
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಇಂಡಿ ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದಿನಾಂಕ 26/11/2024 ರಂದು ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅಗರಖೇಡ ಗ್ರಾಮದ ಶ್ರೀ ಗುರು ಗಂಗಲಿಂಗ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಕಿರಿಯರ ವಿಭಾಗದ ಕ್ಲೇ ಮಾಡಲಿಂಗ್ ನಲ್ಲಿ ಕುಮಾರ್ ಆರ್ಯನ್ ಬೋಸಲೆ ಪ್ರಥಮ ಸ್ಥಾನ ಹಾಗೂ ಚಿತ್ರಕಲೆಯಲ್ಲಿ ಕುಮಾರಿ ಅಂಕಿತ ಮನೋಜ್ ಮರಗೂರ ಪ್ರಥಮ ಸ್ಥಾನ ಹಾಗೂ ಹಿರಿಯರ ವಿಭಾಗದ ಕ್ಲೇ ಮಾಡ್ಲಿಂಗ್ ದಲ್ಲಿ ಪ್ರಥಮ ಸ್ಥಾನ ಕುಮಾರ್ ಅಯುಬ್ ಕಾಣಿ ಈ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾಗಿದ್ದಕ್ಕೆ ಶಾಲೆ ಎಲ್ಲಾ ಶಿಕ್ಷಕ ವರ್ಗದವರು, ಆಡಳಿತ ಮಂಡಳಿಯವರು ಅಭಿನಂದನೆಗಳನ್ನು ಕೋರಿದ್ದಾರೆ.
ವರದಿ – ಮನೋಜ್ ನಿಂಬಾಳ
