ಮೈಸೂರು: ಶಿವಯೋಗ ಪ್ರಾತ್ಯಕ್ಷಿಕೆ, ಲಿಂಗಾಯತ ಸಿದ್ದಾಂತ ಮತ್ತು ಲಿಂಗಾಯತ ಧರ್ಮ ಕುರಿತು ಶಿವಯೋಗ ಮತ್ತು ನಿಜಾಚರಣೆ ಅನುಷ್ಠಾನ ಸಮಿತಿ ವತಿಯಿಂದ ನಡೆದ ಶಿಬಿರವನ್ನು ಪೂಜ್ಯ ಬಸವಯೋಗಿಪ್ರಭು ಸ್ವಾಮೀಜಿಗಳು ನಡೆಸಿಕೊಟ್ಟರು.
ಮೈಸೂರಿನ ಸರಸ್ವತಿ ಪುರಂನಲ್ಲಿ ಶಿವಯೋಗ ಪ್ರಾತ್ಯಕ್ಷಿಕೆ, ಲಿಂಗಾಯತ ಸಿದ್ದಾಂತ ಮತ್ತು ಲಿಂಗಾಯತ ಧರ್ಮ ಕುರಿತು ಶಿವಯೋಗ ಮತ್ತು ನಿಜಾಚರಣೆ ಅನುಷ್ಠಾನ ಸಮಿತಿ ವತಿಯಿಂದ ಶಿಬಿರ ಏರ್ಪಡಿಸಲಾಗಿತ್ತು ಈ ಶಿಬಿರದಲ್ಲಿ ಒಟ್ಟು 22 ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಶಿವಯೋಗ ಅನುಷ್ಠಾನ ಮಾಡುವುದು ಹೇಗೆ , ಇಷ್ಟಲಿಂಗ ಯಾವ ಪದಾರ್ಥಗಳಿಂದ ಮಾಡಿದೆ , ಇಷ್ಟಲಿಂಗವನ್ನು ಹೇಗೆ ನಿರೀಕ್ಷಣೆ ಮಾಡಬೇಕು,ಶಿವಯೋಗನ್ನು ಮಾಡಿದರೆ ಏನು ಪರಿಣಾಮ ಉಂಟಾಗುತ್ತದೆ, ಶಿವಯೋಗದ ವೈಜ್ಞಾನಿಕತೆ ಮತ್ತು ಶಿವಯೋಗವನ್ನು ಯಾವ ಸಮಯದಲ್ಲಿ ಮಾಡಬೇಕೆಂದು ತಿಳಿಸಿಕೊಟ್ಟರು.
ನಂತರ ಲಿಂಗಾಯತ ಸಿದ್ದಾಂತವಾದ ಅಷ್ಟಾವರಣ ,ಪಂಚಾಚಾರ ಮತ್ತು ಷಟ್ ಸ್ಥಳದ ಬಗ್ಗೆ ತಿಳಿಸಿದರು ಲಿಂಗಾಯತ ಧರ್ಮದ ಬಗ್ಗೆ ವಿವಿರ ನೀಡಿದ ಸ್ವಾಮೀಜಿ, ಲಿಂಗಾಯತ ಧರ್ಮವನ್ನು ಬಸವಣ್ಣನವರು ಏಕೆ ಕೊಟ್ಟರು ಮತ್ತು ಅದರ ಉದ್ದೇಶವೇನು ಎಂದು ತಿಳಿಸಿ, ಲಿಂಗಾಯತ ಸಮುದಾಯ ಶರಣ ಸಂಸ್ಕೃತಿಯನ್ನು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಹೋಗ ಬೇಕೆಂದು ತಿಳಿ ಹೇಳಿದರು.
ಪ್ರತಿಯೊಬ್ಬ ಲಿಂಗಾಯತ ತನ್ನ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಜೊತೆಗೆ ಲಿಂಗಾಯತ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕೆಂದು ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ರಸಾದದ ನಂತರ ಶಿವಯೋಗ ಮತ್ತು ನಿಜಾಚಾರಣೆ ಅನುಷ್ಠಾನ ಸಮಿತಿಯ ಉದ್ದೇಶದ ಬಗ್ಗೆ ಸಂವಾದ ನಡೆಯಿತು.
