ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀಗಳಿಂದ ಪಾದಯಾತ್ರೆ ಹುನಗುಂದ ಜನರ ಕಲ್ಯಾಣಕ್ಕಾಗಿ ಮತ್ತು ಧರ್ಮ ಜಾಗೃತಿ

ಗುಳೇದಗುಡ್ಡದ ಒಪ್ಪತ್ತೇಶ್ವರ ಮಹಾಸ್ವಾಮಿಗಳು ನೇತೃತ್ವದಲ್ಲಿ ಹಾಗೂ ಹಡಗಲಿ ನಿಡಗುಂದಿಯ ರುದ್ರಮುನಿಶ್ರೀಗಳು ಅಮೀನಗಡ ಪ್ರಭುಶಂಕರ್ ರಾಜೇಂದ್ರ ಶ್ರೀಗಳು ಪೂರ್ತಿಗೇರಿ ಶ್ರೀಗಳು ಹುನಗುಂದದ ಗಚ್ಚಿನಮಠದ ಅಮರೇಶ್ವರ ದೇವರು ಹಾಗೂ ನೂರಾರು ಭಕ್ತರೊಂದಿಗೆ ತಾಲೂಕಿನ ಬೇವಿನಮಟ್ಟಿಯಿಂದ ತಿಮ್ಮಾಪುರ ಮಾರ್ಗವಾಗಿ ತಾಲೂಕಿನ ಸುಕ್ಷೇತ್ರ ಅಣ್ಣ ಬಸವಣ್ಣನ ಐಕ್ಯ ಸ್ಥಳ ಕೂಡಲಸಂಗಮಕ್ಕೆ ಪಾದಯಾತ್ರೆ ಇಂದು ಪ್ರಾರಂಭಗೊಂಡಿತು ಎಂದು ಒಪ್ಪತ್ತೇಶ್ವರ ಮಠದ ಶ್ರೀಗಳು ತಿಳಿಸಿದ್ದಾರೆ ಬೇವಿನಮಟ್ಟಿ ಗ್ರಾಮದಿಂದ ಪ್ರಾರಂಭಗೊಂಡು ಬೇವಿನಮಟ್ಟಿ ಕ್ರಾಸ್ ನಂತರ ರಕ್ಕಸಗಿ ರಸ್ತೆಯ ಮೂಲಕ ತಿಮ್ಮಾಪುರ ರಸ್ತೆಯ ಮೂಲಕ ಸಂಜೆ ತಿಮ್ಮಾಪುರ ಗ್ರಾಮವನ್ನು ತಲುಪಲಿದೆ.

ಧಾರ್ಮಿಕ ಸಭೆ:
ತಿಮ್ಮಾಪುರ ಗ್ರಾಮದ ಮಾರುತೇಶ್ವರ ಬಸವೇಶ್ವರ ಕಾರ್ತಿಕೋತ್ಸವ ಮುಕ್ತಾಯ ಸಮಾರಂಭ ಹಾಗೂ ಪಾದಯಾತ್ರೆ ಕೈಗೊಂಡ ಶ್ರೀಗಳವರಿಗೆ ಮತ್ತು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ರಸಪ್ರಶ್ನೆ ಸ್ಪರ್ದಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶ್ರೀಮತಿ ಗೀತಾ ತಾರಿವಾಳ ಹಾಗೂ ಎಸ್ ಆರ್ ಕೆ ಫೌಂಡೇಶನ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಹುನಗುಂದ ತಾಲೂಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಗ್ರಾಮದ ಶಿಕ್ಷಕಿ ಶಾರದಾ ಹೂಲಗೇರಿ ಅವರುಗಳನ್ನು ಸನ್ಮಾನಿಸಲಾಗುವುದು ನಂತರ ಕಾರ್ತಿಕೋತ್ಸವದ ನಿಮಿತ್ಯ ವಿವಿಧ ಭಜನಾ ಮೇಳಗಳಿಂದ ಶಿವ ಭಜನ ಕಾರ್ಯಕ್ರಮ ಜರುಗಲಿದೆ ಪಾದಯಾತ್ರೆ ಕೈಗೊಂಡ ಸ್ವಾಮೀಜಿಗಳು ಹಾಗೂ ಭಕ್ತರು ವಾಸ್ತವ ಹೂಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ