ಮುಂಜಾನೆ ಇರಲಿ ಧ್ಯಾನ, ಯೋಗ
ದಿನಚರಿ ಆಗಲಿ ಕಾಲ್ನಡಿಗೆಯ ಭಾಗ
ಆರೋಗ್ಯಕರ ದೇಹವು ಆಗ ಸರಾಗ
ಹತ್ತಿರ ಸುಳಿಯದು ಯಾವ ರೋಗ.
ಹಸಿ ತರಕಾರಿ ಸೊಪ್ಪನ್ನು ನಿತ್ಯ ಬಳಸಿ
ತುಪ್ಪ ಮೊಸರು ಬೆಣ್ಣೆ ಊಟದಿ ಇರಿಸಿ
ಮಿಶ್ರ ಕಾಳುಗಳನ್ನು ಮೊಳಕೆ ಬರಿಸಿ
ದಿನವೂ ಊಟದಲ್ಲಿ ತಪ್ಪದೆ ಸೇವಿಸಿ.
ದಣಿದ ದೇಹಕ್ಕೆ ತಂಪು ಮಜ್ಜಿಗೆ
ಬಲದ ವೃದ್ಧಿಗೆ ರಾಗಿಯ ಸಜ್ಜಿಗೆ
ಪಚ್ಚ ಬಾಳೆಯು ಪಚನ ಕ್ರಿಯೆಗೆ
ಗಸಗಸೆ ಪಾಯಸ ಶುದ್ಧ ನಿದ್ರೆಗೆ.
ದ್ವಿದಳ ಧಾನ್ಯಗಳ ತರಿಸಿ ಬೇಯಿಸಿ
ಜೊತೆಗೆ ನಾರಿನಂಶ ಹೆಚ್ಚು ಬಳಸಿ
ಹಣ್ಣು ಹಂಪಲು ಸಿಹಿಯ ಸೇವಿಸಿ
ನಿಶ್ಯಕ್ತಿ ಕಳೆಯಿರಿ ಪೌಷ್ಟಿಕತೆ ಇರಿಸಿ.
ಉತ್ತಮ ಇದ್ದರೆ ನಮ್ಮ ದೇಹಾರೋಗ್ಯ
ಅದುವೇ ಎಲ್ಲರ ಪಾಲಿನ ಮಹಾಭಾಗ್ಯ
ಆರೋಗ್ಯವೇ ತಾನೇ ದೊಡ್ಡ ಸಂಪತ್ತು
ಕ್ರಮಬದ್ಧ ಶೈಲಿಯೇ ಜೀವಕ್ಕೆ ತಾಕತ್ತು.
ಪ್ಲಾಸ್ಟಿಕ್, ರಾಸಾಯನಿಕಗಳ ತ್ಯಜಿಸಿ
ಸ್ವಚ ಪರಿಸರ ಜಾಗೃತಿಗೆ ಕೈ ಜೋಡಿಸಿ
ಮನೆಗೊಂದು ಗಿಡ ನೆಟ್ಟು ನೀರುಣಿಸಿ
ಶುದ್ಧ ಗಾಳಿಯಿಂದ ನೆಮ್ಮದಿ ಜೀವಿಸಿ.
✍️ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ,
ದೂರವಾಣಿ ಸಂಖ್ಯೆ: 9740199896.
