ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಅರಿವು ಕೇಂದ್ರ ಕ್ಯಾದಿಗುಪ್ಪದಲ್ಲಿ ದಿನಾಂಕ 06/12/2024 ರಂದು ನಡೆದ ಡಿಜಿಟಲ್ ಸಾಕ್ಷಾರತೆ ತರಬೇತಿಯನ್ನು ಸ್ವಸಹಾಯ ಸಂಘದ ಮಹಿಳಾ ಒಕ್ಕೂಟದ ಸದಸ್ಯರಿಗೆ ಹಮ್ಮಿಕೊಳ್ಳಲಾಗಿತ್ತು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದುರುಗಮ್ಮ ಹರಿಜನ ಅವರೊಂದಿಗೆ ಅತಿಥಿಗಳು
ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದ
ಈ ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಆಗಮಿಸಿದ್ದ ಶಂಕರ್ ನಾಯಕ್ ಅವರು ಮೊಬೈಲ್ ನಲ್ಲಿ ಉಪಯುಕ್ತ ಮಾಹಿತಿ ಹುಡುಕುವ ಬಗ್ಗೆ ಹಾಗೂ ಪಂಚಮಿತ್ರ – 2 ಕುರಿತು ಮಾಹಿತಿ ನೀಡಿದರು.

ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ಶೇಖರಪ್ಪ ಉಪ್ಪಾರ
ಅವರು ಡಿಜಿಟಲ್ ಯುಗದಲ್ಲಿ ನಾವೆಲ್ಲಾ ಯಾವ ರೀತಿ ಜಾಗ್ರತೆ ಹೊಂದಿರಬೇಕು ಎಂದು ಹೇಳಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಶೈಲ ಪೋಲಸಿಯವರು ಮಾತನಾಡಿ ಡಿಜಿಟಲ್ ಯುಗದಲ್ಲಿ ನಾವು ಕಾಲಕ್ಕೆ ತಕ್ಕಂತೆ ಬದಲಾಗದಿದ್ದರೆ ಯಾವ ರೀತಿಯ ತೊಂದರೆ ಎದುರಾಗುತ್ತವೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಗ್ರಂಥಾಲಯ ಮೇಲ್ವಿಚಾರಕರಾದ ಅಲ್ಲಾಸಾಬ ನದಾಫ್ ಅವರು ಸ್ವಾಗತ, ವಂದನಾರ್ಪಣೆ ಹಾಗೂ ನಿರೂಪಣೆಯೊಂದಿಗೆ ಡಿಜಿಟಲ್ ಸಾಕ್ಷರತೆ ತರಬೇತಿಯ ಉದ್ದೇಶ,ಉಪಯೋಗ ಕುರಿತು ವಿವರಣೆ ನೀಡಿದರು.
ಗ್ರಾಮ ಡಿಜಿ ವಿಕಸನದ ಸಂಯೋಜಕರಾದ ಶ್ರೀ ಅರವಿಂದ ಕುಮಾರ್ ಕೊಪ್ಪಳ ಇವರು ಭಾಗವಹಿಸಿ ಮಕ್ಕಳಿಗೆ ಮೊಬೈಲ್ ಕೊಡುವುದರಿಂದ ಆಗುವ ಹಾನಿ ,ಡಿಜಿಟಲ್ ಸಾಕ್ಷರತೆ ಬಗ್ಗೆ ಮಹಿಳಾ ಸಂಘದವರಿಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದುರುಗಮ್ಮ ಹರಿಜನ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಶೈಲ ಪೋಲಸಿ, ಕಾರ್ಯದರ್ಶಿಗಳಾದ ಶ್ರೀ ಪಂಪಣ್ಣ ಗಂಗನಾಳ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಬಸವರಾಜ ತಳವಾರ, ಶ್ರೀಮತಿ ರೇಣುಕಾ ವಾಲೀಕಾರ, ಶ್ರೀಮತಿ ಭಾಗ್ಯ ಶ್ರೀಧರ,ಬಸವರಾಜ ತಳವಾರ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀ ಮತಿ ಭುವನೇಶ್ವರಿ ಬಳಿಗಾರ ,ಗ್ರಾಮದ ಸ್ವ ಸಹಾಯ ಸಂಘಗಳ ಪದಾಧಿಕಾರಿಗಳು, ಸದಸ್ಯರು, ಅಂಗನವಾಡಿ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
-ಕರುನಾಡ ಕಂದ
