ವಿಜಯನಗರ/ಹಗರಿಬೊಮ್ಮನಹಳ್ಳಿ: ಕಡಲಬಾಳು, ಅಡವಿ ಆನಂದದೇವನಹಳ್ಳಿ, ಬಾಚಿಗೊಂಡನಹಳ್ಳಿ, ಹಗರಿ ಕ್ಯಾದಿಗಿಹಳ್ಳಿ, ಅಂಕಸಮುದ್ರ, ಪಿಂಜಾರ್ ಹೆಗ್ಡಾಳ್, ಹೊಸ ಆನಂದ ದೇವನಹಳ್ಳಿ, ಈ ಗ್ರಾಮಗಳ ರೈತರು ಮಳೆ ಅವಲಂಬಿಸಿ ಮಳೆ ಬಂದರೆ ಬೆಳೆ, ಮಳೆ ಬರದಿದ್ದರೆ ರೈತರ ಭೂಮಿ ಎಲ್ಲಾ ಬೆಳೆಯಿಲ್ಲದೆ ಬಿಕೋ ಎನ್ನುತ್ತಿದ್ದಂತಹ ರೈತರ ಅನೇಕ ವರ್ಷಗಳ ಕನಸು ರೈತರ ಜಮೀನುಗಳಿಗೆ ನೀರು ಹರಿಸುವ ಯೋಜನೆ ಚಿಲವಾರ ಬಂಡಿ ಏತ ನೀರಾವರಿ ಕಾಮಗಾರಿ ಹತ್ತು ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿದ್ದಂತಹ ಈ ಕಾಮಗಾರಿ ಕ್ಷೇತ್ರದ ರೈತನ ಮಗ ರೈತರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿರುವ ಹಾಗೂ ಇನ್ನು ಅನೇಕ ನೀರಾವರಿ ಹಾಗೂ ಕೆರೆಗಳನ್ನು ತುಂಬಿಸುವ ಯೋಜನೆಯ ಕನಸನ್ನು ಕಂಡಿರುವ ರೈತರ ಭೂಮಿಗೆ ನೀರು ಹರಿಸುವ ಸಲುವಾಗಿ ಈ ಭಾಗದ ರೈತರ ಬೇಡಿಕೆಯಂತೆ ಯೋಜನೆಯನ್ನು ವೇಗವಾಗಿ ಮುಗಿಸಿ ಇದೇ ವರ್ಷದಲ್ಲಿ ರೈತರ ಭೂಮಿಗೆ ನೀರು ಹರಿಸಲು ಪಣತೊಟ್ಟಿರುವ ಕ್ಷೇತ್ರದ ಶಾಸಕರಾದಂತಹ ಸನ್ಮಾನ್ಯ ಶ್ರೀ ಕೆ ನೇಮಿರಾಜ ನಾಯ್ಕ ಇವರು ಕಳೆದ ವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕೆಲವೇ ದಿನಗಳಲ್ಲಿ ಟ್ರಯಲ್ ರನ್ ಮಾಡುವ ನಿಟ್ಟಿನಲ್ಲಿ ಈ ಚಿಲವಾರ ಬಂಡಿ ಯೋಜನೆ ಕಾಮಗಾರಿ ವೇಗವಾಗಿ ನಡೀತಾ ಇದೆ ಈ ಕಾಮಗಾರಿ ವೇಗವಾಗಿ ನಡೆಯಲು ಸಹಕರಿಸಿದ ರೈತರಿಗೂ ಹಾಗೂ ಪಕ್ಷಾತೀತವಾಗಿ ಕಾಮಗಾರಿ ಬೇಗ ಮುಗಿಸಲು ಸಹಕಾರ ನೀಡುತ್ತಿರುವ ಈ ಭಾಗದ ಇಲ್ಲಾ ರೈತ ಮುಖಂಡರಿಗೂ ಧನ್ಯವಾದಗಳನ್ನು ತಿಳಿಸಿದರು.
ವರದಿಗಾರ- ಎನ್. ಚಂದ್ರಗೌಡ
