ಮಾಜಿ ಶಾಸಕರಾದ ದಿ. ಎನ್. ಟಿ. ಬೊಮ್ಮಣ್ಣನವರ ಸ್ಮರಣಾರ್ಥವಾಗಿ ಅಕ್ಷರ ಐ ಫೌಂಡೇಶನ್ ತುಮಕೂರು ಮತ್ತು ನೇತ್ರಲಕ್ಷ್ಮಿ ವೈದ್ಯಾಲಯ ಹೊಸಪೇಟೆ, ತಾಲೂಕು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಹಾಗೂ ಡಾ. ಶ್ರೀನಿವಾಸ್. ಎನ್. ಟಿ. ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ದಿ; 01-12-2024 ರಂದು ಭಾನುವಾರ ದಿನ, ಕೂಡ್ಲಿಗಿ ಕ್ಷೇತ್ರದ ಸಾರ್ವಜನಿಕರಿಗಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಹಮ್ಮಿಕೊಳ್ಳಲಾಗಿತ್ತು.
ಮಾನ್ಯ ಶಾಸಕರು ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ನನ್ನ ತಂದೆಯವರಾದ ದಿವಂಗತ ಎನ್. ಟಿ. ಬೊಮ್ಮಣ್ಣನವರು ಅಂದಿನ ತಮ್ಮ ಅಧಿಕಾರ ಅವಧಿಯಲ್ಲಿ ಜಾರಿಗೆ ತಂದ ಜನಪರ ಆಡಳಿತ ಮತ್ತು ಪ್ರಗತಿಪರ ಸುಧಾರಣೆಗಳನ್ನು ನೆನಪಿಸಿಕೊಳ್ಳಬೇಕು. ಅವರು ಶಿಕ್ಷಣ, ಆರೋಗ್ಯ ಮತ್ತು ಸ್ವಚ್ಛತೆಗೆ ಆದ್ಯತೆ ಕೊಡುವ ಜೊತೆಗೆ ಸರ್ವ ರೀತಿಯಲ್ಲಿ ಸರ್ವರ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದರು. ದಲಿತ, ಆದಿವಾಸಿ, ಹಿಂದುಳಿದ ಮತ್ತು ಎಲ್ಲಾ ವರ್ಗದ ಬಡವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಪ್ರತಿ ಹಳ್ಳಿಗೆ ಮಣ್ಣಿನ ರಸ್ತೆಗಳು, ಏತಾ ನೀರಾವರಿ ಪದ್ಧತಿ, ಜನತಾ ಕಾಲೋನಿಗಳು, ಕೆರೆ ,ಕಟ್ಟೆ, ಕಾಲುವೆ, ಚೆಕ್ ಡ್ಯಾಮ್, ಆಸ್ಪತ್ರೆ, ಶಾಲೆ, ಕಾಲೇಜು ಇನ್ನೂ ಮುಂತಾಗಿ ಅಭಿವೃದ್ಧಿ ಮಾಡಿದ್ದಾರೆ. ಅಂಗನವಾಡಿ ಶಾಲೆಗಳನ್ನು ಹುಟ್ಟು ಹಾಕಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಲ್ಲಾ ವರ್ಗದ ಮಹಿಳೆಯರಿಗೆ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಅದೆಷ್ಟೋ ವರ್ಷಗಳ ಕೂಡ್ಲಿಗಿ ತಾಲೂಕಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಬಡವರ ಪರ ಕೆಲಸ ಕಾರ್ಯಗಳನ್ನು ಹಮ್ಮಿಕೊಂಡಿರುವುದನ್ನು ಮರೆಯುವಂತಿಲ್ಲ ಎಂದೂ ಹೇಳಿದರು. ಕಾರ್ಮಿಕರಿಗಾಗಿ ಕೂಲಿಗಾಗಿ ಕಾಳು ಯೋಜನೆಯನ್ನು ಜಾರಿಗೆ ತಂದು ಬಡವರ ಹಸಿವು ನೀಗಿಸುವ ಕೆಲಸವನ್ನು ಮಾಡಿದರು. ಹೀಗೆ ಅವರ ಕುರಿತು ದಿನ ವಿಡೀ ಎಷ್ಟೇ ಮಾತನಾಡಿದರು ಕಡಿಮೆ ಎಂದೂ ಹೇಳಿದರು.
ಎನ್. ಟಿ. ಬಿ. ಅವರಿಗೆ ಸಾವಿಲ್ಲ. ಅವರು ಈ ಮೂಲಕ ನಮ್ಮಲ್ಲಿ ಇನ್ನೂ ಜೀವಂತವಾಗಿದ್ದಾರೆ. ಹೀಗಾಗಿ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ, ಆರೋಗ್ಯಕ್ಕಾಗಿ ನಾನು ಗ್ಯಾರಂಟಿ ಎಂದೂ ಹೇಳಿದಂತೆ ಪ್ರತಿ ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಉಚಿತ ಬೃಹತ್ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ನನ್ನ ತಂದೆಯವರ ಹಾದಿಯಲ್ಲಿ ಮುನ್ನಡೆಯುತ್ತಾ, ನಮ್ಮ ತಂದೆಯವರನ್ನು ಇಂತಹ ಜನ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅವರ ಆಶಯ ಮತ್ತು ಸಿದ್ಧಾಂತಗಳನ್ನು ಮುಂದಿನ ತಲೆಮಾರಿಗೆ ರವಾನಿಸುವ ನಿಟ್ಟಿನಲ್ಲಿ ಜನರ ಸೇವೆ ಮಾಡುತ್ತೇನೆ ಎಂದೂ ಹೇಳಿದರು. ಆ ನಿಟ್ಟಿನಲ್ಲಿ ಇಂದು ನನ್ನ ಪ್ರೀತಿಯ ತಂದೆಗೆ ನಾನು ನೆಚ್ಚಿನ ಮಗನಾಗಿ ಅವರ ಕನಸು ಈಡೇರಿಸಿದ್ದೇನೆ ಎಂದರು. ಈ ಮೂಲಕ ಅವರನ್ನು ಮತ್ತೆ ಮತ್ತೇ ನೆನಪಿಸಿಕೊಳ್ಳೋಣ ಎಂದರು.
ಹೀಗಾಗಿ ಇನ್ನೂ ನಿಮ್ಮ ತಾಳ್ಮೆಯನ್ನು ಹೆಚ್ಚು ಪರೀಕ್ಷಿಸುವುದಿಲ್ಲ. ನಿಮಗೆ ಒಳಿತಾಗಲಿ. ನೀವು ನಮ್ಮ ವೈದ್ಯರ ಜೊತೆಗೆ ತಮ್ಮ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡು ಅವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಮುನ್ನಡೆಯಿರಿ ಎಂದೂ ಶುಭ ಹಾರೈಸಿದರು.
ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ, ಸಿ.ಪಿ.ಐ. ಸುರೇಶ ತಳವಾರ ಮತ್ತು ಸಿಬ್ಬಂದಿ ವರ್ಗ, ಪ. ಪಂ. ಅಧ್ಯಕ್ಷರಾದ ಶ್ರೀ ಕಾವಲಿ ಶಿವಪ್ಪನಾಯಕ, ಉಪಾಧ್ಯಕ್ಷರಾದ ಲೀಲಾವತಿ ಕೆ. ಪ್ರಭಾಕರ್, ಸರ್ವ ಸದಸ್ಯರು, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಎಂ.ಗುರುಸಿದ್ಧನಗೌಡ, ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಶ್ರೀಯುತ ತಮ್ಮಣ್ಣ ಎನ್. ಟಿ. ಅವರು, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಎಸ್. ವೆಂಕಟೇಶ, ಸಾರ್ವಜನಿಕ ತಾಲೂಕು ಆಡಳಿತ ಆರೋಗ್ಯ ಅಧಿಕಾರಿಗಳಾದ ಡಾ. ಎಸ್, ಪ್ರದೀಪ್ ಹಾಗೂ ಮಾಜಿ ಶಾಸಕರಾದ ದಿವಂಗತ. ಎನ್. ಟಿ. ಬೊಮ್ಮಣ್ಣನವರ ಆಪ್ತರಾದ ಡಾ. ಶಾಂತಯ್ಯ, ಜೆ.ಹನುಮಂತಪ್ಪ, ವೀರಯ್ಯ, ಶ್ರೀ ಮಲ್ಲಾಪುರದ ಭರ್ಮಪ್ಪ, ಜುಮ್ಮೋಬನಹಳ್ಳಿ ಬಸವರಾಜಪ್ಪ, ಡಿ. ನಾಗರಾಜ, ಶ್ರೀಮತಿ ಚೌಡಮ್ಮ, ವಿಭೂತಿ ವೀರಣ್ಣ, ಶ್ರೀ ನರಸಿಂಹಪ್ಪ, ಟಿ. ಸಿದ್ದಪ್ಪ, ಭಾಷ ಸಾಬ್( ಶೂಕರ್ ಅವರ ತಂದೆ), ಮಾನ್ಯ ಶಾಸಕರ ಆಪ್ತರು ಮತ್ತು ವೈದ್ಯಾರಾದ ಡಾ. ತಿಮ್ಮರಾಜು, ಡಾ. ಮಧು, ಡಾ. ರವಿಕುಮಾರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಡಾ. ಟಿ. ಕೊತ್ಲಮ್ಮ ಮತ್ತು ಕಾಲೇಜುನ ಸಿಬ್ಬಂದಿ ವರ್ಗ, ಮಾಜಿ ತಾ. ಪಂ. ಸದಸ್ಯರಾದ ಶೃತಿ ವೆಂಕಟೇಶ, ಪಸಲುಪಾಲಯ್ಯ, ಮುಖಂಡರಾದ ತಮ್ಮಣ್ಣ. ಎನ್. ವಿ, ಮಂಜಣ್ಣ ಗುಂಡುಮುಣುಗು, ದೇವಯ್ಯ, ಜಿಲಾನ್, ಮಾದಿಹಳ್ಳಿ ನಜೀರ್ ಸಾಬ್, ಹಾಗೂ ಕೂಡ್ಲಿಗಿ ಕ್ಷೇತ್ರದ ಸಾರ್ವಜನಿಕರು ಸಹಸ್ರಾರು ಜನರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
