ಬಾಗಲಕೋಟೆ:
ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ಬಾಗಲಕೋಟೆಯಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ,ಉಪವಾಸ ಸತ್ಯಾಗ್ರಹದ ಹೋರಾಟದ ವೇದಿಕೆಯಲ್ಲಿ ಗದಗ ಜಿಲ್ಲೆಯ ಖ್ಯಾತ ಜನಪದ ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರಿಂದ ರೈತರ ಕ್ರಾಂತಿ ಗೀತೆಗಳು ಮೊಳಗಿದವು.
ಕೃಷ್ಣಾ ಮೇಲ್ದಂಡೆ ಯೋಜನೆಯ ಸಂಪೂರ್ಣ ಕಾಮಗಾರಿಯ ಮುಕ್ತಾಯಕ್ಕೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಇದೆ ,ರೈತರ ಜೀವದ ಮೇಲೆ ಚೆಲ್ಲಾಟವಾಡಿದರೆ ಉಳಿಗಾಲವಿಲ್ಲ ! ಸರಕಾರಗಳು ಮನಗಾಣಬೇಕಿದೆ ಎಂದು ಜನಪದ ಕಲಾವಿದ ಗವಿಶಿದ್ಧಯ್ಯ ಜ. ಹಳ್ಳಿಕೇರಿಮಠ ಹಾಡುಗಳ ಮೂಲಕ ಎಚ್ಚರಿಕೆ ನೀಡಿದರು.
