ಬೆಂಗಳೂರು : ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಿನ್ನೆ ತಡರಾತ್ರಿ ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. 2 ವರ್ಷಗಳ ಹಿಂದೆ ಶೋಭಿತಾ ಮದುವೆಯಾಗಿ ಹೈದರಾಬಾದ್‌ನಲ್ಲಿ ಸೆಟಲ್ ಆಗಿದ್ದರು. ಬಣ್ಣದ ಲೋಕದಿಂದ ಅವರು ಅಂತರ ಕಾಯ್ದುಕೊಂಡಿದ್ದರು. ಇದೀಗ ಅವರ ಆತ್ಮಹತ್ಯೆಯ ಸುದ್ದಿ ಕುಟುಂಬಸ್ಥರಿಗೆ ಶಾಕ್ ಕೊಟ್ಟಿದೆ.
ಮರಣೋತ್ತರ ಪರೀಕ್ಷೆಯ ನಂತರ ನಟಿಯ ಮೃತದೇಹ ಬೆಂಗಳೂರಿಗೆ ತರುವ ಸಾಧ್ಯತೆಯಿದೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
