ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಭಿನವ ಜಾತವೇದ ಶ್ರೀಗಳ ಅಂತಿಮ ಸಂಸ್ಕಾರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಸಾರಂಗಮಠದ ಅಭಿನವ ಜಾತವೇದ ಶಿವಾಚಾರ್ಯ ಸ್ವಾಮೀಜಿಯವರ ಅಂತಿಮ ಸಂಸ್ಕಾರ ಭಾನುವಾರ ಉಜ್ಜಯನಿ ಸದ್ಧರ್ಮ ಪೀಠದ ಸಿದ್ಧಲಿಂಗ ಸ್ವಾಮೀಜಿ, ನಾಡಿನ ವಿವಿಧ ಮಠಾಧೀಶರ ಸಮ್ಮುಖದಲ್ಲಿ ವೀರಶೈವ ಲಿಂಗಾಯತ ವಿಧಿವಿಧಾನಗಳ ಮೂಲಕ ನೆರವೇರಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡರು.


ಸಾರಂಗಮಠದ ಸಮುದಾಯ ಭವನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು. ಮಧ್ಯಾಹ್ನ ೧೨.೩೦ಕ್ಕೆ ನಾಡಿನ ಮಠಾಧೀಶರ ನೇತೃತ್ವದಲ್ಲಿ ಟ್ರಾಕ್ರ‍್ನನಲ್ಲಿ ಸಾರಂಗಮಠದಿಂದ ಬಸವೇಶ್ವರ ವೃತ್ತ ಮುಖ್ಯ ಬಜಾರ, ಅರ್ಚಕ ಕಾಲೋನಿ ಮೂಲ ಸಾರಂಗಮಠಕ್ಕೆ ಮೆರವಣೆಗೆಯ ಮೂಲಕ ತರಲಾಯಿತು. ಮೆರವಣೆಗೆಯಲ್ಲಿ ಗ್ರಾಮದ ಎಲ್ಲರೂ ನಮಸ್ಕರಿಸಿ ಅಂತಿಮ ವಿದಾಯ ಹೇಳಿದರು.
ಮ.೩.೩೦ ರಿಂದ ೪.೩೦ರ ವರೆಗೆ ವೀರಶೈವ ಲಿಂಗಾಯತ ವಿಧಿ ವಿಧಾನಗಳ ಮೂಲಕ ಸಾರಂಗಮಠ ಆವರಣದಲ್ಲಿಯೇ ಅಂತ್ಯಕ್ರಿಯೆ ನಡೆಯಿತು.
ಭಕ್ತರು ಶ್ರೀಗಳು ಬಹುಬೇಗ ಅಗಲಿರುವುದನ್ನು ಸ್ಮರಿಸಿ ದು:ಖಿಸಿದರು.
ಸಾರಂಗಮಠದ ಪ್ರಥಮ ಪೀಠಧಿಪತಿಯಾದ ಅಭಿನವ ಜಾತವೇದ ಶಿವಾಚಾರ್ಯ ಸ್ವಾಮೀಜಿ ಸಾಮೂಹಿಕ ವಿವಾಹ, ಪ್ರವಚನದ ಮೂಲಕ ೧೮ ವರ್ಷಗಳಿಂದ ಸಾಮೂಜಿಕ ಸೇವೆ ಮಾಡಿದ್ದರು.
ಪ್ರತಿ ವರ್ಷ ಕೂಡಲಸಂಗಮದ ಸಂಗಮೇಶ್ವರ ಜಾತ್ರೆಯ ನಿಮಿತ್ತ ಯುವಕರು ದುಶ್ಚಟಗಳಿಂದ ದೂರವಾಗಬೇಕು ಎಂದು ಸಂಗಮನಾಥನ ಮಾಲೆಯನ್ನು ನೀಡುವ ಮೂಲಕ ಸಾವಿರಾರು ಯುವಕರನ್ನು ದುಶ್ಚಟಗಳಿಂದ ದೂರವಿರುವಂತೆ ಮಾಡಿದ್ದರು.
ಕೂಡಲಸಂಗಮ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮವಿದ್ದರೂ ಪಾಲ್ಗೊಂಡು ಆಶೀರ್ವಾದ ಮಾಡುತ್ತಿದ್ದ ಶ್ರೀಗಳನ್ನು ಭಾನುವಾರ ಭಕ್ತರು ಸ್ಮರಿಸಿದರು.
ಉಜ್ಜಯನಿ ಸದ್ಧರ್ಮ ಪೀಠದ ಸಿದ್ಧಲಿಂಗ ಸ್ವಾಮೀಜಿ, ನಾಡಿನ ವಿವಿಧ ಮಠಾಧೀಶರು ಸಾರಂಗಮಠದ ಮುಂದಿನ ಪೀಠಾಧಿಪತಿಯಾಗಿ ಗುರುಪ್ರಸಾದ ಸ್ವಾಮೀಜಿಯನ್ನು ನೇಮಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ