ಬೆನ್ನಿಗೆ ಅಂಟಿ ಬಂದ ಬಡತನ
ಹೊಟ್ಟೆ ಹಸಿದು ಮಲಗಿದ ದಿನ
ಬಂದು ನೋಡದ ಯಾವ ಜನ
ಕಿಂಚಿತ್ತೂ ಹೆದರಲಿಲ್ಲ ನನ್ನ ಮನ.
ನೀವೆಷ್ಟೇ ತೋರಿಸಿದರೂ ಒಲವು
ಅನ್ನದಿಂದಲೇ ನಮಗೆಲ್ಲಾ ಬಲವು
ಕೋಟಿಗಟ್ಟಲೆ ಇದ್ದರದು ಹಣವು
ನೀಗುವುದೇ ನಿನ್ನ ಹೊಟ್ಟೆ ಹಸಿವು.
ತುಂಬಲು ಹೊಟ್ಟೆಯೆಂಬ ಚೀಲ
ಆಹಾರವೇ ದೇಹದ ಶಕ್ತಿಗೆ ಬಲ
ಹಸಿವು ನೀಗಲು ದುಡಿಮೆ ಫಲ
ಪವಾಡಕೆ ಸೃಷ್ಟಿಕರ್ತನೇ ಮೂಲ.
ಕೈ ಕೆಸರಾದರೆ ಬಾಯಿ ಮೊಸರು
ದುಡಿಮೆಯೇ ಶ್ರಮಿಕನ ಉಸಿರು
ಇಟ್ಟಂತ ಫಸಲದು ಆದರೆ ಬಸಿರು
ಅನ್ನದಾತನ ಬದುಕಿನಲಿ ಹಸಿರು.
ಬಡವ ಬಲ್ಲಿದನಿಗೊಂದೇ ಹೊಟ್ಟೆ
ಹಸಿವ ಮಾತ್ರ ಎಲ್ಲರಿಗೂ ಕೊಟ್ಟೆ
ಅದರೊಳು ವಿವಿಧ ಭಕ್ಷ್ಯವ ಇಟ್ಟೆ
ಮೀರಿ ತಿನ್ನಲಾದೀತೇ ಸಿಕ್ಕಾಪಟ್ಟೆ.
ಇದ್ದಾಗ ತುತ್ತು ಅನ್ನವ ನೀಡಿ ನಡೆ
ಇರದಾಗ ಭಗವಂತನ ಬೇಡಿ ಪಡೆ
ನಿನ್ನಲ್ಲಿಹುದ ಧಾನ ಮಾಡಿದೊಡೆ
ನಿನ್ನ ಬದುಕು ಸದಾ ಸಾರ್ಥಕದೆಡೆ.
-ಬ್ಯಾಡನೂರು ವೀರಭದ್ರಪ್ಪ ಶಿವಶರಣ .ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ: 9740199896.
