ಮುರಳಿಯ ಕ್ಷಣಿಕ ಸುಖಕ್ಕಾಗಿ ಆಕರ್ಷಿತಳಾಗಿ ಭಾರತಿ ಆ ದಿನ ಎಲ್ಲವನ್ನೂ ಮರೆತು ಕಣ್ಣಿದ್ದರೂ ಕುರುಡಾಗಿದ್ದಳು.
ಸಿನಿಮಾ, ಪಾರ್ಕು, ಪಾರ್ಟಿ…. ಅಂತ ಮನಸ್ಸು ಬಂದ ಕಡೆ ತಿರುಗುತ್ತಾ ಮುರಳಿ ಜೊತೆ ಎಂಜಾಯ್ ಮಾಡಲಾರಂಭಿಸಿದಳು ಭಾರತಿ.
ಕಳ್ಳ ಬೆಕ್ಕು ಕಣ್ಣು ಮುಚ್ಚಿ ಕದ್ದು ಹಾಲು ಕುಡಿದಂತೆ ಪ್ರತಿದಿನ ರಸಿಕ ಆಟ ಆಡಲಾರಲ್ಲಿಸಿದಳು.
ಪಾಪ ಭಾರತಿಗೆ ಗೊತ್ತಿರಲಿಲ್ಲ ಇದರ ಪರಿಣಾಮ ಮುಂದೆನಾಗುತ್ತದೆ ಅಂತ.
ಕೆಲವು ತಿಂಗಳುಗಳು ಉರುಳುವುದರಲ್ಲಿಯೇ ಭಾರತಿಯ ಗಂಡನಾದ ರಂಗನಾಥನಿಗೆ ಅನುಮಾನ ಬಂದಿತ್ತು.
ಭಾರತಿ ಎಲ್ಲಿ ಹೋಗುತ್ತಾಳೆ ? ಏನು ಮಾಡುತ್ತಾಳೆ ?
ತನಗೆ ಬಂದಿರುವ ಅನುಮಾನ ಹೋಗಲಾಡಿಸಿಕೊಳ್ಳಬೇಕೆಂದುಕೊಂಡು ರಂಗನಾಥ ಅಂದೇ ಭಾರತಿಯನ್ನು ಫಾಲೋ ಮಾಡಿದನು.
ಆಗ ಅನಾವರಣಗೊಂಡಿತು ಭಾರತಿಯ ತೆರೆ ಮರೆಯ ರಸಿಕ ರಸಲೀಲೆ.
ಒತ್ತರಿಸಿ ಬರುತ್ತಿದ್ದ ಆ ಕೋಪ ಮತ್ತು ದುಃಖವನ್ನು ತುಂಬ ಕಷ್ಟದಿಂದ ತಡೆದುಕೊಂಡು ಅಲ್ಲಿಂದ ತೆರಳಿದನು ರಂಗನಾಥ.
ಭಾರತಿ ಮನೆಗೆ ಬಂದಿದ್ದಾಗ ರಂಗನಾಥ ಕೋಪ – ತಿರಸ್ಕಾರ, ಅಸಹ್ಯದಿಂದ ಮುಖಕ್ಕೆ ಕ್ಯಾಕರಿಸಿ ಉಗಿದನು.
ಅವಾಚ್ಯ ಶಬ್ದಗಳಿಂದ ಬೈಯುತ್ತಾ ಬಲವಾಗಿ ಸೊಂಟಕ್ಕೆ ಜಾಡಿಸಿ ಒದ್ದನು.
ಭಾರತಿ ಧಡಾರನೆ ಮುಗ್ಗರಿಸಿ ಬಿದ್ದಳು.
ವ್ಯಾಗ್ರಗೊಂಡಿದ್ದ ರಂಗನಾಥ ಸೀಮೆಎಣ್ಣೆ ತಂದು ಅವಳ ತಲೆ ಮೇಲೆ ಸುರಿದು ಬೆಂಕಿಕಡ್ಡಿ ಗೀಚಿದನು; ಆಗ –
“ಅಪ್ಪ” ಎಂದು ಅಳುತ್ತಾ ಆರು ವರ್ಷದ ಮಗು ಕೀರ್ತಿ ಅಡ್ಡ ಬಂದಿದ್ದಳು.
ರಂಗನಾಥನ ಕೈಯಲ್ಲಿದ್ದ ಬೆಂಕಿ ಕಡ್ಡಿ ಆರಿತು.
ಮುಗ್ಧ ಮುಖದ ಮಗುವಿನ ಕಂಗಳಲ್ಲಿ ಕಂಬನಿಯನ್ನು ಕಂಡು ಅವನ ಕೋಪ ಕರಗಿತ್ತು.
ತನ್ನ ಮಗುವಿಗಾಗಿ, ತನ್ನ ಮಗುವಿನ ಭವಿಷ್ಯಕ್ಕಾಗಿ ರಂಗನಾಥ ಹೆಂಡತಿ, ಮನೆ ಮಠ… ಎಲ್ಲವನ್ನು ಬಿಟ್ಟು ಉಟ್ಟ ಬಟ್ಟಿಯಲ್ಲಿಯೇ ತನ್ನ ಮಗುವಿನೊಂದಿಗೆ ಅದು ಎಲ್ಲಿಗೋ ಹೊರಟು ಹೋಗಿದ್ದ.
ಭಾರತಿ ಸಂಪೂರ್ಣ ಹೌಹಾರಿದ್ದಳು.
ಅವಳು ಅಳುತ್ತಿದ್ದಳು.
ಈಗ ಅತ್ತರೆ ಏನು ಪ್ರಯೋಜನ ?
ಅಳುತ್ತಿರುವ ಭಾರತಿಗೆ ಪ್ರಿಯಕರ ಮುರಳಿ ಧೈರ್ಯ ಮತ್ತು ಸಮಾಧಾನ ಹೇಳಿದನು.
ಮುರಳಿಯ ಪ್ರೀತಿಯ ಆಸರೆಯಲ್ಲಿ ಭಾರತಿ ಬಹುಬೇಗನೆ ಎಲ್ಲವನ್ನು ಮರೆತು ಮೊದಲಿನಂತಾದಳು.
ಭಾರತಿ-ಮುರಳಿ ಮೊದಲಿನಂತೆ ತಮ್ಮ ಆ ಹಳೆ ಜಾಳಿಯನ್ನೇ ಮುಂದುವರಿಸಿದರು.
ಆಗ ಮುಂದೆ ಮತ್ತೇನು ನಡೆಯಿತು?
ಮುರಳಿಯ (ಧರ್ಮ) ಪತ್ನಿ ಸುಮಾ ಮತ್ತು ಸುಮಳ ತಮ್ಮ ಬಲಭದ್ರ ಕೋಡಿಕೊಂಡು ಅದೇನೋ ಸಂಚು ಮಾಡಿದರು.
“ಆ ಭಾರತಿ ಮುಂಡೆಗೊಂದು ಗತಿ ಕಾಣಿಸಿ ನಿಮ್ಮಿಬ್ಬರ ಸಂಸಾರ ಜೀವನ ಸರಿ ಹೊಂದುವಂತೆ ಮಾಡ್ತ್ತೇನೆ. ನೀನು ನಿಶ್ಚಿಂತೆಯಿಂದ ಇರು ಅಕ್ಕ”ಎಂದು ಹೇಳಿದನು ಬಲಭದ್ರ.
ಬಲಭದ್ರ ಗೋಮುಖವ್ಯಾಘ್ರನಂತೆ ನುಗ್ಗಿದನು.
ಭಾರತಿ ಹೌಹಾರಿ ಅರಚಿದಳು.
ಕಾರು ಅಲ್ಲಿ ಬಂದು ನಿಂತಿಕೊಂಡಿತು.
ಕುಡಿತದ ಮತ್ತಿನಲ್ಲಿದ್ದ ಮುರಳಿ ಕಾರಿನಿಂದ ಕೆಳ ಇಳಿದು ತೂರಾಡುತ್ತ ಬಂಗ್ಲೆ ಒಳಗೆ ಬಂದನು.
ನಂಬಲಾಗದೆ ಬೆಚ್ಚಿಬಿದ್ದನು.
“ಇದರಲ್ಲಿ ನನ್ನ ತಪ್ಪಿಲ ಭಾವ, ಭಾರತಿ… ಇವಳೇ ನನ್ನ ಬಲವಂತ ಮಾಡಿದ್ದಳು. ನೀನು ಅಕಸ್ಮಿಕವಾಗಿ ಬಂದಿದ್ದನ್ನು ಕಂಡು ಈಗ ಈ ರೀತಿ ಅರಚುತ್ತ ನಾಟಕವಾಡುತ್ತಿದ್ದಾಳೆ”ಎಂದು ಹೇಳುತ್ತಾ ಮುರಳಿಯ ಕಾಲಿಗೆ ಬಿದ್ದನು ಬಲಭದ್ರ.
ಮುರಳಿ ಕೋಪದಿಂದ ಎದೆಗೆ ಒದ್ದನು.
ಚೇತರಿಸಿಕೊಂಡು ಮೇಲೆದ್ದ ಬಲಭದ್ರ ಅದೇನೇನೋ ಸುಳ್ಳುಗಳನ್ನು ಹೇಳಿದನು.
ಅಪಾಯವನ್ನು ಅರಿತ ಬಲಭದ್ರ ತಡ ಮಾಡದೆ ಕಾಲಿಗೆ ಬುದ್ಧಿ ಹೇಳಿದನು.
ಆಗ ಮುರಳಿ ಕೋಪ ಮತ್ತು ತಿರಸ್ಕಾರದಿಂದ-
“ಭಾರತಿ… ನಾನು ನಿನ್ನನ್ನು ಪ್ರೇಮ ದೇವತೆ ಅಂತ ತಿಳ್ಕೊಂಡಿದ್ದೆ. ಆದರೆ ನೀನು… ನೀನಿಂಥ ಕೊಳಕು ಸೂಳೆ ಅಂತ ನಾನ್ ಅನ್ಕೊಂಡಿರ್ಲಿಲ್ಲ ಭಾರತಿ!”
“ನಾನು ಅಂತವಳಲ್ಲ ಮುರಳಿ, ದಯವಿಟ್ಟು ನನ್ನ ನಂಬಿ.”
“ನಾನು… ಇನ್ನು ನಿನ್ನನ್ನು ನಂಬಬೇಕಾ? ಸೂ.. ಎಂದೆಂದಿಗೂ ಸೂನೇ ಅಂತ ಇವತ್ತು ನೀನು ಪ್ರೂವ್ ಮಾಡಿ ತೋರಿಸಿರುವಾಗ ಇನ್ನೂ ಸಹ ನಾನು ನಿನ್ನಂತವಳನ್ನು ನಂಬಬೇಕ ಭಾರತಿ? ಇಲ್ಲಿವರೆಗೂ ನಿನ್ನಂಥ ಕೊಳಕು ಸೂಳೆಯನ್ನು ನಂಬಿ ನಾನು ಹಾಳಾಗಿದ್ದು ಸಾಕು. ಇನ್ನು ಮುಂದೆಯಾದರೂ ನಾನು ಎಚ್ಚೆತ್ತುಕೊಂಡು ಒಬ್ಬ ಒಳ್ಳೆ ಮನುಷ್ಯನಾಗಿ ಬಾಳಲು ಪ್ರಯತ್ನಿಸುತ್ತೇನೆ. ಇವತ್ತಿಗೆ ನನ್ನ ನಿನ್ನ ಋಣಾನುಬಂಧ ಮುಗುದೋಯ್ತು. ದಯವಿಟ್ಟು ಇನ್ನು ಮುಂದೆ ನನ್ನ ತಂಟೆಗೆ ಬರಬೇಡ ಭಾರತಿ. ಬಂದರೆ ನೀನು ಬದುಕುಳಿಯಲ್ಲ!” ಎಂದಬ್ಬರಿಸಿ ಅಲ್ಲಿಂದ ಹೋಗುತ್ತಿರುವಾಗ ಬೆಚ್ಚಿಬಿದ್ದಿದ್ದ ಭಾರತಿ-
“ನಿಂತ್ಕೊಳ್ಳಿ ಮುರಳಿ. ನನ್ನ ನಂಬಿ ಮುರಳಿ”ಎಂದು ಹೇಳುತ್ತಾ ಕೈ ಹಿಡಿದು ತಡಿಲೆತ್ನಿಸಿದಾಗ –
“ಥೂ… ತಿರಸ್ಕಾರ ಇರ್ಲಿ ನಿನ್ನಂತ ಕೊಳಕು ಸೂಳಿಯರಿಗೆ! ನಿನ್ನ ಮುಖ ನೋಡುತ್ತಿದ್ದರೆ ಅಸಹ್ಯ- ಹೇಸಿಗೆ ಉಂಟಾಗುತ್ತದೆ ನನಗೆ. ಬಿಡೆ ನನ್ನ ಕೈಯನ್ನ!”ಎಂದು ಪುನಃ ಅಬ್ಬರಿಸುತ್ತಾ ಬಲವಾಗಿ ಹಿಂದಕ್ಕೆ ತಳ್ಳಿದನು ಮುರಳಿ.
ಭಾರತ ನೆಲಕ್ಕೆ ಮುಗ್ಗರಿಸಿದಳು.
ಆಗವಳ ಸಹನೆಯ ಕಟ್ಟೆ ಹೊಡೆದು-
“ಮುರಳಿ…” ಎಂದು ಅರಚಿದಳು.
“ಥೂ ಕತ್ತೆ ಮುಂಡೆ!”ಎಂದು ಕ್ಯಾಕರ್ಸಿ ಉಗಿದು ಅಲ್ಲಿಂದ ಹೊರಟು ಹೋಗಿದ್ದನು ಮುರಳಿ.
ಕುಡಿತದ ಮತ್ತಿನಲ್ಲಿದ್ದ ಮುರಳಿ ಆಗ ತಾಳ್ಮೆ ಮತ್ತು ಯೋಚಿಸುವ ಶಕ್ತಿ ಕಳೆದುಕೊಂಡಿದ್ಥನು.
ಭಾರತಿ ಹೌಹಾರಿದಳು.
“‘ಅಯ್ಯೋ… ಇದೆಂಥ ವಿಚಿತ್ರ ಈ ಬದುಕು. ನಾನು ಮಾಡಿರುವ ತಪ್ಪಾದರೂ ಏನು? ನಾನೀಗ ಯಾರಗೋಸ್ಕರ ಬದುಕುಳಿಯಲಿ? ಈ ನನ್ನ ಕೊಳಕು ಬದುಕಿಗೆ ಏನರ್ಥ ಇದೆ ಅಂತ ನಾನು ಬದುಕುಳಿಯಲಿ? ಇಲ್ಲ… ನಾನು ಬದುಕುಳಿಯಲು ಸಾಧ್ಯ ಇಲ್ಲ! ನಾನು ತಪ್ಪು ಮಾಡಿದ್ದೇನೆ! ಭಾರತಿ ತಪ್ಪು ಮಾಡಿದ್ದಾಳೆ! ಭಾರತಿ ಇನ್ನು ಬದುಕಿರಬಾರದು! ಭಾರತಿಯ ಈ ಬದುಕು ದುರಂತದಲ್ಲಿ ಅಂತ್ಯಗೊಳ್ಳಬೇಕು…!”ಎಂದು ನಿರ್ಧರಿಸಿದಳು ಭಾರತಿ.
ಭಾರತಿ ಕಣ್ಣುಗಳು ಮುಚ್ಕೊಂಡು ಭೋರ್ಗರಿಯುತ್ತಾ ಹರಿಯುತ್ತಿರುವ ನದಿಯಲ್ಲಿ ಧುಮ್ಕಿದಳು.
ದೊಡ್ಡ ಅಲೆಯೊಂದು ತನ್ನ ಕೆನ್ನಾಲಿಗೆ ಚಾಚಿ, ಭಾರತಿಯನ್ನು ಬರ ಮಾಡಿಕೊಂಡಿತ್ತು.
ಇಹ ಲೋಕದಿಂದ ಪರಲೋಕ ಸೇರಿಕೊಂಡಿದ್ದಳು ಭಾರತಿ.
- ಜಿ ಎಲ್ ನಾಗೇಶ್