ಮೈಸೂರು: ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಕನ್ನಡ ಕ್ರಾಂತಿದಳದ ಸಂಸ್ಥಾಪಕರು ಮತ್ತು ಸಾಹಿತಿಗಳು ಕನ್ನಡ ಯೋಧ ನ.ನಾಗಲಿಂಗಸ್ವಾಮಿಯವರ ಜಯಂತಿಯನ್ನು ಕರ್ನಾಟಕ ಯುವಘರ್ಜನೆ ವೇದಿಕೆಯ ವತಿಯಿಂದ ಮೈಸೂರಿನ ನಜರಬಾದ್ ನಲ್ಲಿರುವ ಲೋಕೋಪಯೋಗಿ ಇಲಾಖೆಯ ಸಭಾಂಗಣದಲ್ಲಿ ದಿ. ನ.ನಾಗಲಿಂಗಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗೌರವವನ್ನು ಸಲ್ಲಿಸಿ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಕುರಿತು ಮಾತನಾಡಿದ ಉಮೇಶ್ ರವರು ನ. ನಾಗಲಿಂಗ ಸ್ವಾಮಿ ರವರ ಕನ್ನಡ ನಾಡು ನುಡಿ ನೆಲ ಜಲ ಭಾಷೆ ವಿಚಾರದಲ್ಲಿ ವಿಶೇಷವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರವಾದದ್ದು ಎಂದು ಬಣ್ಣಿಸಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇವೆ ಎಂದು ಹೇಳಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನ.ನಾಗಲಿಂಗಸ್ವಾಮಿ ಅವರ ಪುತ್ರ ಕನ್ನಡ ಚುಳುವಳಿಗಾರ ಶ್ರೀ ತೇಜಸ್ವಿ ನಾಗಲಿಂಗಸ್ವಾಮಿ ಅವರಿಗೆ ಉಮೇಶ್ ರವರು ಗೌರವಿಸಿ ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ಯುವಘರ್ಜನೆ ವೇದಿಕೆಯ ರಾಜ್ಯಾಧ್ಯಕ್ಷರಾದ ಉಮೇಶ್, ಮೈಸೂರು ಜಿಲ್ಲಾಧ್ಯಕ್ಷರಾದ ವೈ.ಎನ್.ಮಹೇಶ್, ಕಿರಣ್ ಸೋಮಣ್ಣ, ರಾಘವೇಂದ್ರ, ಅರುಣ್, ಕಾಳೇಗೌಡ, ಮೋಹನ್ ಉಪಸ್ಥಿತರಿದ್ದರು.
