ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಬಸ್ ಒದಗಿಸಿದ ಕೆ.ಎಸ್.ಆರ್.ಟಿ.ಸಿ: ರಸ್ತೆ ತಡೆ ಮುಷ್ಕರ ಕೈ ಬಿಟ್ಟ ವಿದ್ಯಾರ್ಥಿ ಸಂಘಟನೆ

ಶಿವಮೊಗ್ಗ: ಭದ್ರಾವತಿ ಬಸ್ ನಿಲ್ದಾಣದಿಂದ ಶಿವಮೊಗ್ಗ ನಗರಕ್ಕೆ ಹಾಗೂ ಹೊಳೆಹೊನ್ನೂರಿನಿಂದ ಭದ್ರಾಾವತಿ ನಗರಕ್ಕೆ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ಬಸ್ಸಿನ ಸಮಸ್ಯೆಯಾಗಿದ್ದು ಪ್ರತಿ ದಿನ ಭದ್ರಾವತಿ ನಗರದಿಂದ 600 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶಿವಮೊಗ್ಗ ನಗರಕ್ಕೆ ಕಾಲೇಜಿಗೆ ಹೋಗುತ್ತಿದ್ದು ಸರಿಯಾದ ಸಮಯಕ್ಕೆ ಬಸ್ಸುಗಳಿಲ್ಲದೆ ತೊಂದರೆ ಕೊಡುತ್ತಿದ್ದು ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಬಸ್ಸಿನ ವ್ಯವಸ್ಥೆಯನ್ನು ಮಾಡಬೇಕೆಂದು ಭದ್ರಾವತಿ ಕೆ ಎಸ್ ಆರ್ ಟಿ ಸಿ ಬಸ್ ಡಿಪೋ ಮ್ಯಾನೇಜರ್, ಶಿವಮೊಗ್ಗ ನಗರದ ಕೆ ಎಸ್ ಆರ್ ಟಿ ಸಿ ಡಿ.ಸಿ ಅವರಿಗೆ ಹಾಗೂ ಸಾರಿಗೆ ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದು ವಿದ್ಯಾರ್ಥಿಗಳ ಸಮಸ್ಯೆಗಳನ್ನು 30 11.2024ರ ಒಳಗೆ ಬಸ್ಸುಗಳನ್ನ ಹಾಕಬೇಕು ಇಲ್ಲದಿದ್ದರೆ ಅಂದು ಬೆಳಿಗ್ಗೆ 9:00 ಗಂಟೆಗೆ ಭದ್ರಾವತಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಬಾಗ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ರಸ್ತೆ ತಡೆ ಮಾಡುವುದಾಗಿ ಎಚ್ಚರಿಕೆಯನ್ನು ಅಖಿಲ ಕರ್ನಾಟಕ ಯುವ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಬಿ ಟಿ ಜೀವನ್ ರವರು ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಎಚ್ಚರಿಕೆ ನೀಡಿ
“ಕರುನಾಡ ಕಂದ” ಪತ್ರಿಕೆಯ ಸುದ್ದಿ ಜಾಲತಾಣ ಕರುನಾಡಕಂದ.ಕಾಮ್ ನಲ್ಲಿ ನವೆಂಬರ್ 26 ರಂದು ಸುದ್ದಿ ಪ್ರಕಟಿಸಲಾಗಿತ್ತು.
ಮನವಿಗೆ ಸ್ಪಂದಿಸಿ ಕೆ.ಎಸ್.ಆರ್.ಟಿ.ಸಿ ಶಿವಮೊಗ್ಗ ಡಿಸಿ ಅವರು ಹಾಗೂ ಭದ್ರಾವತಿ ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ಅವರು ಸಧ್ಯಕ್ಕೆ ಎರಡು ಬಸ್ಸುಗಳ ವ್ಯವಸ್ಥೆಯನ್ನು ಮಾಡಿರುತ್ತಾರೆ ನಂತರ ವಿದ್ಯಾರ್ಥಿಗಳ ಬೇಡಿಕೆಯಂತೆ ಹಂತ ಹಂತವಾಗಿ ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ರೂಟ್ ಗಳಿಗೆ ಬಸ್ಸುಗಳನ್ನು ಹಾಕುವುದಾಗಿ ಭರವಸೆ ನೀಡಿರುತ್ತಾರೆ ಹಾಗೂ ಮಾನ್ಯ ಸಾರಿಗೆ ಸಚಿವರು ಫೋನ್ ಮೂಲಕ ರಾಜ್ಯಾಧ್ಯಕ್ಷರಾದ ಬಿ.ಟಿ. ಜೀವನ್ ಅವರಿಗೆ ಕರೆ ಮಾಡಿ ನಿಮ್ಮ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿರುವುದರಿಂದ ಅವರ ಭರವಸೆಗೆ ಸ್ಪಂದಿಸಿ ದಿನಾಂಕ 30-11.2024 ರಂದು ಭದ್ರಾವತಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಬಾಗ ರಸ್ತೆ ತಡೆ ಮುಷ್ಕರವನ್ನು ಕೈ ಬಿಡಲಾಗಿದೆ ಎಲ್ಲಾ ವಿದ್ಯಾರ್ಥಿಗಳು ಯಾವುದೇ ರಸ್ತೆ ತಡೆ ಮಾಡದಂತೆ ಮನವಿಯನ್ನು ಮಾಡಲಾಗಿದೆ ಎಲ್ಲಾ ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗಬೇಕೆಂದು ವಿನಂತಿಸಿಕೊಳ್ಳಲಾಗಿದೆ ನಮ್ಮ ಬೇಡಿಕೆಗಳು ಈಡೇರದೆ ಇದ್ದಲ್ಲಿ ಮುಂದೆ ವಿದ್ಯಾರ್ಥಿ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಖಿಲ ಕರ್ನಾಟಕ ವಿದ್ಯಾರ್ಥಿ ಯುವ ಸಂಘಟನೆ (ರಿ.)ಯ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಟಿ.ಜೀವನ್ ಬೆಂಗಳೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
