹಿಳಾ ಮತದಾರರು ಸೇರಿ ಒಟ್ಟು-693 ಮತಗಳನ್ನು ದಾಖಲಿಸಿ, ಶೇ.64.88ರಷ್ಟು ಮತದಾನವಾಗಿದೆ.
ಶಾಂತಿಯುತ ಮತದಾನ: ಬೆಳಿಗ್ಗೆ 7.00ರಿಂದ ಆರಂಭವಾದ ಮತದಾನ ಸಾಯಂಕಾಲ 5.00ರವರೆಗೆ ಎಲ್ಲಾ ಮಗಟ್ಟೆಗಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು.
ಮತ ಎಣಿಕೆ : ಇಂದು ಸಂಜೆ ಟ್ರಜರಿ ಸ್ಟ್ರಾಂಗ್ ರೂಮಿನಲ್ಲಿ ದಾಖಲಿಸಿದ ಮತಯಂತ್ರಗಳು ಮತ್ತು ಮತ ಪಟ್ಟಿಗೆಗಳನ್ನು ಇಟ್ಟಿದ್ದು, ಖಜಾನೆ ಇಲಾಖೆಯ ಸುಪರ್ಧಿಗೆ ವಹಿಸಲಾಗಿದೆ. ಇದೇ ನವೆಂಬರ್-26ರAದು ಮಂಗಳವಾರ ಬೆಳಿಗ್ಗೆ 8.00 ಗಂಟೆಯಿಂದ ತಹಶೀಲ್ದಾರರ ಕಛೇರಿಯಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತದೆೆ ಎಂದು ಚುನಾವಣಾಧಿಕಾರಿಗಳಾದ ದುರ್ಗಾಪ್ರಸಾದ, ವಿರುಪಣ್ಣ, ಸಹಾಯಕ ಚುನಾವಣಾಧಿಕಾರಿ ರಾಮದಾಸ ನಾಯ್ಕ ತಿಳಿಸಿದರು.