ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾಜಿ ಸಚಿವ ಸುರೇಶ್ ಕುಮಾರ್ ಸಕಾಲಿಕ ನೆರವು ಕಾಲು ಉಳಿಸಿತು!

ಬೆಂಗಳೂರು : ಇದೊಂದು ಮನಸ್ಸಿಗೆ ಸಮಾಧಾನ ಮತ್ತು ತೃಪ್ತಿ ಕೊಟ್ಟಿರುವ ವಿದ್ಯಮಾನ, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಮಾಕ್ಷಿಪಾಳ್ಯ ವಾರ್ಡಿನಲ್ಲಿ ಶ್ರೀ. ಎ. ಮೂರ್ತಿ ಎಂಬ ನಾಗರಿಕರಿದ್ದಾರೆ
ಅವರದು ಸೆಕ್ಯೂರಿಟಿ ಕೆಲಸ ಮಾಡುವ ಉದ್ಯೋಗ, ಅಂದರೆ ಅಷ್ಟೇನು ಹೆಚ್ಚಿರದ ವೇತನ ಅವರಿಗೆ ಸಿಗುತ್ತಿದೆ ಅವರಿಗೆ ಇಬ್ಬರು ಗಂಡು ಮಕ್ಕಳು ಕುಟುಂಬ ನಿರ್ವಹಣೆಗಾಗಿ ಅವರ ಪತ್ನಿ ಅವರಿವರ ಮನೆ ಕೆಲಸ ಮಾಡುತ್ತಿರುತ್ತಾರೆ.
ಬಿ.ಬಿ.ಎಂ.ಪಿ ವತಿಯಿಂದ ನಿರ್ವಹಿಸಲಾಗುವ “ಒಂಟಿ ಮನೆ” ಯೋಜನೆಯಡಿ ಕಟ್ಟಿಸಿ ಕೊಟ್ಟಿರುವ 250 ಚದರ ಅಡಿಗಳ ಮನೆಯಲ್ಲಿ ವಾಸವಿದ್ದು ಜೀವನ ನಡೆಸುತ್ತಿರುತ್ತಾರೆ.
ಇಂಥಹ ಆರ್ಥಿಕವಾಗಿ ತೀರಾ ದುರ್ಬಲವಾಗಿರುವ ಈ ಕುಟುಂಬಕ್ಕೆ ಸಿಡಿಲು ಬಡಿದಂತೆ, ಸೆಪ್ಟಂಬರ್ ತಿಂಗಳ ಕೊನೆಯ ವಾರದಲ್ಲಿ ಇದ್ದಕ್ಕಿದ್ದಂತೆ ಶ್ರೀ ಎ. ಮೂರ್ತಿಯವರ ಎಡಕಾಲಿನ ಕಿರುಬೆರಳಿನಲ್ಲಿ ರಕ್ತ ಸ್ರಾವವಾಗತೊಡಗಿತ್ತು.
ಆಗ ಸ್ಥಳೀಯ ವೈದ್ಯರ ಹತ್ತಿರ ಹೋದಾಗ ಕಾಲಿನ ಬೆರಳನ್ನು ತೆಗೆಯಬೇಕಾಗುತ್ತದೆ ಎಂದು ಗೊತ್ತಾಗುತ್ತದೆ.
ತದನಂತರ ಬೆಂಗಳೂರಿನ ಪ್ರಸಿದ್ಧ ಖಾಸಗಿ ಆಸ್ಪತ್ರೆಗೆ ಹೋದಾಗ ಕಿರುಬೆರಳಿನಿಂದ ಎಡಗಾಲಿನ ತೊಡೆಯ ಭಾಗದವರೆಗೂ ರಕ್ತ ಸಂಚಾರ ಇಲ್ಲದೆ ಇರುವುದರಿಂದ ಕಾಲು ತೆಗೆಯಬೇಕೆಂದು, ಇದಕ್ಕಾಗಿ ಎರಡು ಲಕ್ಷ ರೂ ಖರ್ಚಾಗುತ್ತದೆ ಎಂದು ತಿಳಿಸುತ್ತಾರೆ. ಅಲ್ಲದೆ ತಕ್ಷಣವೇ ಒಂದು ಲಕ್ಷ ರೂಗಳನ್ನು ಕಟ್ಟಬೇಕಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಅವರ ಹತ್ತಿರ ಅಷ್ಟು ಹಣ ಇಲ್ಲದ್ದಿದ್ದರಿಂದ ವಾಪಸ್ಸು ಮನೆಗೆ ಮರಳಿದರು. ಮನೆಯ ಬಳಿ ಇರುವ ಖಾಸಗಿ ನರ್ಸಿಂಗ್ ಹೋಂ ಗೆ ಹೋದಾಗ ಅವರಿಗೆ 45,000 ವೆಚ್ಚದಲ್ಲಿ ಕಿರುಬೆರಳನ್ನು ತೆಗೆಸಿ ಹಾಕಲಾಗುತ್ತದೆ.
ನಂತರ ಮತ್ತೆ ಅದೇ ಖಾಸಗಿ ಆಸ್ಪತ್ರೆಯಲ್ಲಿ ಮೂರ್ತಿ ಯಾವರ ಕಾಲಿನ CT ಸ್ಕ್ಯಾನ್ ಮಾಡಿದಾಗ ಅಲ್ಲಿನ ವೈದ್ಯರು ಹೇಳಿದ್ದು “ನಿಮ್ಮ ಕಾಲು ಉಳಿಸಲು ಒಂದು ಮಾರ್ಗವಿದೆ ಅದಕ್ಕೆ Vascular Surgery ಎಂದು ಕರೆಯುತ್ತಾರೆ. ಆದರೆ ಗ್ಯಾರಂಟಿ ಇಲ್ಲ.ಅದಕ್ಕಾಗಿ ₹ 7 ಲಕ್ಷ ರೂಗಳ ವೆಚ್ಚವಾಗುತ್ತದೆ.
ಅದಕ್ಕೂ ಉತ್ತಮವೆಂದರೆ ಬೇಗ ಕಾಲು ತೆಗೆಸಿದರೆ ಒಳ್ಳೆಯದು‌, ಇಲ್ಲದಿದ್ದಲ್ಲಿ ತೊಂದರೆ ಜಾಸ್ತಿಯಾಗಿ ಅವರ ಪ್ರಾಣಕ್ಕೆ ಕುತ್ತು ಬರಬಹುದಾದ ಸಂಭವ” ಇರುವುದಾಗಿ ತಿಳಿಸುತ್ತಾರೆ.
ಆಗ ಮನೆಯವರೆಲ್ಲ ಒಟ್ಟಿಗೆ ಕುಳಿತು ಚರ್ಚಿಸಿ ಕಾಲು ತೆಗೆಸುವ ನಿರ್ಧಾರವನ್ನು ಮಾಡುತ್ತಾರೆ.
ಅದರಂತೆ ನವೆಂಬರ್ 2ನೇ ವಾರದಲ್ಲಿ ಶ್ರೀ ಎ. ಮೂರ್ತಿಯವರಿಗೆ ಆ ಖಾಸಗಿ ಆಸ್ಪತ್ರೆಯಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಲು ದಿನಾಂಕವನ್ನು ಕೂಡಾ ನಿಗದಿ ಮಾಡಲಾಯಿತು.
ಈ ಕುಟುಂಬದ ಬವಣೆಯ ಕುರಿತು ಕರೆಕಲ್ಲಿನ ಸ್ಥಳೀಯ ಕಾರ್ಯಕರ್ತ‌ ಶ್ರೀ ರಾಜೇಶ್ ಎಂಬುವವರು ಎಲ್ಲಾ ವಿವರಗಳನ್ನು ನನಗೆ ತಿಳಿಸಿ ಆ ಮನೆಯವರ ಪರಿಸ್ಥಿತಿಯನ್ನು ನನ್ನ ಮುಂದೆ ಇಟ್ಟರು.
ನಾನು ಆಸ್ಪತ್ರೆಗೆ ಸಂಭಂದಿಸಿದ ಅವರ ಎಲ್ಲಾ ದಾಖಲೆಗಳನ್ನು ವಾಟ್ಸಪ್ ಮೂಲಕ ತರಿಸಿಕೊಂಡು ವಿಕ್ಟೋರಿಯಾ ಆಸ್ಪತ್ರೆಯ ಮೂಳೆ ಮತ್ತು ಕೀಲು ತಜ್ಞರಾದ ಡಾ. ಶರತ್ ಮತ್ತು ಡಾ. ರವಿ ಅವರೊಂದಿಗೆ ಚರ್ಚಿಸಿ ಆ ಕುಟುಂಬಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದೆ.‌ ವಿಕ್ಟೋರಿಯಾ ಆಸ್ಪತ್ರೆಯ ಆ ವೈದ್ಯರು ತಾವೇ ಮುತುವರ್ಜಿ ವಹಿಸಿ ಜಯದೇವ ಆಸ್ಪತ್ರೆಯಲ್ಲಿ ಈ ಕುರಿತು “Vascular Surgery” ಚಿಕಿತ್ಸೆ ಮಾಡುವ ಸೌಲಭ್ಯವಿದೆ ಎಂದು ನನಗೆ ತಿಳಿಸಿದರು.
ನಾನು ಜಯದೇವ ಆಸ್ಪತ್ರೆಯ ನಿರ್ದೇಶಕರೊಂದಿಗೆ ಫೋನ್ ಮುಖಾಂತರ ಮಾತನಾಡಿ ಶ್ರೀ. ಮೂರ್ತಿಯವರಿಗೆ Vascular Surgery ಯನ್ನು ನಡೆಸಿಕೊಡುವಂತೆ ಕೋರಿದೆ. ಒಂದು ಪತ್ರವನ್ನು ಸಹ ನಿರ್ದೇಶಕರಿಗೆ ಈ ಕುರಿತು ಬರೆದೆ.

ಅದೇ ರೀತಿ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ. ರವೀಂದ್ರನಾಥ್ ಮತ್ತು ಇತರೆ ಸಿಬ್ಬಂದಿಗಳ ಸಹಕಾರದಿಂದ 28.11.2024ರಂದು ಶ್ರೀ. ಮೂರ್ತಿಯವರಿಗೆ Vascular Surgery ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿ ನಡೆದಿದೆ.
ಶ್ರೀ ಮೂರ್ತಿಯವರ ಕಾಲು ಇಂದು ನೋವಿನಿಂದ ಪಾರಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ‌‌.
ನನ್ನ ಮನವಿಗೆ ಓಗೊಟ್ಟು ಸಂಪೂರ್ಣ ಉಚಿತವಾಗಿ ಶಸ್ತ್ರಚಿಕಿತ್ಸೆ ಆಗಲು ಸಹಕರಿಸಿದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಗೆ ಮತ್ತು ಜಯದೇವ ಆಸ್ಪತ್ರೆಯ ವೈದ್ಯರ ತಂಡಕ್ಕೆ ನನ್ನ ಧನ್ಯವಾದಗಳು.
ಈ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡುವ ಬವಣೆ ತಪ್ಪಿತು ಎಂದು ಮಾಜಿ ಸಚಿವ ಶ್ರೀ ಎಸ್ ಸುರೇಶ ಕುಮಾರ್ ಅವರು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ