ಕಲಬುರಗಿ: ಬೆಂಗಳೂರು ಮಹಾನಗರದಲ್ಲಿ ಪ್ರಗತಿ ಮೀಡಿಯಾ ಅವಾಡ್೯ ದಾಸರಹಳ್ಳಿ ಇವರ ವತಿಯಿಂದ ಪ್ರತಿವರ್ಷ ಕೊಡಮಾಡುವ ‘ ಕರ್ನಾಟಕ ಐಕಾನಿಕ್ ಎಕ್ಸಲೆನ್ಸ್ ಅವಾಡ್೯ ಪ್ರಶಸ್ತಿಗೆ ಇದೇ ಕಲ್ಯಾಣ ಕರ್ನಾಟಕ ಹೆಬ್ಬಾಗಿಲು ಎಂದೇ ಪ್ರಖ್ಯಾತಿ ಪಡೆದ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಸಮಾಜದ ಸಂಘಟನೆ ಜೊತೆ ಜೊತೆಯಲ್ಲಿ ಅನೇಕ ಶರಣರ ಜನ್ಮ ದಿನದಂದು ಅನೇಕ ಪೂಜ್ಯರ ಹೆಸರಿನಲ್ಲಿ ಸಾವಿರಾರು ಜನರಿಗೆ ಉಚಿತ ಕ್ಷೌರ ಸೇವೆಯನ್ನು ಗುರುತಿಸಿ ಡಾ.ಶ್ರೀ ಸೋಮಶೇಖರ್ ಐ.ಎ.ಎಸ್ ಅಧಿಕಾರಿ ಇವರು ‘ಕರ್ನಾಟಕ ಐಕಾನಿಕ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಮಾಡಿದರು. ಮತ್ತು ಇದೇ ಸಂದರ್ಭದಲ್ಲಿ – ಅಚಲವಾದ ಆತ್ಮವಿಶ್ವಾಸ ಹೊಂದಿದ್ದರೆ, ಉತ್ತಮ ಸಾಧನೆ ಸಾಧ್ಯ
: ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲ. ಅಚಲವಾದ ಆತ್ಮ ವಿಶ್ವಾಸವನ್ನು ಹೊಂದಿದ್ದರೆ, ಉತ್ತಮ ಸಾಧನೆಯನ್ನು ಸಾಧಿಸಬಹುದು. ಮತ್ತು ಸಾಧನೆಗೆ ಗುರಿ ಅತಿ ಮುಖ್ಯ, ಗುರಿ ಸಾಧನೆಯ ಸಮಯದಲ್ಲಿ ಸಮಸ್ಯೆ ಸಹಜ. ಆದರೆ ಗುರಿ ಅಚಲವಾದರೆ ಅಸಾಧಾರಣವಾದ ಸಾಧನೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಬೆಂಗಳೂರು ನಗರದ ಸದಾಶಿವ ನಗರದ ಹೈಡ್ ಪಾರ್ಕ ಅಪಾಟ್೯ ಹೋಟೆಲ್ ರಾಜ್ ಮಹಲ್ ವಿಲಾಸ ಎಕ್ಸ್ಟೇಶನ್ ಬೆಂಗಳೂರಿನಲ್ಲಿ ಏರ್ಪಡಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಅನೇಕ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಅನೇಕ ಚಿತ್ರರಂಗದ ಕಲಾವಿದರು,ನಾಯಕರು,ಸಂಗೀತಗಾರರು ಹಾಗೂ ಡಾ.ಇಶಾನಿ ಗಾಯಕ ನಟಿ ಮತ್ತು ವೈದ್ಯರು,ಬಿಗ್ ಕಂಟೇಸ್ಟ್ ಹಾಗೂ ಇತರ ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆ- ರಶ್ಮೀ ಪ್ರಭುಲಿಂಗಪ್ಪ. ಕಾರ್ಯಕ್ರಮದ ನೇತೃತ್ವ – ಆದರ್ಶ ಜೈನ್, ಬೆಂಗಳೂರು ನೆರವೇರಿಸಿದರು.
