ತುಮಕೂರು: ಕುಣಿಗಲ್ ಬಸ್ ನಿಲ್ದಾಣದಿಂದ ತುಮಕೂರಿಗೆ ಪ್ರತಿ ದಿನ ಅಂದಾಜು 1500 ಕಿಂತ ಹೆಚ್ಚು ವಿದ್ಯಾರ್ಥಿಗಳು ತುಮಕೂರು ನಗರಕ್ಕೆ ಕಾಲೇಜಿಗೆ ಹೋಗುತ್ತಿದ್ದು ಕುಣಿಗಲ್ ಬಸ್ ನಿಲ್ದಾಣದಲ್ಲಿ ತುಂಬಾ ಬಸ್ಸುಗಳು ರಶ್ ಆಗಿ ಬಸ್ ಹತ್ತಲು ಆಗದೆ ತೊಂದರೆಯಾಗುತ್ತಿದ್ದು ಹತ್ತಾರು ಬಾರಿ ಕುಣಿಗಲ್ ಡಿಪೋ ಮ್ಯಾನೇಜರ್ ಗೆ ಮನವಿ ಸಲ್ಲಿಸಿದರೂ ಸಹ ಬಸ್ಸುಗಳನ್ನು ಹಾಕದೆ ಉದಾಸೀನ ಮಾಡುತ್ತಿದ್ದು ಇದರಿಂದ ತೊಂದರೆಗೆ ಈಡಾಗಿದ್ದ ವಿದ್ಯಾರ್ಥಿಗಳು ಅಖಿಲ ಕರ್ನಾಟಕ ವಿದ್ಯಾರ್ಥಿ ಯುವ ಸಂಘಟನೆ ಬೆಂಗಳೂರು ರಾಜ್ಯದ್ಯಕ್ಷರಾದ ಶ್ರೀ ಬಿಟಿ ಜೀವನ್ ಅವರನ್ನು ಸಂಪರ್ಕಿಸಿ ತಮ್ಮ ತೊಂದರೆಗಳನ್ನು ವಿವರವಾಗಿ ವಿದ್ಯಾರ್ಥಿಗಳು ಹಂಚಿಕೊಂಡಿದ್ದು ಶ್ರೀ ಬಿ ಟಿ ಜೀವನ್ ಅವರು ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಪ್ರಧಾನ ಕಾರ್ಯದರ್ಶಿಗಳಾದ ಪ್ರಜ್ವಲ್ ಅವರನ್ನು ಕುಣಿಗಲ್ ಬಸ್ ನಿಲ್ದಾಣಕ್ಕೆ ಕಳಿಸಿ ವಿದ್ಯಾರ್ಥಿಗಳ ಜೊತೆಯಲ್ಲಿ ಚರ್ಚಿಸಿ ನಂತರ ವಿದ್ಯಾರ್ಥಿಗಳ ಜೊತೆಯಲ್ಲಿ ಬಸ್ಸುಗಳನ್ನು ತಡೆದು ಪ್ರತಿಭಟಿಸಿ ಕುಣಿಗಲ್ KSRTC ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿ ನಮ್ಮ ಮನವಿಯಂತೆ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 7 ಗಂಟೆಯಿಂದ 9: 30 ಗಂಟೆ ಒಳಗೆ ಬಸ್ಸುಗಳನ್ನು ಹಾಕಬೇಕೆಂದು ಒತ್ತಾಯಿಸಿದರು ಹಾಗೂ ತುಮಕೂರಿನಿಂದ ಕುಣಿಗಲ್ ಗೆ ಸಂಜೆ 4:00 ಯಿಂದ 6:00 ಒಳಗೆ ಐದು ಬಸ್ಸುಗಳನ್ನು ಬಿಡಬೇಕೆಂದು ವಿನಂತಿಸಿಕೊಂಡರು ಇವರ ಮನವಿಗೆ ಸ್ಪಂದಿಸಿದ KSRTC ಡಿಸಿ ಅವರು ಭರವಸೆಯನ್ನು ನೀಡಿ ಬೆಳಿಗ್ಗೆನೆ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದೆ ಇನ್ನು ಮುಂದೆ ಪ್ರತಿ ದಿನ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿರುತ್ತಾರೆ. ಮೈಸೂರಿನಿಂದ ಬರುವ ಬಸ್ಸುಗಳು ಕುಣಿಗಲ್ ನಲ್ಲಿ ಸ್ಟಾಪ್ ಕೊಟ್ಟು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಬೇಕೆಂದು ಒತ್ತಾಯಿಸಿದರು ಇದು ವಿದ್ಯಾರ್ಥಿ ಸಂಘಟನೆಗೆ ಸಿಕ್ಕಿದ ಜಯವಾಗಿದೆ ಹೋರಾಟದಲ್ಲಿ ಜಿಲ್ಲಾಧ್ಯಕ್ಷರಾದ ದರ್ಶನ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಜ್ವಲ್ ತಾಲೂಕು ಅಧ್ಯಕ್ಷರಾದ ಸಂತೋಷ್ ಲೋಕೇಶ್ ಅಭಿ ಗೌಡ,ಚಿಕ್ಕಮಗಳೂರು ಜಿಲ್ಲಾಧ್ಯಕ್ಷರು ಹಾಗೂ ತುಮಕೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಜ್ವಲ್ ಎಸ್.
ಸೇರಿದಂತೆ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೋರಾಟದಲ್ಲಿ ಭಾಗವಹಿಸಿದ್ದರು.
-ಕರುನಾಡ ಕಂದ
