ಕಲಬುರಗಿ/ಜೇವರ್ಗಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜೇವರ್ಗಿ ವತಿಯಿಂದ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನಲ್ಲಿ ನಡೆದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ ಖಂಡಿಸಿ ನಗರದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಲಬುರಗಿ ವಿಭಾಗ ಸಂಘಟನಾ ಕಾರ್ಯದರ್ಶಿ ಪಾಂಡು ಮೋರೆ ಮಾತನಾಡಿ,
ಶಾಲಾ ಕಾಲೇಜುಗಳು ಜ್ಞಾನ ದೇಗುಲವಿದ್ದಂತೆ,ಇಂತಹ ದೇಗುಲದಲ್ಲಿ ಹಾಡು ಹಗಲೇ ಒಬ್ಬ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಯಡ್ರಾಮಿ ತಾಲ್ಲೂಕಿನಲ್ಲಿ ನಡದಿದೆ. ನಿಜಕ್ಕೂ ಈ ಘಟನೆ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಶುರುವಾಗಿದೆ, ಈ ವಿಷಯಕ್ಕೆ ಸಂಭಂಧಿಸಿದಂತೆ ಯಡ್ರಾಮಿ ತಾಲೂಕಿನಲ್ಲಿ ಹಾಜಿಮಲಿಂಗ್ ಘಣಿಹಾರ ಎನ್ನುವ ಕಾಮುಖ ವ್ಯಕ್ತಿಯು ನವೋದಯ ಕೋಚಿಂಗ್ ಕ್ಲಾಸ್ ಎಂಬ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದ ತನ್ನ ನೀಚ ಕಾಮುಕ ಚೇಷ್ಟೆಯನ್ನು ತೀರಿಸಿಕೊಳ್ಳಲು ತನ್ನ ಮಗಳ ತರಹ ಇರುವ 5 ನೇ ತರಗತಿಯಲ್ಲಿ ತನ್ನದೇ ಸಂಸ್ಥೆಯಲ್ಲಿ ಓದುತ್ತಿರುವ ಮಗುವಿನ ಮೇಲೆ ಅತ್ಯಾಚಾರವೆಸಗಿರುತ್ತಾನೆ ಈ ಘೋರ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಸಾವು ಬದುಕಿನ ಮಧ್ಯೆ ಹೋರಡುತ್ತಿದ್ದಾಳೆ. ಈ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಹಾಜಿಮಲಂಗ್ ಘಣಿಹಾರ ಈ ಕೂಡಲೇ ಕಠಿಣ ಕ್ರಮ ಹಾಗೂ ಶಿಕ್ಷೆ ಆಗಲೇಬೇಕು ಇಲ್ಲವೇ ಗಲ್ಲು ಶಿಕ್ಷೆ ವಿಧಿಸಬೇಕು.
ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಕಾರ್ಯ ಪ್ರವೃತ್ತರಾಗಬೇಕು ಸರ್ಕಾರ ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಕಾನೂನಿನ ಭಯ ಇಲ್ಲದೆ ಇದ್ದಾಗ ಮಾತ್ರ ಇಂತಹ ಘಟನೆಗಳು ನಡೆಯಲು ಸಾಧ್ಯ ಶಾಲಾ ಕಾಲೇಜುಗಳು ಕ್ಯಾಂಪಸುಗಳಲ್ಲಿ ಸುರಕ್ಷತೆಯ ಕೇಂದ್ರವಾಗಬೇಕು, ಈ ನಿಟ್ಟಿನಲ್ಲಿ ಆರೋಪಿಯನ್ನು ಗಲ್ಲಿಗೆ ಏರಿಸಬೇಕು ಇಲ್ಲವಾದಲ್ಲಿ ಎನ್ ಕೌಂಟರ್ ಮಾಡಿ ಬಿಸಾಕಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.ಒಂದು ವೇಳೆ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದೇ ಹೋದರೆ ಇಡೀ ರಾಜ್ಯದ ತುಂಬಾ ಎಬಿವಿಪಿ ವತಿಯಿಂದ ರಾಜ್ಯಾದ್ಯಾಂತ ಹೋರಾಟ ಮಾಡುತ್ತೇವೆ ಎಂದು ಎಬಿವಿಪಿ ಹೋರಾಟದಲ್ಲಿ ಎಚ್ಚರಿಕೆ ಘಂಟೆಯನ್ನು ಬಾರಿಸಿತು.
ಈ ಸಂದರ್ಭದಲ್ಲಿ ವಿಭಾಗ ಸಂಚಾಲಕ ಹಣಮಂತ ಬಗಲಿ,ಜಿಲ್ಲಾ ಸಂಚಾಲಕ ಮಂಜುನಾಥ ಕೊಣ್ಣೂರ, ಜೇವರ್ಗಿ ತಾಲೂಕ ಸಂಚಾಲಕ ಸಮರ್ಥ, ನಗರ ಕಾರ್ಯದರ್ಶಿ ಮಂಜುನಾಥ, ಕಾರ್ಯಕರ್ತರಾದ ಮನೋಜ,ಶರಣು,ಸಂದೇಶ,ಮಹೇಶ,ಆಕಾಶ,ಕವಿತಾ, ಸುಶ್ಮಿತಾ, ತನುಷಾ,ಭವಾನಿ ಹಾಗೂ ನಗರದ ಎಲ್ಲಾ ಕಾಲೇಜು – ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ: ಚಂದ್ರಶೇಖರ ಪಾಟೀಲ್ ಗುಡೂರ ಎಸ್ ಎನ್
